
ಎಸ್‌ಐಟಿ ದಾರಿ ತಪ್ಪಿಸಿದ ಅನಾಮಿಕ, 'ಬುರುಡೆ' ತಂದವನ ಜನ್ಮ ಜಾಲಾಟ!
ಧರ್ಮಸ್ಥಳದಲ್ಲಿ ಶವ ಹೂಳಲಾಗಿದೆ ಎಂದು ದೂರು ನೀಡಿದ್ದ ವ್ಯಕ್ತಿ ಎಸ್‌ಐಟಿ ವಿಚಾರಣೆಯಲ್ಲಿ ಗೊಂದಲದ ಹೇಳಿಕೆ ನೀಡಿದ್ದಾರೆ. ತಲೆಬುರುಡೆ ನೀಡಿ ಆರೋಪ ಮಾಡಿದ್ದ ವ್ಯಕ್ತಿಯ ಹೇಳಿಕೆಗಳಿಂದಾಗಿ ಎಸ್‌ಐಟಿ ಅಧಿಕಾರಿಗಳಲ್ಲಿ ಅನುಮಾನ ಮೂಡಿದೆ.
ಬೆಂಗಳೂರು (ಆ.19): ಧರ್ಮಸ್ಥಳದಲ್ಲಿ ಶವಗಳನ್ನು ಹೂತು ಹಾಕಲಾಗಿದೆ ಎಂದು ದೂರು ನೀಡಿ ತನಿಖೆಗೆ ಕಾರಣವಾಗಿದ್ದ ಅನಾಮಿಕ ವ್ಯಕ್ತಿಯೊಬ್ಬ ಇದೀಗ ಎಸ್‌ಐಟಿ (ವಿಶೇಷ ತನಿಖಾ ತಂಡ) ಮುಂದೆ ಗೊಂದಲದ ಹೇಳಿಕೆಗಳನ್ನು ನೀಡುತ್ತಿದ್ದು, ಪ್ರಕರಣವನ್ನು ದಾರಿ ತಪ್ಪಿಸಲು ಯತ್ನಿಸುತ್ತಿದ್ದಾನೆ ಎನ್ನುವ ಆರೋಪ ಕೇಳಿಬಂದಿದೆ.
ಎಸ್‌ಐಟಿ ರಚನೆಯಾದ 40 ದಿನಗಳ ನಂತರ ವಿಚಾರಣೆಗಿಳಿದ ಈ ದೂರುದಾರ, ಅಧಿಕಾರಿಗಳ ಪ್ರಶ್ನೆಗಳಿಗೆ ಉತ್ತರಿಸಲು ಪರದಾಡುತ್ತಿದ್ದಾನೆ.ತಲೆಬುರುಡೆ ತಂದುಕೊಟ್ಟು, ಶವಗಳನ್ನು ಹೂತು ಹಾಕಿದ್ದ ಬಗ್ಗೆ ಆರೋಪ ಮಾಡಿದ್ದ ಅನಾಮಿಕ ದೂರುದಾರ ಇದೀಗ ಹೈಡ್ರಾಮಾ ಮಾಡುತ್ತಿದ್ದಾನೆ.
Breaking: ವಾಸಂತಿ ಫೋಟೋಗೆ ಅನನ್ಯವಾಗಿ ಪೆನ್ನಿನಿಂದ ಬೊಟ್ಟು ಇಟ್ಟಿದ್ದ ಎಂಡಿ ಸಮೀರ್!
ಬಂಗ್ಲೆಗುಡ್ಡ, ಕಲ್ಲೇರಿ, ಬೋಳಿಯಾರು ಎಂದು ಗೊಂದಲದ ಹೇಳಿಕೆಗಳನ್ನು ನೀಡುತ್ತಿದ್ದು, ಈತ ದಾರಿತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾನೆಯೇ ಎಂಬ ಅನುಮಾನ ಎಸ್‌ಐಟಿ ಅಧಿಕಾರಿಗಳಲ್ಲಿ ಮೂಡಿದೆ.