ಕೈಕೊಟ್ಟ ಮಳೆ..ಗೋಶಾಲೆಗಳಿಗೂ ಬರ ಸಂಕಷ್ಟ : ಗೋವುಗಳಿಗೆ ಮೇವಿಲ್ಲದೇ ಗೋಪಾಲಕರ ಪರದಾಟ
ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆ ಕರುನಾಡಲ್ಲಿ ಬರದ ಛಾಯೆ ಆವರಿಸಿದೆ. ವಿಜಯಪುರ ಜಿಲ್ಲೆಯಲ್ಲಿ ಬೆಳೆದ ಬೆಳೆ ಕೈಸೇರದೆ ಅನ್ನದಾತರು ಕಂಗಾಲಾಗಿದ್ದಾರೆ. ಇನ್ನೊಂದ್ಕಡೆ ಜಾನುವಾರುಗಳಿಗೂ ಮೇವಿಲ್ಲದೇ ಗೋಪಾಲಕರು ದಿಕ್ಕು ತೋಚದಂತಾಗಿದ್ದಾರೆ. ಗೋವುಗಳ ಮೇಲಿನ ಕಾಳಜಿಯಿಂದಾಗಿ ಖಾಸಗಿ ಗೋಶಾಲೆ ತೆರೆದಿರುವ ಗೋ ಸೇವಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮಳೆ ಇಲ್ಲದೇ ಬಿಳಿ ಜೋಳ-ಗೋವಿನ ಜೋಳ ಫಸಲು ಬಂದಿಲ್ಲ. ಜಾನುವಾರುಗಳಿಗೆ ಉಪಯುಕ್ತವಾಗ್ತಿದ್ದ ಮೇವಿನ(Fodder) ಕೊರತೆ ಉಂಟಾಗಿದೆ. ಮಾರ್ಕೆಟ್ನಲ್ಲೂ ಮೇವಿನ ದರ ಡಬಲ್ ಆಗಿದೆ. ಇದರಿಂದ ಗೋವುಗಳಿಗೆ ಸಮರ್ಪಕ ಮೇವು ಒದಗಿಸಲಾಗ್ತಿಲ್ಲ. ಏನ್ ಮಾಡೋದು ಎಂದು ಗೋಪಾಲಕರು ಗೋಳಾಡುತ್ತಿದ್ದಾರೆ.ವಿಜಯಪುರ(Vijayapura) ಜಿಲ್ಲೆಯಲ್ಲಿ 1 ಸರ್ಕಾರಿ ಗೋಶಾಲೆ(Goshala) ಹಾಗೂ ಮೂರು ಅನುದಾನಿತ ಗೋಶಾಲೆ ಹಾಗೂ ಖಾಸಗಿ ಗೋಶಾಲೆಗಳು ಸೇರಿ 10ಕ್ಕೂ ಅಧಿಕ ಗೋಶಾಲೆಗಳಿವೆ. ಪ್ರತಿ ಖಾಸಗಿ ಗೋಶಾಲೆಗಳಲ್ಲಿ 20ಕ್ಕೂ ಅಧಿಕ ಗೋವುಗಳಿವೆ. ಸರ್ಕಾರಿ ಗೋಶಾಲೆಗಳ ಜೊತೆಗೆ ಖಾಸಗಿ ಗೋಶಾಲೆಗಳಿಗು ಸರ್ಕಾರ(Government) ಮೇವು ಪೂರೈಸಬೇಕು. ಹೊರ ರಾಜ್ಯಗಳಿಂದಲಾದ್ರು ಮೇವು ತರಿಸಿ ಗೋವುಗಳ ಹಿತಕಾಯಬೇಕು ಎಂದು ಒತ್ತಾಸುತ್ತಿದ್ದಾರೆ. ಗೋವುಗಳ ಸೇವೆ ಮಾಡಬೇಕು ಎಂದು ಗೋಶಾಲೆ ತೆರೆದವರಿಗೆ ಬರ ಶಾಕ್ ಕೊಟ್ಟಿದೆ. ಹೀಗಾಗಿ ಸರ್ಕಾರ, ಜಿಲ್ಲಾಡಳಿತ ಖಾಸಗಿ ಗೋಶಾಲೆಗಳ ನೆರವಿಗೆ ಮುಂದಾಗಬೇಕಿದೆ.
ಇದನ್ನೂ ವೀಕ್ಷಿಸಿ: ಬೆಂಗಳೂರಿನ ಹೈಟೆಕ್ ಹೆರಿಗೆ ಆಸ್ಪತ್ರೆಗೆ ಬೀಗ: ಯಶವಂತಪುರದ ದೊಡ್ಡ ದವಖಾನೆಯೇ ಮೂಲೆಗುಂಪು