Crop Insurance: ರೈತರಿಗೆ 15 ದಿನದಲ್ಲಿ ಖಾಸಗಿ ಬೆಳೆ ವಿಮೆ ಪರಿಹಾರ: ಭಗವಂತ ಖೂಬಾ
ರೈತರ ಬೆಳೆ ವಿಮೆಗೆ ಸಂಬಂಧಪಟ್ಟಂತೆ ಖಾಸಗಿ ವಿಮಾ ಕಂಪನಿಗಳು 15 ದಿನದಲ್ಲಿ ಪರಿಹಾರ ವಿತರಣೆ ಮಾಡಬೇಕು ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯ ರಾಜ್ಯ ಸಚಿವ ಭಗವಂತ ಖೂಬಾ ತಾಕೀತು ಮಾಡಿದ್ದಾರೆ.
ಬೆಂಗಳೂರು (ಜ.22): ರೈತರ ಬೆಳೆ ವಿಮೆಗೆ (Farmer Crop Insurance) ಸಂಬಂಧಪಟ್ಟಂತೆ ಖಾಸಗಿ ವಿಮಾ ಕಂಪನಿಗಳು (Private Insurance Companies) 15 ದಿನದಲ್ಲಿ ಪರಿಹಾರ ವಿತರಣೆ ಮಾಡಬೇಕು ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯ ರಾಜ್ಯ ಸಚಿವ ಭಗವಂತ ಖೂಬಾ (Bhagwanth Khuba) ತಾಕೀತು ಮಾಡಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿ ರಾಜ್ಯದ ಕೃಷಿ ಸಚಿವ ಬಿ.ಸಿ.ಪಾಟೀಲ್ (B.C.Patil) ಜತೆಗೂಡಿ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ (Pradhan Mantri Fasal Bima Yojana) ಸೇರಿದಂತೆ ಇತರೆ ವಿಚಾರಗಳ ಕುರಿತು ಕೃಷಿ ಇಲಾಖೆ ಅಧಿಕಾರಿಗಳ ಜತೆ ಸಭೆ ನಡೆಸಿ ನಡೆಸಿದರು. ಈ ವೇಳೆ ರೈತರಿಗೆ ಬೆಳೆ ವಿಮೆ ಪರಿಹಾರ ನೀಡುವ ವಿಚಾರ ಸಂಬಂಧ ಚರ್ಚಿಸಿದರು. ಸರ್ಕಾರಿ ವಿಮಾ ಕಂಪನಿಗಳು ಸರಿಯಾದ ಸಮಯಕ್ಕೆ ರೈತರಿಗೆ ಬೆಳೆ ವಿಮೆ ನೀಡಲು ಸಾಧ್ಯವಾಗುತ್ತದೆ ಎಂದ ಮೇಲೆ ಖಾಸಗಿ ವಿಮಾ ಕಂಪನಿಗಳು ಸರಿಯಾಗಿ ವಿಮೆ ಪಾವತಿಸಲು ಯಾಕೆ ಸಾಧ್ಯವಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.
Crop Insurance for Farmers: 15 ದಿನದೊಳಗೆ ರೈತರಿಗೆ ಬೆಳೆ ವಿಮೆ
ರೈತರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ವಿಮಾ ಪರಿಹಾರ ಕಂಪನಿಗಳ ವಿಷಯದಲ್ಲಾಗಲಿ, ಬೇರೆ ಯಾವುದೇ ವಿಚಾರದಲ್ಲಾಗಲಿ ಯಾವುದೇ ರೀತಿಯ ರಾಜಿಯಾಗುವ ಪ್ರಶ್ನೆಯೇ ಇಲ್ಲ. ರೈತರ ಕಾಳಜಿಯೇ ಪ್ರಮುಖ ಗುರಿ. ಖಾಸಗಿ ವಿಮೆ ಕಂಪನಿಗಳು ಸರಿಯಾದ ಸಮಯಕ್ಕೆ ರೈತರಿಗೆ ಬೆಳೆ ವಿಮೆಯನ್ನು ಪಾವತಿಸಬೇಕು. 15 ದಿನದಲ್ಲಿ ಖಾಸಗಿ ವಿಮಾ ಕಂಪನಿಗಳು ಪರಿಹಾರವನ್ನು ವಿತರಿಸಬೇಕು. ಕೇವಲ ಕಾಗದ ಮೇಲಿನ ಅಂಕಿ-ಅಂಶಗಳಿಂದ ರೈತರಿಗೆ ನ್ಯಾಯ ಒದಗಿಸಲು ಸಾಧ್ಯವಿಲ್ಲ. ಸರ್ಕಾರಿ ವಿಮೆ ಕಂಪನಿಗಳು ನ್ಯಾಯ ಒದಗಿಸುತ್ತಿವೆ. ಖಾಸಗಿ ಕಂಪನಿಗಳು ಕೇವಲ ಅಂಕಿ-ಸಂಖ್ಯೆಯನ್ನು ಮಾತ್ರ ಅಧಿಕಾರಿಗಳಿಗೆ ತೋರಿಸುತ್ತವೆ ಎಂದು ಖಾಸಗಿ ವಿಮೆ ಕಂಪನಿಗಳ ವಿರುದ್ಧ ಕಿಡಿಕಾರಿದರು.
ಈ ಹಿಂದೆಯೇ ರೈತ ಸಂಪರ್ಕ ಕೇಂದ್ರದಲ್ಲಿ ವಿಮಾ ಕಂಪನಿಗಳು ಕಚೇರಿಗಳನ್ನು ತೆರೆಯಬೇಕೆಂದು ಸೂಚಿಸಲಾಗಿತ್ತು. ಆದರೆ, ಇದು ಕೇವಲ ಸೂಚನೆಯಾಗಿದ್ದು, ಕಾರ್ಯಗತವಾಗಿಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಕೇಂದ್ರ ಸಚಿವರು, ರೈತರ ಪರವಾಗಿ ಅಧಿಕಾರಿಗಳು ಇರಬೇಕು. ಜಿಲ್ಲೆಯ ಕೃಷಿ ಅಧಿಕಾರಿಗಳಲ್ಲಿ ಪರಸ್ಪರ ಸಮನ್ವಯತೆ ಇರಬೇಕು. ವಿಮಾ ಇಲಾಖೆಯಲ್ಲಿ ಬೆಳೆ ವಿಮೆಗೆ ನೋಂದಣಿಯಾಗಿರುವ ಜಿಲ್ಲಾವಾರು ಪ್ರದೇಶ, ಬೆಳೆಗಳ ಬಗ್ಗೆ ರೈತರ ಮಾಹಿತಿ ಪಡೆದು ಸಾಂಖ್ಯಿಕ ಇಲಾಖೆಯ ಅಂಕಿ-ಅಂಶಗಳ ಜತೆ ಪರಿಶೀಲನೆ ನಡೆಸಿ ಒಂದು ವಾರದಲ್ಲಿ ವರದಿ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
Crop Insurance: ವಿಮೆ ಮಾಡಿಸುವ ಮುನ್ನವೇ ಬೆಳೆ ಹಾನಿ..!
ಇದೇ ವೇಳೆ ಕೃಷಿ ಸಚಿವರು ಕೇಂದ್ರ ಸಚಿವರಿಗೆ ಬೆಲೆ ಭದ್ರತೆ ಕುರಿತು ಮನವಿ ಸಲ್ಲಿಸಿದರು. ಸದ್ಯ ರಾಜ್ಯದಲ್ಲಿ 6.12 ಲಕ್ಷ ಟನ್ ವಿವಿಧ ಗ್ರೇಡ್‌ಗಳ ರಸಗೊಬ್ಬರ ದಾಸ್ತಾನಿದ್ದು, 2022ರ ಮುಂಗಾರಿಗೆ 26.5 ಲಕ್ಷ ಟನ್ ಬೇಡಿಕೆ ಇರುವುದಾಗಿ ಅಂದಾಜಿಸಲಾಗಿದೆ. ಅಗತ್ಯ ಇರುವ ರಸಗೊಬ್ಬರದ ಸರಬರಾಜು ಮತ್ತು ಮೂರು ಲಕ್ಷ ಟನ್ ವಿವಿಧ ರಸಗೊಬ್ಬರಗಳನ್ನು ದಾಸ್ತಾನಾಗಿ ಶೇಖರಣೆ ಮಾಡಲು ತೀರ್ಮಾನಿಸಲಾಗಿದೆ. ಇದರಿಂದ ಮುಂದಿನ ದಿನದಲ್ಲಿ ಆಗಬಹುದಾದ ಬೆಲೆ ಏರಿಳಿತಕ್ಕೆ ರಕ್ಷಣೆ ನೀಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.