ಮನೆ ಕಟ್ಟಲು ಪಿಡಿಓ ಅಡ್ಡಿ: ಹೈ ಟೆನ್ಷನ್ ಕಂಬವೇರಿದ ರೈತ

ಮನೆ ಕಟ್ಟಲು ಪಿಡಿಓ ಅಧಿಕಾರಿ ತಡೆ ನೀಡಿದ್ದಾರೆ ಎಂದು ನೊಂದ ರೈತ, ಹೈ ಟೆನ್ಶನ್ ಕಂಬ ಏರಿ ಕುಳಿತ ಘಟನೆ ಗುಬ್ಬಿ ತಾಲೂಕಿನ ಅಡಗೂರು ಗ್ರಾ.ಪಂ. ವ್ಯಾಪ್ತಿಯ ಹಳೆ ಗುಬ್ಬಿ ಗ್ರಾಮದಲ್ಲಿ ನಡೆದಿದೆ. 

Share this Video
  • FB
  • Linkdin
  • Whatsapp

ತುಮಕೂರು: ಮನೆ ಕಟ್ಟಲು ಪಿಡಿಓ ಅಧಿಕಾರಿ ತಡೆ ನೀಡಿದ್ದಾರೆ ಎಂದು ನೊಂದ ರೈತ, ಹೈಟೆನ್ಶನ್ ಕಂಬ ಏರಿ ಕುಳಿತ ಘಟನೆ ಗುಬ್ಬಿ ತಾಲೂಕಿನ ಅಡಗೂರು ಗ್ರಾ.ಪಂ. ವ್ಯಾಪ್ತಿಯ ಹಳೆ ಗುಬ್ಬಿ ಗ್ರಾಮದಲ್ಲಿ ನಡೆದಿದೆ. ಶ್ರೀನಿವಾಸ್ ಎಂಬುವರೇ ಹೀಗೆ ಹೈಟೆನ್ಷನ್‌ ಕಂಬವೇರಿ ಕುಳಿತ ರೈತ. ಶ್ರೀನಿವಾಸ್‌ಗೆ ಪಿಡಿಓ ಬೆದರಿಕೆ ಹಾಕಿದ್ದು, ಸ್ಥಳದಲ್ಲಿದ್ದ ಮನೆಯ ಸಾಮಾಗ್ರಿಗಳನ್ನು ತೆಗೆದುಕೊಂಡು ಹೋಗಿದ್ದಾರೆಂದು ರೈತ ಆರೋಪಿಸಿದ್ದಾರೆ. ಆದರೆ ಸರ್ಕಾರಿ ಜಾಗದಲ್ಲಿ ಮನೆ ಕಟ್ಟಲು ಮುಂದಾಗಿರುವ ಹಿನ್ನೆಲೆಯಲ್ಲಿ ಮನೆ ಕಟ್ಟುವ ಕಾರ್ಯಕ್ಕೆ ಪಿಡಿಒ ತಡೆ ನೀಡಿದ್ದಾರೆ ಎನ್ನಲಾಗಿದೆ. 

Crop Insurance: ರೈತರಿಗೆ 15 ದಿನದಲ್ಲಿ ಖಾಸಗಿ ಬೆಳೆ ವಿಮೆ ಪರಿಹಾರ: ಭಗವಂತ ಖೂಬಾ

Related Video