Asianet Suvarna News Asianet Suvarna News

[ವಿಡಿಯೋ] ಅವಾಚ್ಯ ಪದ ಬಳಸಿದ ಪೊಲೀಸ್‌ಗೆ ಮೈಚಳಿ ಬಿಡಿಸಿದ ಗೂಡ್ಸ್ ವಾಹನ ಚಾಲಕ!

ಗೂಡ್ಸ್​ ವಾಹನ ಚಾಲಕನೋರ್ವ ದಂಡ ಹಾಕಿದ ಪಿಎಸ್​ಐಗೆ ನಡುರಸ್ತೆಯಲ್ಲಿಯೇ ತರಾಟೆಗೆ ತೆಗೆದುಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋಗಳನ್ನು ಧಾರವಾಡ ಜಿಲ್ಲಾ ಮಾನವ ಹಕ್ಕು ಅಧ್ಯಕ್ಷ ಎಂದು‌ ಹೇಳಿಕೊಂಡಿರುವ ರಘು‌ ಲದವಾ ಎನ್ನುವವರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಪಿಎಸ್​ಐ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ

ಹುಬ್ಬಳ್ಳಿ (ಸೆ.14): ಗೂಡ್ಸ್​ ವಾಹನ ಚಾಲಕನೋರ್ವ ದಂಡ ಹಾಕಿದ ಪಿಎಸ್​ಐಗೆ ನಡುರಸ್ತೆಯಲ್ಲಿಯೇ ತರಾಟೆಗೆ ತೆಗೆದುಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  ಕುಂದಗೋಳ ಪಿಎಸ್​ಐ ವಿ.ಡಿ.ಪಾಟೀಲ್ ಗೂಡ್ಸ್ ವಾಹನ ತಡೆದು ಸಮವಸ್ತ್ರ ಇಲ್ಲ ಎಂದು 200 ರೂಪಾಯಿ ದಂಡ ಹಾಕಿದ್ದಾರೆ. ಆದರೆ ಇದಕ್ಕೆ ಗೂಡ್ಸ್ ವಾಹನ ಚಾಲಕ ವಿರೋಧ ವ್ಯಕ್ತಪಡಿಸಿದ್ದಾನೆ. 

ನನ್ನ ಕಡೆ ಎಲ್ಲ ದಾಖಲೆ, ಸಮವಸ್ತ್ರವಿದೆ ಎಂದಿದ್ದಾನೆ. ಆಗ ಪಿಎಸ್​ಐ ವಾಹನ ಚಾಲಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇದರಿಂದ ಕುಪಿತಗೊಂಡ ವಾಹನ ಚಾಲಕ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾನೆ.

ಇದಲ್ಲದೇ ಅಲ್ಲಿ ನಡೆದ ಎಲ್ಲ ಘಟನೆಯನ್ನು ಲೈವ್ ವಿಡಿಯೋ ಮಾಡಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿದಕ್ಕೆ ಕ್ಷಮೆ ಕೇಳುವಂತೆ ಪಟ್ಟು ಹಿಡಿದ್ದಾನೆ. ಅದಕ್ಕೆ ‌ಪ್ರತಿಯಾಗಿ ಪಿಎಸ್​ಐ ಕೂಡ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾರೆ. ಈ ವಿಡಿಯೋಗಳನ್ನು ಧಾರವಾಡ ಜಿಲ್ಲಾ ಮಾನವ ಹಕ್ಕು ಅಧ್ಯಕ್ಷ ಎಂದು‌ ಹೇಳಿಕೊಂಡಿರುವ ರಘು‌ ಲದವಾ ಎಂಬವರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಪಿಎಸ್​ಐ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

Video Top Stories