Covid 19 Spike: ಕೊಪ್ಪಳದ 9 ಶಾಲೆಗಳಿಗೆ ರಜೆ ಘೋಷಿಸಿದ ಜಿಲ್ಲಾಡಳಿತ!
*ಕೊಪ್ಪಳ ಜಿಲ್ಲೆಯಲ್ಲಿ ಕೊರೋನಾ ಮಹಾಮಾರಿ ಸ್ಪೋಟ
* 9 ಶಾಲೆಗಳಿಗೆ ರಜೆ ಘೋಷಿಸಿದ ಜಿಲ್ಲಾಡಳಿತ
*100ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕೋವಿಡ್ 19
ಕೊಪ್ಪಳ (ಜ. 25): ರಾಜ್ಯದಲ್ಲಿ ಕೊರೋನಾ(Covid 19)ಸೋಂಕು ತೀವ್ರಗೊಳ್ಳುತ್ತಿದ್ದು, 3ನೇ ಅಲೆಯಲ್ಲಿಯೇ ಅತಿ ಹೆಚ್ಚು 32 ಸಾವು, ಅತಿ ಹೆಚ್ಚು ಪಾಸಿಟಿವಿಟಿ ದರ ಶೇ.33 ಸೋಮವಾರ ದಾಖಲಾಗಿದೆ. ಅಲ್ಲದೆ, ಬರೋಬ್ಬರಿ 16 ಜಿಲ್ಲೆಗಳಲ್ಲಿ ಸೋಂಕಿತರ ಸಾವು ವರದಿಯಾಗಿದೆ. ಈ ಮಧ್ಯೆ ಕೊಪ್ಪಳದಲ್ಲಿ (Koppal) ವಿವಿಧ ಶಾಲಾ ಕಾಲೇಜುಗಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಬೆನ್ನಲ್ಲೇ ಜಿಲ್ಲೆಯ 9 ಶಾಲೆಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ. 100ಕ್ಕೂ ಹೆಚ್ಚು ವಿದ್ಯಾರ್ಥಿಗಳಲ್ಲಿ ಕೊರೋನಾ ಸೋಂಕು ದೃಡಪಟ್ಟಿದೆ.
ಇದನ್ನೂ ಓದಿ: Corona Cases 3ನೇ ಅಲೆಯಲ್ಲೇ ಗರಿಷ್ಠ: ಕರ್ನಾಟಕದಲ್ಲಿ 32 ಸಾವು, ಶೇ.33 ಪಾಸಿಟಿವಿಟಿ!
ಜನವರಿ 22ರಿಂದ ಜನವರಿ 26ರ ವರೆಗೆ 9 ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಕೋವಿಡ್ ಸೋಂಕು ದೃಡಪಟ್ಟ ವಿದ್ಯಾರ್ಥಿಗಳನ್ನು ನಗರದ ಹೊರವಲಯದಲ್ಲಿರುವ ಕೋವಿಡ್ ಕೇರ್ ಸೆಂಟರ್‌ಗೆ ದಾಖಲಿಸಲಾಗಿದೆ. ಇನ್ನು ರಾಜ್ಯದಲ್ಲಿ(Karnataka) ಸೋಮವಾರ 46,426 ಮಂದಿ ಸೋಂಕಿತರಾಗಿದ್ದು, ಹಾವೇರಿಯಲ್ಲಿ(Haveri) 10 ವರ್ಷದ ಬಾಲಕಿ ಸೇರಿ 32 ಸೋಂಕಿತರು ಸಾವಿಗೀಡಾಗಿದ್ದಾರೆ. 41,703 ಮಂದಿ ಗುಣಮುಖರಾಗಿದ್ದಾರೆ. ಸದ್ಯ 3.16 ಲಕ್ಷ ಸೋಂಕಿತರು ಆಸ್ಪತ್ರೆ/ಮನೆಯಲ್ಲಿ ಚಿಕಿತ್ಸೆ, ಆರೈಕೆಯಲ್ಲಿದ್ದಾರೆ.