ಬಳ್ಳಾರಿಯಲ್ಲಿ 8 ಜನರ ಇಡಿ ತಂಡದಿಂದ ಶೋಧ! ನಾಗೇಂದ್ರ ಆಪ್ತರ ಮಾಹಿತಿ ಸಂಗ್ರಹಿಸುತ್ತಿರುವ ಇಡಿ

ಬೆಂಗಳೂರಿನ ಇಡಿ ಅಧಿಕಾರಿಗಳಿಂದ ನಾಗೇಂದ್ರ ನಿವಾಸದಲ್ಲಿ ಶೋಧ ನಡೆಸಲಾಗುತ್ತಿದೆ.ನಾಗೇಂದ್ರ ಆಪ್ತರ ಮಾಹಿತಿಯನ್ನು ಇಡಿ ಅಧಿಕಾರಿಗಳು ಸಂಗ್ರಹಿಸುತ್ತಿದ್ದಾರೆ. 
 

First Published Jul 10, 2024, 11:32 AM IST | Last Updated Jul 10, 2024, 11:33 AM IST

ವಾಲ್ಮೀಕಿ ಹಗರಣದ 187 ಕೋಟಿ ಪ್ರಕರಣಕ್ಕೆ (Valmiki Development Corporation scam) ಸಂಬಂಧಿಸಿದಂತೆ ಬಳ್ಳಾರಿಯಲ್ಲಿ(Ballary) 8 ಜನರ ಇಡಿ ತಂಡದಿಂದ ಶೋಧ ನಡೆಸಲಾಗುತ್ತಿದೆ. ಶಾಸಕ ನಾಗೇಂದ್ರ(Nagendra) ಮನೆಯಲ್ಲಿ ಇಡಿ ತಲಾಶ್ ನಡೆಸುತ್ತಿದೆ. ಬೆಂಗಳೂರಿನ ಅಧಿಕಾರಿಗಳಿಂದ ನಾಗೇಂದ್ರ ನಿವಾಸದಲ್ಲಿ ಶೋಧ ನಡೆಸಲಾಗುತ್ತಿದೆ. ಬಳ್ಳಾರಿಯ ನೆಹರು ಕಾಲೋನಿಯಲ್ಲಿ ನಾಗೇಂದ್ರ ಮನೆ ಇದೆ. ನಾಗೇಂದ್ರ ಆಪ್ತರ ಮಾಹಿತಿಯನ್ನು ಇಡಿ ಅಧಿಕಾರಿಗಳು ಸಂಗ್ರಹಿಸುತ್ತಿದ್ದಾರೆ. ನಾಗೇಂದ್ರ ನಿವಾಸದಲ್ಲಿ ದಾಖಲೆ ಪರಿಶೀಲಿಸುತ್ತಿರುವ ಇಡಿ. ಸಿಆರ್‌ಪಿಎಫ್ ಯೋಧರ ಸಹಕಾರದಿಂದ ಇಡಿ ದಾಳಿ ನಡೆದಿದೆ.

ಇದನ್ನೂ ವೀಕ್ಷಿಸಿ:  ಇಡಿ ದಾಳಿಯಿಂದ ಸರ್ಕಾರಕ್ಕೆ ಮುಜುಗರ ಎಂಬ ಪ್ರಶ್ನೆ ಬರಲ್ಲ, ನಾವು ಎಸ್ಐಟಿ ತನಿಖೆಗೆ ನೀಡಿದ್ದೇವೆ: ಡಾ.ಜಿ. ಪರಮೇಶ್ವರ್‌