ಸೂರ್ಯನತ್ತ ‘ಆದಿತ್ಯ ಎಲ್-1’ ಉಡಾವಣೆಗೆ ಕ್ಷಣಗಣನೆ: ಶ್ರೀಹರಿಕೋಟಾದಿಂದ ರಾಕೆಟ್ ಉಡ್ಡಯನ

ಸೂರ್ಯಯಾನಕ್ಕೆ ನಮ್ಮ ವಿಜ್ಞಾನಿಗಳು 10 ವರ್ಷಗಳ ಪರಿಶ್ರಮ ಹಾಕಿ ಕೆಲಸ ಮಾಡಿದ್ದಾರೆ. ಇಂದು ಸೂರ್ಯನತ್ತ ಸವಾರಿ ಮಾಡಲು ಆದಿತ್ಯ ಸಜ್ಜಾಗಿದ್ದಾನೆ. ಈ ಕ್ಷಣವನ್ನು ಕಣ್ತುಂಬಿಕೊಳ್ಳಲು 140 ಕೋಟಿ ಭಾರತೀಯರು ಕಾತುರರಾಗಿದ್ದಾರೆ.

Share this Video
  • FB
  • Linkdin
  • Whatsapp

ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-3 ಯಶಸ್ಸು ಬೆನ್ನಲ್ಲೇ ಸೂರ್ಯಯಾನಕ್ಕೆ ಕ್ಷಣಗಣನೆ ಶುರುವಾಗಿದೆ. ಸೂರ್ಯನ ಅಧ್ಯಯನದ ಸಾಹಸಕ್ಕೆ ಮೊದಲ ಬಾರಿ ಕೈಹಾಕಿರುವ ಇಸ್ರೋ(ISRO) ವಿಜ್ಞಾನಿಗಳು ಎಲ್ಲಾ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಮುಗಿಸಿದ್ದಾರೆ.. ಇನ್ನೇನಿದ್ರೂ ನಭಕ್ಕೆ ಜಿಗಿಯಲು ‘ಆದಿತ್ಯ ಎಲ್-1’(ADITYA-L1) ಸಜ್ಜಾಗಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾ ಬಾಹ್ಯಾಕಾಶ ಕೇಂದ್ರದಿಂದ ಬೆಳಗ್ಗೆ 11.50ಕ್ಕೆ ಆದಿತ್ಯ ಎಲ್-1 ಮಿಷನ್‌ ಹೊತ್ತ PSLV-C57 ರಾಕೆಟ್ ಉಡಾವಣೆಯಾಗಲಿದೆ. ಸೂರ್ಯನ ಅಧ್ಯಯನಕ್ಕೆ ಒಟ್ಟು 7 ಪೆಲೋಡ್‌ಗಳ ಅಳವಡಿಕೆ ಮಾಡಲಾಗಿದೆ. ಅದರಲ್ಲಿ ಮುಖ್ಯವಾದ ಪೆಲೋಡ್ ಅನ್ನು ಬೆಂಗಳೂರಿನ(Bengaluru) IIA ಸಂಸ್ಥೆಯಲ್ಲಿ ತಯಾರು ಮಾಡಲಾಗಿದೆ. ಸೂರ್ಯನ ಅಧ್ಯಯನದ ಡೇಟಾ ಕಂಡುಹಿಡಿಯುವ ಸಾಧನಗಳು ಯೂನಿಕ್ ಆಗಿದ್ದು, ಬೇರೆ ಯಾವುದೇ ದೇಶವೂ ಇಂತಹ ಇನ್ಸ್ಟ್ರುಮೆಂಟ್ ಬಳಸಿಲ್ಲ ಎಂದು IIA ಪ್ರೊಫೆಸರ್ ರವೀಂದ್ರ ಮಾಹಿತಿ ಹಂಚಿಕೊಂಡ್ರು. ಆದಿತ್ಯ ಎಲ್-1 ಯಶಸ್ವಿಯಾಗಲಿ ಎಂದು ಇಸ್ರೋ ಅಧ್ಯಕ್ಷ ಸೋಮನಾಥ್ (S. Somanath)ಹಾಗೂ ವಿಜ್ಞಾನಿಗಳ ತಂಡ ತಿರುಪತಿಗೆ ಭೇಟಿ ನೀಡಿತ್ತು. ತಿಮ್ಮಪ್ಪ ಹಾಗೂ ವೆಂಕಟೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ್ರು.

ಇದನ್ನೂ ವೀಕ್ಷಿಸಿ: ನವೀಶ್ ಶಂಕರ್ 'ಕ್ಷೇತ್ರಪತಿ'ಗೆ ಅನ್ನದಾತರ ಬೆಂಬಲ..! ಸಿನಿಮಾ ನೋಡಲು ಎತ್ತಿನ ಬಂಡಿ ಏರಿ ಬಂದ ರೈತ..!

Related Video