ರಾಯಚೂರಿನಲ್ಲಿ ನಕಲಿ ಹತ್ತಿ ಬೀಜ ಮಾರಾಟ: ಬೆಳೆದು ನಿಂತ ಗಿಡಗಳಿಗೆ ಆಗದ ಹೂ-ಕಾಯಿ
ರಾಯಚೂರು ಜಿಲ್ಲೆಯಲ್ಲಿ ಪ್ರತಿಷ್ಠಿತ ಕಂಪನಿ ಹೆಸರಿನಲ್ಲಿ ನಕಲಿ ಬೀಜ ಮಾರಾಟ ಮಾಡಲಾಗಿದ್ದು, ರೈತ ಕಂಗಾಲಾಗಿದ್ದಾನೆ.
ಭರವಸೆ ಮತ್ತು ಚೀತಾ ಕಂಪನಿಯ ಹೆಸರಿನಲ್ಲಿ ನಕಲಿ ಬೀಜ ಮಾರಾಟದ ಶಂಕೆ ವ್ಯಕ್ತವಾಗಿದ್ದು, ರಾಯಚೂರು ಜಿಲ್ಲೆ ದೇವದುರ್ಗ ತಾ. ಮಾತಪಳ್ಳಿ ಗ್ರಾಮದ ರೈತ ಈಗ ಪರದಾಡುತ್ತಿದ್ದಾನೆ. ಪ್ರತಿಷ್ಠಿತ ಕಂಪನಿ ಹೆಸರಿನ ಬೀಜವೆಂದು ತಂದು ಬಿತ್ತನೆ ಮಾಡಿದ ರೈತ ಈಗ ಕಂಗಾಲಾಗಿದ್ದು, 120 ದಿನಗಳ ಬಳಿಕ ನಕಲಿ ಬೀಜದ ನಿಜ ಬಣ್ಣ ಬಯಲಾಗಿದೆ. ಬೆಳೆದು ನಿಂತ ಹತ್ತಿಗಿಡಗಳಿಗೆ ಹೂ- ಕಾಯಿ ಆಗುತ್ತಿಲ್ಲ. ರೈತ ಶಿವರಾಜ್ 7 ಎಕರೆ 10 ಗುಂಟೆ ಜಮೀನಿನಲ್ಲಿ ಬೆಳೆದ ಹತ್ತಿ ಬೆಳೆಗೆ, ಗೊಬ್ಬರ ಮತ್ತು ಔಷಧಿ ಸಿಂಪಡಣೆ ಮಾಡಿದ್ರೂ ಹೂ-ಕಾಯಿಗಳು ಬರುತ್ತಿಲ್ಲ. ದೇವದುರ್ಗ ಪಟ್ಟಣದ ಆರ್ಯನ್ ಆಗ್ರೋ ಏಜೇನ್ಸಿ ಹತ್ತಿ ಬೀಜ ನೀಡಿದ್ದು, ಹೂ- ಕಾಯಿ ಬಂದಿಲ್ಲವೆಂದು ರೈತ ಹೇಳಿದ್ರೆ ಅಂಗಡಿ ಮಾಲೀಕರು ಕ್ಯಾರೆ ಅನ್ನುತ್ತಿಲ್ಲ. ಸಾಲ ಮಾಡಿ ಸಾವಿರಾರು ರೂ. ಖರ್ಚು ಮಾಡಿದ ರೈತ, ಅತ್ತ ಬೆಳೆಯೂ ಇಲ್ಲದೆ ಇತ್ತ ಹಣವೂ ಇಲ್ಲದೆ ಪರದಾಟ ನಡೆಸಿದ್ದಾನೆ.
ಮಳೆಯಿಂದ ಮನೆ ಕುಸಿತ, ಪರಿಹಾರದಲ್ಲಿ ತಾರತಮ್ಯ: ದಯಾಮರಣಕ್ಕೆ ತಾಯಿ- ಮಗ ಪತ್ರ