ಧಾರವಾಡ: ಡಿಸಿ ಕಚೇರಿ ಮುಂದೆ ಜಿಮ್ ಮಾಡಿ ಯುವಕರ ಪ್ರತಿಭಟನೆ!

ಜಿಮ್‌ ಪ್ರಾರಂಭಿಸುವಂತೆ ಅಗ್ರಹಿಸಿ ಯುವಕರಿಂದ ಪ್ರತಿಭಟನೆ| ಧಾರವಾಡದ ಡಿಸಿ ಕಚೇರಿ ಎದುರು ಯುವಕರ ಪ್ರತಿಭಟನೆ| ಲಾಕ್‌ಡೌನ್‌ ಸಡಿಲಿಕೆ ಅದ್ರೂ ಕೂಡ ಜಿಮ್‌ ತೆರೆಯಲು ಅನುಮತಿ ನೀಡದ ಸರ್ಕಾರ|

Share this Video
  • FB
  • Linkdin
  • Whatsapp

ಧಾರವಾಡ(ಜೂ.19):ಜಿಮ್‌ ಪ್ರಾರಂಭಿಸುವಂತೆ ಅಗ್ರಹಿಸಿ ಯುವಕರು ಕೈಯಲ್ಲಿ ಜಿಮ್‌ ಸಲಕರಣಿಗಳನ್ನು ಹಿಡಿದುಕೊಂಡು ವಿನೂತನವಾಗಿ ಪ್ರತಿಭಟನೆ ನಡೆಸಿದ ಘಟನೆ ನಗರದಲ್ಲಿ ಇಂದು(ಶುಕ್ರವಾರ) ನಡೆದಿದೆ. ಜಿಮ್‌ ಪ್ರಾರಂಭ ಮಾಡಲೇಬೇಕು ಎಂದು ಯುವಕರು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. 

ಕೊರೋನಾ ಕಾಟ: ರಾಜ್ಯದಲ್ಲಿ ಶುರುವಾಗಲಿದೆ ಕೋವಿಡ್‌ ಕೇರ್‌ ಸೆಂಟರ್‌

ಕೊರೋನಾ ವೈರಸ್‌ ತಡೆಗಟ್ಟಲು ಲಾಕ್‌ಡೌನ್‌ ಘೋಷಣೆಯಾದಾಗಿನಿಂದ ಜಿಮ್‌ಗಳು ಬಂದ್‌ ಅಗಿವೆ. ಆದರೆ ಇದೀಗ ಲಾಕ್‌ಡೌನ್‌ ಸಡಿಲಿಕೆ ಅದ್ರೂ ಕೂಡ ಜಿಮ್‌ಗಳನ್ನ ತೆರೆಯಲು ಸರ್ಕಾರ ಅನುಮತಿ ನೀಡಿಲ್ಲ. ಹೀಗಾಗಿ ಯುವಕರು ಜಿಮ್‌ ತೆರೆಯುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ. 

Related Video