ಮಳೆಯಿಲ್ಲದೇ ಕಂಗೆಟ್ಟ ಅನ್ನದಾತ: ಕೋಲಾರದಲ್ಲಿ ಆವರಿಸಿದ ಬರದ ಛಾಯೆ !

ಯಾವುದೇ ನದಿ ನಾಲೆಗಳಿಲ್ಲ, ಈ ಬಾರಿ ಸರಿಯಾದ ಮಳೆ ಕಾಣದ ಕೋಲಾರ ಜಿಲ್ಲೆಗೆ ಬರದ ಭೀತಿ ಎದುರಾಗಿದೆ. ಮುಂಗಾರು ಕೈಕೊಟ್ಟಿದ್ದು, ಸದ್ಯ ಕಳೆದ ಒಂದು ತಿಂಗಳಿಂದ ಬೀಳದ ಮಳೆಯಿಂದ ರೈತರು ಬಿತ್ತನೆ ಕಾರ್ಯದಿಂದ ದೂರ ಉಳಿದಿದ್ದಾರೆ. ಬಿತ್ತನೆ ಮಾಡಿರುವ ಬೆಳೆ ಒಣಗಲಾರಂಭಿಸಿದ್ದು, ಜಿಲ್ಲೆಯಲ್ಲಿ ಬರದ ಛಾಯೆ ಆವರಸಿದೆ.
 

Share this Video
  • FB
  • Linkdin
  • Whatsapp

ಕಳೆದೆರಡು ವರ್ಷಗಳಿಂದ ಸಮೃದ್ಧ ಬೆಳೆ ಬೆಳೆದ ಭೂಮಿ(Land) ಬಿರುಕು ಸೆಳೆದಿದೆ. ಬಿಸಿಲ ಝಳದ ಮಧ್ಯೆ ಅನ್ನದಾತ(Farmer) ಮಳೆಗಾಗಿ ಆಗಸದತ್ತ ಮುಖಮಾಡಿ ನೋಡುತ್ತಿದ್ದಾನೆ. ಇದು ಸದ್ಯಕ್ಕೆ ಕೋಲಾರದಲ್ಲಿ ಕಂಡು ಬರುತ್ತಿರೋ ಬರದ(Drought) ಛಾಯೆ. ಮಳೆಯಿಲ್ಲದೇ ಕೋಲಾರ ಜಿಲ್ಲೆಯಲ್ಲಿ ಅನ್ನದಾತ ಕಂಗಾಲಾಗಿದ್ದಾನೆ. ಜುಲೈ ಮೊದಲ ವಾರದಲ್ಲಿ ಮಳೆ ಬೀಳುತ್ತಿದ್ದಂತೆ. ರೈತರು ಖುಷಿಯಲ್ಲಿ ಕೃಷಿ ಕಾರ್ಯ ಆರಂಭಿಸಿದ್ರು. ಒಂದಷ್ಟು ಬಿತ್ತನೆ ಕಾರ್ಯವನ್ನೂ ಮುಗಿಸಿದರು. ಆದ್ರೆ ಆಮೇಲೆ ಕೈಕೊಟ್ಟ ಮಳೆರಾಯ(Rain)ತಿರುಗಿ ಮುಖಮಾಡಿಲ್ಲ. ಕಳೆದೊಂದು ತಿಂಗಳಿನಿಂದ ಮಳೆ ಕೈಕೊಟ್ಟಿದ್ದು, ಬಿತ್ತನೆ ಪ್ರಮಾಣ ಸಹ ತೀವ್ರ ಕುಸಿತ ಕಂಡಿದೆ. ಜಿಲ್ಲೆಯ ಪ್ರಮುಖವಾಗಿ ರಾಗಿ, ತೊಗರಿ, ಎಳ್ಳು, ಜೋಳ, ನೆಲಗಡಲೆಯಂತಹ ದ್ವಿದಳ ಧಾನ್ಯಗಳನ್ನ ಬೆಳೆಯಲಾಗುತ್ತೆ. ಇದುವರೆಗೂ 1 ಲಕ್ಷ 2 ಸಾವಿರ 599 ಹೆಕ್ಟೇರ್ ಪ್ರದೇಶದಲ್ಲಿ ಕೇವಲ 17 ಸಾವಿರದ 627 ಹೆಕ್ಟೇರ್‌ ಬಿತ್ತನೆ ಆಗಿದೆ. ಮಳೆ ಬಂದ್ರೆ ಈಗಲೂ ಬಿತ್ತನೆ ಬೀಜ, ರಸಗೊಬ್ಬರ ವಿತರಣೆಗೆ ಕೃಷಿ ಇಲಾಖೆ ರೆಡಿ ಇದೆ. ಆದ್ರೆ ಮಳೆಯೇ ಬರ್ತಿಲ್ಲ.

ಇದನ್ನೂ ವೀಕ್ಷಿಸಿ: ಪುಷ್ಪಾ 2 ಸೆಟ್‌ನಲ್ಲೇ ವಿಡಿಯೋ ಮಾಡಿದ ‘ಬನ್ನಿ’: ರಾಷ್ಟ್ರಪ್ರಶಸ್ತಿ ವಿಜೇತ ಅಲ್ಲು ಅರ್ಜುನ್ ಮನೆ ನೋಡಿದ್ರಾ ?

Related Video