Asianet Suvarna News Asianet Suvarna News

ಡಿ ಗ್ಯಾಂಗ್ ವಿರುದ್ಧ 10 ಕಠಿಣ ಸೆಕ್ಷನ್‌ಗಳು...! ಕೋರ್ಟ್‌ನಲ್ಲಿ ಹೇಗಿತ್ತು ವಾದ-ಪ್ರತಿವಾದ..!

ದರ್ಶನ್‌ಗೆ ಮುಂದುವರೆಯಲಿದೆ ರುಬ್ಬೋ ಪ್ರೋಗ್ರಾಂ 
ದರ್ಶನ್, 3 ಆರೋಪಿಗಳು ಪೊಲೀಸ್ ಕಸ್ಟಡಿಗೆ..!
ಇನ್ನೆರಡು ದಿನ ಪೊಲೀಸ್ ಠಾಣೆಯಲ್ಲೇ ದರ್ಶನ್..!

ಚಿತ್ರದುರ್ಗದ ರೇಣುಕಾಸ್ವಾಮಿಯ ಕೊಲೆ ಕೇಸ್‌ನಲ್ಲಿ(Renukaswamy murder case) ಡಿ ಬ್ಯಾಂಗ್ ಬರೋಬ್ಬರಿ 10 ದಿನ ಪೊಲೀಸ್ ಕಸ್ಟಡಿಯಲ್ಲಿತ್ತು. ಪೊಲೀಸರು ಈ ದರ್ಶನ್(Darshan) ಪಟಾಲಂನನ್ನ ಬೆಂಡ್ ಎತ್ತಿ ಸಾಕಷ್ಟು ಮಾಹಿತಿಗಳನ್ನ ಕಲೆ ಹಾಕಿದ್ರು. ಕೋರ್ಟ್ ಪವಿತ್ರಾ ಗೌಡ ಮತ್ತು ಇನ್ನೂ 12 ಮಂದಿಯನ್ನ ಜೈಲಿಗೆ ಕಳುಹಿಸಿದ್ರೆ, ದರ್ಶನ್ ಅಣ್ಣ ಮತ್ತು ಇನ್ನೂ ಮೂವರನ್ನ ಮತ್ತೆ ರುಬ್ಬಿಸಿಕೊಳ್ಳೋಕೆ ಪೊಲೀಸ್ ಕಸ್ಟಡಿಗೆ(Police custody) ನೀಡಿದೆ. 10 ದಿನಗಳ ನಂತರ ಅಣ್ಣ ಮತ್ತು ಅತ್ತಿಗೆ ಬೇರೆ ಬೇರೆಯಾಗಿದ್ದಾರೆ. ಪವಿತ್ರಾ ಜೈಲು ಕಡೆ ಹೊರಟರೆ, ದರ್ಶನ್ ಅನ್ನಪೂರ್ಣೇಶ್ವರಿ ನಗರ ಠಾಣೆಗೆ ವಾಪಸ್ ಆಗಿದ್ದಾರೆ. ಇನ್ನೂ ದರ್ಶನ್‌ಗೆ ಪೊಲೀಸರು ಮತ್ತೊಂದು ಶಾಕ್ ಕೊಟ್ಟಿದ್ದಾರೆ.ಆ ಶಾಕ್‌ಗೆ ಇಡೀ ದರ್ಶನ್ ಪಟಾಲಂ ಥಂಡಾ ಹೊಡೆದಿದ್ದಾರೆ. 13 ಆರೋಪಿಗಳು ಜೈಲುಪಾಲಾದ್ರೆ. ದರ್ಶನ್ ಮತ್ತು ಇನ್ನೂ ಮೂವರು ಮಂದಿ ಮತ್ತೆ ಠಾಣೆಯ ಸೆಲ್‌ನಲ್ಲೇ ಎರಡು ರಾತ್ರಿ ಕಳೆಯಬೇಕಿದೆ. ಇನ್ನೂ ದರ್ಶನ್ ಮತ್ತು ಆತನ ಪಟಾಲಂ ವಿರುದ್ಧ ಹೆಚ್ಚುವರಿಯಾಗಿ 8 ಸೆಕ್ಷನ್‌ಗಳನ್ನ ಪೊಲೀಸರು ಬುಕ್ ಮಾಡಿದ್ದು, ಮತ್ತಷ್ಟು ಬಿಗಿಯಾಗುವಂತೆ ಮಾಡಿಬಿಟ್ಟಿದ್ದಾರೆ.

ಇದನ್ನೂ ವೀಕ್ಷಿಸಿ:  ದರ್ಶನ್‌ಗೆ ಶುರುವಾಗುತ್ತಾ ಮತ್ತೊಂದು ಸಂಕಷ್ಟ? ಐಟಿ ಕೇಸ್‌ನಲ್ಲಿ ಸಿಲುಕುತ್ತಾರಾ ನಟ ?

Video Top Stories