ಹೆಚ್‌ಡಿಡಿ, ಕಾರ್ಯಕರ್ತರ ಮೇಲೆ ಗೌರವ ಇದ್ದರೆ, ಪ್ರಜ್ವಲ್ ತಕ್ಷಣ ಬಂದು ತನಿಖೆ ಎದುರಿಸಲಿ: ಹೆಚ್‌ಡಿಕೆ

ಎಷ್ಟು ದಿನ ಈ ಆಟ. ಯಾವತ್ತಿದ್ರೂ ಬರಲೇಬೇಕು ಪ್ರಜ್ವಲ್ ತಕ್ಷಣ ಬಂದು ತನಿಖೆ ಎದುರಿಸಲಿ ಎಂದು ಪ್ರಜ್ವಲ್‌ಗೆ ಮಾಜಿ ಸಿಎಂ ಕುಮಾರಸ್ವಾಮಿ ಮನವಿ ಮಾಡಿದ್ದಾರೆ.

First Published May 20, 2024, 6:10 PM IST | Last Updated May 20, 2024, 6:11 PM IST

ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ(Prajwal Revanna obscene video case) ಸಂಬಂಧಿಸಿದಂತೆ ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ(HD Kumaraswamy) ಮಾತನಾಡಿ, ವಿಚಾರಣೆಗೆ ಹಾಜರಾಗಲು ಪ್ರಜ್ವಲ್‌ಗೆ ಮನವಿ  ಮಾಡಿದ್ದಾರೆ. ನಾನು ಮಾಧ್ಯಮಗಳ ಮೂಲಕ ಮನವಿ ಮಾಡ್ತೀನಿ. ಪ್ರಜ್ವಲ್( Prajwal Revanna) ಬೆಳೆಯಲು ರಾಜಕೀಯ ಶಕ್ತಿಧಾರೆ ಎರೆದಿದ್ದೇವೆ. HDD ಮೇಲೆ, ಕಾರ್ಯಕರ್ತರ ಮೇಲೆ ಗೌರವ ಇದ್ದರೆ. ಪ್ರಜ್ವಲ್ ತಕ್ಷಣ ಬಂದು ತನಿಖೆ ಎದುರಿಸಲಿ ಎಂದು ಪ್ರಜ್ವಲ್‌ಗೆ ಮಾಜಿ ಸಿಎಂ ಕುಮಾರಸ್ವಾಮಿ ಮನವಿ ಮಾಡಿದ್ದಾರೆ. ಎಷ್ಟು ದಿನ ಈ ಆಟ. ಯಾವತ್ತಿದ್ರೂ ಬರಲೇಬೇಕು. ಪೊಲೀಸರು ಯಾಕೆ ಹಿಡಿದು ತರಬೇಕು.. ಅವನೇ ಹಾಜರಾಗಲಿ. ಪ್ರಜ್ವಲ್ ತಾನಾಗಿಯೇ ಬಂದು ತನಿಖೆಗೆ ಸಹಕರಿಸಲಿ. ನಮ್ಮ ಸುತ್ತಮುತ್ತಲಿನ 40 ಜನರ ಫೋನ್ ಟ್ಯಾಪ್‌ ಮಾಡ್ತಿದ್ದಾರೆ. ದೇವೇಗೌಡರಿಗೆ(HD Devegowda) ಈ ವಿಷ್ಯದಲ್ಲಿ ಬಹಳ ನೋವಾಗಿದೆ. ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ಕೊಡೋಕು ಮುಂದಾಗಿದ್ರು. ಅವರು ರಾಜೀನಾಮೆ ನೀಡೋದನ್ನು ನಾನೇ ತಡೆದಿದ್ದೇನೆ. ಯಾವ ಮುಖ ಇಟ್ಟುಕೊಂಡು ರಾಜ್ಯಸಭೆಗೆ ಹೋಗಲಿ ಅಂತಿದ್ದಾರೆ. ಈ ಮಾತನ್ನು ನಮ್ಮ ತಂದೆಯ ಬಳಿ ಹೇಳಿಸಬೇಕು ಅಂತಿದ್ದೆ. ಆದ್ರಿವತ್ತು ನಾನೇ ಎಮೋಷನಲ್ ಆಗಿ ಈ ವಿಷ್ಯ ಹೇಳಿಬಿಟ್ಟೆ ಎಂದು ಹೇಳುವ ಮೂಲಕ ಪ್ರಜ್ವಲ್ ವಿರುದ್ಧ  ಬೇಸರವನ್ನು  ಕುಮಾರಸ್ವಾಮಿ ಹೊರಹಾಕಿದ್ದಾರೆ.

ಇದನ್ನೂ ವೀಕ್ಷಿಸಿ:  ಶ್ರೀ ರಾಮಮಂದಿರ ಪರವೋ..? ವಿರೋಧವೋ..? ಖರ್ಗೆ ಹೇಳಿದ್ದೇನು..? ಕಾಂಗ್ರೆಸ್‌ಗೆ ಬಿಸಿತುಪ್ಪವಾದ ಪ್ರಭು ಶ್ರೀರಾಮ..!

Video Top Stories