ಗಸ್ತು ತಿರುಗಿ ಎಂದು ಹೇಳಿದ್ರೆ ಹಿಂಗ್ ಮಾಡೋದಾ? PSI ಅಮಾನತು!

ಗಣೇಶ ಹಬ್ಬದ ವೇಳೆ ಗಸ್ತು ತಿರುಗಪ್ಪಾ ಎಂದು ಹಿರಿಯ ಅಧಿಕಾರಿಗಳು ಹೇಳಿದ್ರೆ, ಮನೆಗೆ ಹೋಗಿ ಮಲಗೋದಾ?  ಕರ್ತವ್ಯಲೋಪದ ಮೇಲೆ ಧಾರವಾಡ SP ವರ್ತಿಕಾ ಕಟಿಯಾರ್ PSIಯೊಬ್ಬರನ್ನು ಅಮಾನತುಗೊಳಿಸಿದ್ದಾರೆ.

Share this Video
  • FB
  • Linkdin
  • Whatsapp

ಧಾರವಾಡ (ಸೆ.05): ಗಣೇಶ ಹಬ್ಬದ ವೇಳೆ ಗಸ್ತು ತಿರುಗಪ್ಪಾ ಎಂದು ಹಿರಿಯ ಅಧಿಕಾರಿಗಳು ಹೇಳಿದ್ರೆ, ಮನೆಗೆ ಹೋಗಿ ಮಲಗೋದಾ? ಕರ್ತವ್ಯಲೋಪದ ಮೇಲೆ ಧಾರವಾಡ SP ವರ್ತಿಕಾ ಕಟಿಯಾರ್ PSIಯೊಬ್ಬರನ್ನು ಅಮಾನತುಗೊಳಿಸಿದ್ದಾರೆ. 

ಗಣೇಶ ಪ್ರತಿಷ್ಠಾಪನೆ ವೇಳೆ ಧಾರವಾಡ ಜಿಲ್ಲೆಯ ಗರಗ ಠಾಣೆ ವ್ಯಾಪ್ತಿಯ ಕೋಟೂರ ಗ್ರಾಮದಲ್ಲಿ ಸ್ವಲ್ಪ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಆ ಹಿನ್ನೆಲೆಯಲ್ಲಿ ರಾತ್ರಿ ಹೊತ್ತು ಗಸ್ತು ತಿರುಗುವಂತೆ ಗರಗ ಠಾಣೆ PSI ಸಮೀರ ಮುಲ್ಲಾಗೆ ಮಧ್ಯರಾತ್ರಿ 2 ಗಂಟೆ ವೇಳೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್ ಸೂಚಿಸಿದ್ದರು. ಅವರು ಒಂದು ರೌಂಡ್ ಹೊಡೆದು ಬರುವಾಗ PSI ನಾಪತ್ತೆ! ಈಗ ಅವರನ್ನು ಅಮಾನತುಗೊಳಿಸಲಾಗಿದೆ.

Related Video