ಜಿ-20 ಸಭೆ: ಹೆಲಿಕಾಪ್ಟರ್‌ನಿಂದ ಲಕ್ಸುರಿ ಕಾರ್ ತನಕ..ಹೇಗಿರಲಿದೆ ಭದ್ರತೆ ?
ದೆಹಲಿಯ ಗಲ್ಲಿ ಗಲ್ಲಿಯಲ್ಲೂ ಅಮೆರಿಕಾ ಪಡೆಯ ಹದ್ದಿನ ಕಣ್ಣು!
ಮೋದಿ-ಬೈಡನ್ ಭೇಟಿಗೆ ಸಿದ್ಧವಾಗಿದೆ ರಾಷ್ಟ್ರ ರಾಜಧಾನಿ..!
ಸಾವಿರ ಕಮಾಂಡೋ.. 300 ಬುಲೆಟ್ ಪ್ರೂಫ್ ಕಾರ್..!
ಅಧ್ಯಕ್ಷನ ರಕ್ಷಣೆಗೆ ಏನೆಲ್ಲಾ ಮಾಡಿದೆ ಗೊತ್ತಾ ಅಮೆರಿಕಾ..?
ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕಾ ಅಧ್ಯಕ್ಷ ಜೋ ಬೈಡನ್(Joe Biden), ಈ ಇಬ್ಬರು ದಿಗ್ಗಜರ ಭೇಟಿಗೆ ರಾಷ್ಟ್ರ ರಾಜಧಾನಿ (Delhi) ಸಜ್ಜಾಗಿದೆ. ಭಾರತಕ್ಕೆ ಬರ್ತಾ ಇರೋದು ಬರೀ ಬೈಡನ್ ಮಾತ್ರವೇ ಅಲ್ಲ, ಅವರ ಜೊತೆಗೆ ಲಗ್ಗೆ ಇಟ್ಟಿದೆ ಅಮೆರಿಕಾದ (America) ಸೀಕ್ರೆಟ್ ಸರ್ವೀಸ್. ಸಾವಿರ ಕಮಾಂಡೋ, 300 ಬುಲೆಟ್ ಪ್ರೂಫ್ ಕಾರ್. ಕಪ್ಪು ಕನ್ನಡಕ ಧರಿಸಿ ಹದ್ದಿನ ಕಣ್ಣಿಟ್ಟು ಕಾಯೋ, ಸ್ಪೆಷಲ್ ಫೋರ್ಸ್, ಎಲ್ಲವೂ ಇಲ್ಲಿದೆ. ಭಾರತಕ್(India)ಕೆ ಭಾರತವೇ ಕಾಯ್ತಾ ಇದ್ದ ಅತ್ಯಂತ ಮಹತ್ವದ ಕ್ಷಣ ಬಂದೇ ಬಿಟ್ಟಿದೆ. ಇದೇ 9 ರಿಂದ ಜಿ20 ಶೃಂಗಸಭೆ ನಡೆಯಲಿದೆ. ಇದರಿಂದ ಭಾರತದ ಪ್ರತಿಷ್ಠೆ ಮತ್ತಷ್ಟು ಹೆಚ್ಚಲಿದೆ. ಭಾರತ, ಅಮೆರಿಕಾ, ರಷ್ಯಾ, ಚೀನಾ, ಜಪಾನ್, ಆಸ್ಟ್ರೇಲಿಯಾ, ಇಟಲಿ, ಜರ್ಮನಿ, ಫ್ರಾನ್ಸ್, ಯುಕೆ, ಕೆನಡಾ,ದಕ್ಷಿಣ ಆಫ್ರಿಕಾ, ದಕ್ಷಿಣ ಕೊರಿಯಾ, ಇಂಡೋನೇಷ್ಯಾ, ಸೌದಿ ಅರೇಬಿಯಾ, ಟರ್ಕಿ, ಮೆಕ್ಸಿಕೋ, ಬ್ರೆಜಿಲ್, ಅರ್ಜೆಂಟೀನಾ ಮತ್ತು ಯುರೋಪಿಯನ್ ಒಕ್ಕೂಟಗಳು ಈ ಗುಂಪಿನಲ್ಲಿವೆ. ಜಿ20 ಸಭೆ(G20 Summit) ಅನ್ನೋದು ಭಾರತದ ತೋಳ್ಬಲ ಪ್ರದರ್ಶಿಸೋಕೆ ಒಂದು ಅವಕಾಶ. ಈ ಬಲಪ್ರದರ್ಶನದ ಹೊತ್ತಲ್ಲಿ, ಜೋ ಬೈಡನ್ ಕೂಡ ಭಾರತಕ್ಕೆ ಬರ್ತಾ ಇದ್ದಾರೆ. ಎಲ್ಲರಿಗಿಂತ ಮೊದಲೇ, ಭಾರತಕ್ಕೆ ಬರೋ ಉತ್ಸಾಹ ತೋರಿಸಿದ್ದು ಬೈಡನ್ ಅವ್ರೇ.. ಈಗ ಬೈಡನ್ ಪತ್ನಿ ಸಮೇತರಾಗಿ ಭಾರತಕ್ಕೆ ಆಗಮಿಸ್ತಾ ಇದಾರೆ.
ಇದನ್ನೂ ವೀಕ್ಷಿಸಿ: ಸನಾತನ ಧರ್ಮದ ವಿರುದ್ಧ ಮುಂದುವರಿದ ಡಿಎಂಕೆ ದಾಳಿ: ಅಂತರ ಕಾಯ್ದುಕೊಳ್ತಾ I.N.D.I.A ಕೂಟ ?