ದೀಪಾವಳಿ ವಿಭಿನ್ನವಾಗಿ ಆಚರಿಸುವ ಗೌಳಿ ಸಮುದಾಯ: ಬಲಿಪಾಡ್ಯಮಿ ದಿನ ಎಮ್ಮೆ, ಕೋಣ ಸಿಂಗರಿಸಿ ಸಂಭ್ರಮ
ಕುಂದಾನಗರಿ ಬೆಳಗಾವಿ ಬಹುಭಾಷಿಕರಿಗೆ ನೆಲೆ ಕೊಟ್ಟಿರುವ ಜಿಲ್ಲೆ. ಈ ಕಾರಣಕ್ಕೆ ಬೆಳಗಾವಿಯಲ್ಲಿ ಬಹುಭಾಷಾ ಸಂಸ್ಕೃತಿಯನ್ನ ಕಾಣಬಹುದು. ಯಾವುದೇ ಹಬ್ಬ ಇದ್ದರೂ ವಿಭಿನ್ನವಾಗಿ ಆಚರಿಸಲಾಗುತ್ತೆ.
ಬೆಳಗಾವಿಯ(Belagavi) ಗೌಳಿ ಸಮುದಾಯ ದೀಪಾವಳಿ ಹಬ್ಬವನ್ನು ವಿಭಿನ್ನವಾಗಿ ಆಚರಿಸುತ್ತದೆ. ಪ್ರತಿ ವರ್ಷದ ಬಲಿಪಾಢ್ಯಮಿ(Balipadyami) ದಿನ ಎಮ್ಮೆ–ಕೋಣಗಳನ್ನು ಸಿಂಗರಿಸಿ ಸಂಭ್ರಮಿಸುವುದೇ ಇಲ್ಲಿನ ವಿಶಿಷ್ಟ ಆಚರಣೆ. ಬದುಕಿನ ಅವಿಭಾಜ್ಯ ಅಂಗವಾದ ಎಮ್ಮೆಗಳು ಜೀವನಪೂರ್ತಿ ತಮ್ಮನ್ನು ಸಾಕುತ್ವೆ. ಅವುಗಳಿಗೆ ಕೃತಜ್ಞತೆ ಸಲ್ಲಿಸಲು ಪಾಡ್ಯದಂದು ಈ ಹಬ್ಬ ಆಚರಿಸಲಾಗುತ್ತೆ. ಇಲ್ಲಿನ ಕ್ಯಾಂಪ್ ಪ್ರದೇಶ, ಟಿಳಕವಾಡಿ, ಮಂಗಳವಾರ ಪೇಟೆ, ಚವಾಟ ಗಲ್ಲಿ, ಸರ್ದಾರ್ ಮೈದಾನ ಸೇರಿ ಹಲವಡೆ ಎಮ್ಮೆಗಳ ಓಟದ ಸ್ಪರ್ಧೆಯನ್ನು ಆಚರಿಸ್ತಾರೆ. ಇನ್ನು ಬಲಿಪಾಡ್ಯಮಿ ದಿನ ಮನೆಯ ಅಂಗಳದಲ್ಲಿ ಕಿಚ್ಚು ಹಾಯಿಸುವುದೇ ತಡ, ಯುವಕರು ಎಮ್ಮೆಗಳ ಮುಂದೆ ಓಡಲು ಶುರು ಮಾಡುತ್ತಾರೆ. ಅವರನ್ನು ಬೆನ್ನಟ್ಟಿ ಎಮ್ಮೆಗಳೂ ಓಡುತ್ವೆ. ಎಮ್ಮೆಗಳ ಕಾಲಿಗೆ ಕಟ್ಟಿದ ಗೆಜ್ಜೆ, ಕೊರಳಿಗೆ ಹಾಕಿದ ಕವಡೆಯ ಶಬ್ಧ ಕೇಳುವುದೇ ಇಲ್ಲಿನ ಜನಕ್ಕೆ ಆನಂದ . ಸಿಳ್ಳೆ, ಚಪ್ಪಾಳೆ, ಕೇಕೆ ಹಾಕಿದಾಗ ಗೌಳಿಗರಲ್ಲಿ ಮತ್ತಷ್ಟು ಹುಮ್ಮಸ್ಸು ಮೂಡುತ್ತೆ. ಬಹುಭಾಷಾ ಸಂಸ್ಕೃತಿ ಹೊಂದಿರುವ ಬೆಳಗಾವಿಯಲ್ಲಿ ಗುಜರಾತಿಗಳು, ಬಂಗಾಳಿಗಳು, ಬಿಹಾರಿಗಳು ಸೇರಿದಂತೆ ಉತ್ತರ ಭಾರತೀಯರು ಸಾವಿರಾರು ಸಂಖ್ಯೆಯಲ್ಲಿ ನೆಲೆಸಿದ್ದಾರೆ. ದೀಪಾವಳಿಯಲ್ಲಿ ಸ್ಥಳೀಯ ಧಾರ್ಮಿಕ ಪದ್ಧತಿ ಅನುಸರಿಸುವ ಜತೆಗೆ, ತಮ್ಮ ನಾಡಿನ ಸಂಸ್ಕೃತಿಯನ್ನೂ ಅನಾವರಣಗೊಳಿಸುತ್ತಾರೆ.
ಇದನ್ನೂ ವೀಕ್ಷಿಸಿ: ಬೆಳಕಿನ ಹಬ್ಬ ದೀಪಾವಳಿಗೆ ರಾಜ್ಯಾದ್ಯಂತ ಸಿದ್ಧತೆ: ಬೆಂಗಳೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸಿದ್ಧತೆ