ಶಾಸಕರ ಕುರ್ಚಿ ಕಿತ್ತಾಟಕ್ಕೆ ಎಸ್‌ಪಿ, ಡಿಸಿ, ಸಿಇಓ ಹೈರಾಣು: ಕೆಡಿಪಿ ಸಭೆ ಮೇಲೆ ಕೂರುವುದು ತಪ್ಪು ಎಂದು ಸಿ.ಟಿ.ರವಿ ಆಕ್ಷೇಪ

ಶಾಸಕರು ಜಿಲ್ಲಾ ಮಟ್ಟದ ಕೆಡಿಪಿ ಸಭೆಯ ಮೇಲೆ ಕೂರುವುದು ತಪ್ಪು ಎಂದು ಸಿ.ಟಿ.ರವಿ ಆಕ್ಷೇಪ ವ್ಯಕ್ತಪಡಿಸಿದರು.
 

First Published Jul 12, 2024, 1:39 PM IST | Last Updated Jul 12, 2024, 1:46 PM IST

ಚಿಕ್ಕಮಗಳೂರು: ಶಾಸಕರ ಕುರ್ಚಿ ಕಿತ್ತಾಟಕ್ಕೆ ಎಸ್‌ಪಿ, ಡಿಸಿ, ಸಿಇಓ ಹೈರಾಣಾಗಿರುವ ಘಟನೆ ಜಿಲ್ಲೆಯ ಜಿಲ್ಲಾ ಮಟ್ಟದ ಕೆಡಿಪಿ ಸಭೆಯಲ್ಲಿ(KDP meeting) ನಡೆದಿದೆ. ಶಾಸಕರು (MLAs) ಮೇಲೆ ಕೂರುವುದು ತಪ್ಪು ಎಂದು ಸಿ.ಟಿ.ರವಿ (CT Ravi) ಆಕ್ಷೇಪ ವ್ಯಕ್ತಪಡಿಸಿದರು. ಪರಿಷತ್ ಸದಸ್ಯರಾದ ಸಿ.ಟಿ ರವಿ, ಎಸ್.ಎಲ್ ಭೋಜೇಗೌಡರಿಂದ ಆಕ್ರೋಶ ವ್ಯಕ್ತವಾಯಿತು. ಮೇಲೆ ಕೂತೇ ಕೂರುತ್ತೇನೆ ಎಂದು ಕಡೂರು ಕಾಂಗ್ರೆಸ್ ಶಾಸಕ ಆನಂದ್(Congress MLA Anand) ಪಟ್ಟು ಹಿಡಿದಿದ್ದರು. ಪರಿಷತ್ ಸದಸ್ಯ ಸ್ಥಾನ ಸಾಂವಿಧಾನಿಕ ಹುದ್ದೆಯೇ ಅಲ್ಲವೆಂದ ಶಾಸಕ ಆನಂದ್, ಬಳಿಕ ಅವರ ಮಾತಿಗೆ ಸಿ.ಟಿ.ರವಿ, ಎಸ್.ಎಲ್. ಭೋಜೇಗೌಡ  ಕೆಂಡಮಂಡಲವಾದರು. ಬಳಿಕ ಎಲ್ಲರನ್ನೂ ಸಮಾಧಾನ ಮಾಡಲು ಸಚಿವ ಕೆ.ಜೆ.ಜಾರ್ಜ್ ಮುಂದಾದರು. ಜಿಲ್ಲಾ ಪಂಚಾಯ್ತಿ ಅಬ್ದುಲ್ ನಜೀರ್ ಸಭಾಂಗಣದಲ್ಲಿ ಕೆಡಿಪಿ ಸಭೆ ನಡೆಯಿತು.

ಇದನ್ನೂ ವೀಕ್ಷಿಸಿ:  ನನ್ನನ್ನು ಸುಮ್ಮನೆ ಕರೆದುಕೊಂಡು ಬಂದಿದ್ದಾರೆ,ಈ ಪ್ರಕರಣದ ಬಗ್ಗೆ ನನಗೇನೂ ಗೊತ್ತಿಲ್ಲ: ಮಾಜಿ ಸಚಿವ ನಾಗೇಂದ್ರ

Video Top Stories