Asianet Suvarna News Asianet Suvarna News

ಪ್ರವಾಹ ಭೀತಿ.. ಜಾರಕಿಹೊಳಿ ಮಾಡಲಾಗದ ಕೆಲಸವನ್ನು ಡಿಕೆಶಿ ಮಾಡುವರೇ? ರೈತರ ಆಗ್ರಹವೇನು?

ಬೆಳಗಾವಿ ಬಳಿ ಹರಿಯುವ ಬಳ್ಳಾರಿ ನಾಲಾದಿಂದ ರೈತರಿಗೆ ಸಂಕಷ್ಟ ಎದುರಾಗಿದ್ದು, ಪ್ರತಿ ವರ್ಷ ಮಳೆಗಾಲ ಸಂದರ್ಭದಲ್ಲಿ ಬಳ್ಳಾರಿ ನಾಲಾದಲ್ಲಿ ಪ್ರವಾಹ ಉಂಟಾಗಲಿದೆ. ಈ ನಡುವೆ ಜಾರಕಿಹೊಳಿಗೆ ಸಾಧ್ಯವಾಗದನ್ನು ಡಿಕೆಶಿ ಸಾಧಿಸುವರೇ ಎನ್ನುವ ಪ್ರಶ್ನೆ ರೈತರಲ್ಲಿ ಮೂಡಿದೆ.

ರಾಜ್ಯ ಸರ್ಕಾರ ಬಳ್ಳಾರಿ ನಾಲಾ (Ballari Canal) ಅಭಿವೃದ್ಧಿಗೆ ಮುಂದಾಗದೆ ಇರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಬೆಳಗಾವಿ(Belagavi) ಬಳಿ ಹರಿಯುವ ಬಳ್ಳಾರಿ ನಾಲಾದಿಂದ ರೈತರಿಗೆ(Farmers) ಸಂಕಷ್ಟ ಎದುರಾಗಿದ್ದು, ಪ್ರತಿ ವರ್ಷ ಮಳೆಗಾಲ ಸಂದರ್ಭದಲ್ಲಿ ಬಳ್ಳಾರಿ ನಾಲಾದಲ್ಲಿ ಪ್ರವಾಹ ಉಂಟಾಗಲಿದೆ. ಈ ನಡುವೆ ಜಾರಕಿಹೊಳಿಗೆ ಸಾಧ್ಯವಾಗದನ್ನು ಡಿ ಕೆ ಶಿವಕುಮಾರ್(DK Shivakumar) ಸಾಧಿಸುವರೇ ಎನ್ನುವ ಪ್ರಶ್ನೆ ತಲೆ ಎತ್ತಿದೆ. ಈ ಮೊದಲು ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ರೈತರಿಗೆ ಲಕ್ಷಾಂತರ ರೂ. ನಷ್ಟ ಆಗಿದ್ದು, ಬೆಳಗಾವಿ ದಕ್ಷಿಣ ಭಾಗದ ಅಭಿವೃದ್ಧಿಗೆ ಬಳ್ಳಾರಿ ನಾಲಾ ಶಾಪವಾಗಿ ಪರಿಣಮಿಸಿದೆ. 
 
ಯಳ್ಳೂರು, ಧಾಮನೆ, ವಡಗಾವಿ ರೈತರ ಜಮೀನು ಮುಳುಗುಡೆ ಭೀತಿ ಎದುರಿಸುತ್ತಿದ್ದು, ಭಾಸುಮತಿ ಭತ್ತ, ತರಕಾರಿ, ಬೆಳೆಕಾಳು ಬೆಳೆಗಳು ಹಾನಿಯಾಗಿವೆ. ಇದು ಪ್ರತಿ ವರ್ಷ ನಡೆಯುತ್ತಿದ್ದು, ಬಳ್ಳಾರಿ ನಾಲಾ ಅಭಿವೃದ್ಧಿ ಪಡಿಸಬೇಕು ಎಂದು ರೈತರು ಆಗ್ರಹ ಮಾಡುತ್ತಲೇ ಬರುತ್ತಿದ್ದಾರೆ. ರಮೇಶ್‌ ಜಾರಕಿಹೊಳಿ (Ramesh Jarakiholi) ಸಚಿವರಾಗಿದ್ದಾಗಲೂ ಈ ಕೆಲಸ ಆಗಿಲ್ಲ, ಆದರೆ ಜಲಸಂಪನ್ಮೂಲ ಸಚಿವ ಡಿಕೆಶಿ ಈ ಕಾರ್ಯ ಮಾಡಬಹುದು ಎಂಬ ಆಶಾಭಾವನೆಯನ್ನು ರೈತರು ಹೊರಹಾಕಿದ್ದಾರೆ.

ಇದನ್ನೂ ವೀಕ್ಷಿಸಿ:  ಹೆಚ್‌ಡಿಡಿ, ಕಾರ್ಯಕರ್ತರ ಮೇಲೆ ಗೌರವ ಇದ್ದರೆ, ಪ್ರಜ್ವಲ್ ತಕ್ಷಣ ಬಂದು ತನಿಖೆ ಎದುರಿಸಲಿ: ಹೆಚ್‌ಡಿಕೆ