
ಕೊರೋನಾ ಕಾಟ: ರಾಜ್ಯದಲ್ಲಿ ಶುರುವಾಗಲಿದೆ ಕೋವಿಡ್ ಕೇರ್ ಸೆಂಟರ್
ಸೋಂಕಿತರಲ್ಲಿ ಶೇ. 90 ರಷ್ಟು ಮಂದಿಗೆ ಕೊರೋನಾ ಸೋಂಕಿನ ಲಕ್ಷಣಗಳಿಲ್ಲ| ವೃದ್ಧರು, ಚಿಕ್ಕಮಕ್ಕಳ ಬಗ್ಗೆ ಹೆಚ್ಚು ಜಾಗೃತಿ ವಹಿಸಬೇಕು| ಕೊರೋನಾ ಸೋಂಕಿನ ಲಕ್ಷಣಗಳು ಇದ್ದರೆ ಬೇರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುವುದು: ಸಚಿವ ಕೆ.ಸುಧಾಕರ್|
ಚಿಕ್ಕಬಳ್ಳಾಪುರ(ಜೂ.19): ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ರಾಜ್ಯದಲ್ಲಿ ಪ್ರತ್ಯೇಕ ಕೋವಿಡ್ ಕೇರ್ ಸೆಂಟರ್ ಆರಂಭವಾಗಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್ ಅವರು ಹೇಳಿದ್ದಾರೆ. ಸೋಂಕಿನ ಲಕ್ಷಣಗಳು ಇರುವವರಿಗೆ ಬೇರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆಗೆ ಮಾರ್ಗಚೂಚಿ ಸಿದ್ಧವಾಗಿದೆ ಎಂದು ಹೇಳಿದ್ದಾರೆ.
ಸೀಲ್‌ಡೌನ್ ಸಮರ: ಕಲಾಸಿಪಾಳ್ಯ ಠಾಣೆಯಲ್ಲಿ ಜೊರಾಯ್ತು ಗೊಂದಲ
ಸೋಂಕಿತರಲ್ಲಿ ಶೇ. 90 ರಷ್ಟು ಮಂದಿಗೆ ಕೊರೋನಾ ಸೋಂಕಿನ ಲಕ್ಷಣಗಳಿಲ್ಲ, ವೃದ್ಧರು, ಚಿಕ್ಕಮಕ್ಕಳ ಬಗ್ಗೆ ಹೆಚ್ಚು ಜಾಗೃತಿ ವಹಿಸಬೇಕು ಎಂದು ಸಚಿವ ಕೆ.ಸುಧಾಕರ್ ಅವರು ಹೇಳಿದ್ದಾರೆ. ಕೊರೋನಾ ಸೋಂಕಿನ ಲಕ್ಷಣಗಳು ಇದ್ದರೆ ಬೇರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುವುದು ಎಂದು ತಿಳಿಸಿದ್ದಾರೆ.