Asianet Suvarna News Asianet Suvarna News

ಪೊಲೀಸರಿಗೆ ಕ್ವಾಟ್ರಸ್‌ ಇಲ್ಲ, ಹೆಚ್‌ಆರ್‌ಎನಲ್ಲೂ ಕಡಿತ: ಸಂಕಷ್ಟದಲ್ಲಿ ಪೊಲೀಸರು !

ಅವರ ಹೆಸರಿಗೆ ಮಾತ್ರ ಬೆಂಗಳೂರು ಸಿಟಿ ಪೊಲೀಸರು. ಕೆಲಸ ಬಂದೋಬಸ್ತ್ ಎಲ್ಲವೂ ಕೂಡ ಬೆಂಗಳೂರು ನಗರದಲ್ಲೆ, ಆದರೆ ಪೊಲೀಸರಿಗೆ ಕೊಡೋ ಸೌಲಭ್ಯಗಳು ಮಾತ್ರ ಗ್ರಾಮೀಣ ಪ್ರದೇಶದವರಂತೆ ಕಾಣ್ತಿದ್ದಾರೆ. ಈ ಪೊಲೀಸರಿಗೆ ಕ್ವಾಟ್ರಸ್ಸು ಇಲ್ಲ ಸರ್ಕಾರದಿಂದ HRA ನು ಕಡಿಮೆ ಕೊಡುತ್ತಿದ್ದಾರೆ. ಸರ್ಕಾರದ ಈ ನಿರ್ಧಾರದಿಂದ 300ಕ್ಕೂ ಹೆಚ್ಚು ಪೊಲೀಸ್ ಕುಟುಂಬಗಳು ಸಮಸ್ಯೆಗೆ ಸಿಲುಕಿವೆ. 
 

ಅಪಘಾತ ಕಳ್ಳತನ ಬಂದೋಬಸ್ತ್‌ ಹೀಗೆ ಸದಾ ಕಾಲ ಕೆಲಸದ ಒತ್ತಡದಿಂದಲೇ ಕಾರ್ಯ ನಿರ್ವಹಿಸುವ ಸಿಬ್ಬಂದಿ ಎಂದರೆ ಅದು ಪೊಲೀಸರು(Police). ಕೆಲಸಕ್ಕೆ ತಕ್ಕಂತೆ ವೇತನ ಕೊಡಬೇಕೆಂಬ ಆಗ್ರಹ ತುಂಬಾ ದಿನಗಳಿಂದ ನಡೆಯುತ್ತಲೇ ಇದೆ, ಆದರೆ ದೇವನಹಳ್ಳಿ(devanahalli) ಉಪವಿಭಾಗ ಪೊಲೀಸರು ಮಾತ್ರ ಸಂಕಷ್ಟಗಳ ಸರಮಾಲೆಯಲ್ಲಿ ಸಿಲುಕಿದ್ದಾರೆ. ಈ ವಿಭಾಗದ ಪೊಲೀಸರು ಹೆಸರಿಗೆ ಮಾತ್ರ ಬೆಂಗಳೂರು(bengaluru) ಸಿಟಿ ಪೊಲೀಸರು ಆಗಿದ್ದಾರೆ. ಆದರೆ ಇವರಿಗೆ ನೀಡುತ್ತಿರುವ ಸೌಲಭ್ಯಗಳು ಮಾತ್ರ ಗ್ರಾಮೀಣ ಪ್ರದೇಶದವರಂತೆ ಕೊಡುತ್ತಿದ್ದಾರೆ. ಹೌದು ದೇವನಹಳ್ಳಿ ಉಪವಿಭಾಗಕ್ಕೆ ನಾಲ್ಕು ಪೊಲೀಸ್ ಠಾಣೆಗಳು ಬರುತ್ತವೆ. ದೇವನಹಳ್ಳಿ ಚಿಕ್ಕಜಾಲ ಕೆಂಪೇಗೌಡ ಏರ್ಪೋರ್ಟ್ ಪೊಲೀಸ್ ಠಾಣೆ ಹಾಗೂ ದೇವನಹಳ್ಳಿ ಸಂಚಾರಿ ಪೊಲೀಸ್ ಠಾಣೆ. ಈ ಎಲ್ಲಾ ಪೊಲೀಸ್ ಠಾಣೆಗಳಲ್ಲೂ ಸುಮಾರು 300ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಇವರಿಗೆ ನೀಡುತ್ತಿರುವ HRA ಮಾತ್ರ ಶೇಕಡ 8%. ಆದರೆ ಇವರ ಪಕ್ಕದ ಠಾಣೆ ಬಾಗಲೂರು ಪೊಲೀಸರಿಗೆ ಯಲಹಂಕ ಪೊಲೀಸರಿಗೆ ಮಾತ್ರ ಎಚ್ ಆರ್ ಎ ಶೇಕಡಾ 24ರಷ್ಟು ನೀಡುತ್ತಿದ್ದಾರೆ.

ಇತ್ತ ಕ್ವಾಟ್ರಸ್ಸು ಇಲ್ಲ ಎಚ್ ಆರ್ ಎ ಕೂಡ ಹೆಚ್ಚಿಗೆ ನೀಡುತ್ತಿಲ್ಲ ಅಂತ ಪೊಲೀಸರು ಸಮಸ್ಯೆಗೆ ಸಿಲುಕಿದ್ದಾರೆ. ಈಗಾಗಲೇ ಬೆಂಗಳೂರಿಗೆ ಈ ಪೊಲೀಸ್ ಠಾಣಾ ವ್ಯಾಪ್ತಿ ಹೊಂದಿಕೊಂಡಿತ್ತು ಎಲ್ಲಾ ಮನೆ ಬಾಡಿಗೆ ಸೇರಿದಂತೆ ಎಲ್ಲಾ ಬೆಲೆಯೂ ಹೆಚ್ಚಳವಾಗಿದೆ. ಇನ್ನು ಈ ವ್ಯಾಪ್ತಿಯಲ್ಲಿ ಕೆಲಸ ಮಾಡುವ ಎಲ್ಲಾ ಪೊಲೀಸರು ಬಂದೋಬಸ್ ಸೇರಿದಂತೆ ಕೆಲಸ ನಿರ್ವಹಿಸುವುದು ಬೆಂಗಳೂರು ನಗರದ ವ್ಯಾಪ್ತಿಯಲ್ಲಿ ಬರುತ್ತದೆ. ನಮಗೂ ಹೆಚ್ಚಾಗಿ ಶೇಕಡ 24ರಷ್ಟು ನೀಡಬೇಕು ಎಂದು ಪೊಲೀಸರು ಮೇಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ದೇವನಹಳ್ಳಿ ರೂಪ ವಿಭಾಗವೂ ಕೂಡ ಬೆಂಗಳೂರು ಈಶಾನ್ಯ ವಲಯ ವ್ಯಾಪ್ತಿಗೆ ಸೇರುತ್ತದೆ. ಈ ಹಿಂದೆ ಕೂಡ ಈ ವಿಭಾಗದ ಪೊಲೀಸರಿಗೆ ಶೇಕಡಾ 24ರಷ್ಟು ಎಚ್ ಆರ್ ಎ ನೀಡುತ್ತಿದ್ದರು. ಆದರೆ ಕಳೆದ ಒಂದು ವರ್ಷದಿಂದ ಇವರಿಗೆ ಹೆಚ್ಚಾರಿಯ ಕಡಿತ ಮಾಡಿದ್ದಾರೆ. ಹೀಗಾಗಿ ಮಕ್ಕಳ ವಿದ್ಯಾಭ್ಯಾಸ ಹಾಗೂ ಮನೆ ಬಾಡಿಗೆಗೆ ಸಾಕಷ್ಟು ಸಮಸ್ಯೆ ಆಗುತ್ತಿದೆ ಅಂತ ಪೊಲೀಸ್ ಕುಟುಂಬಗಳು ಸಮಸ್ಯೆ ತೋಡಿಕೊಂಡಿದ್ದಾರೆ.

ಇದನ್ನೂ ವೀಕ್ಷಿಸಿ:  ಸಾರ್ವಜನಿಕ ಸ್ವತ್ತಿನ ಮೇಲೆ ಭೂಮಾಫಿಯಾ ಕಣ್ಣು: ಬಿಬಿಎಂಪಿ ಪಾರ್ಕ್‌ಗೆ ಬೀಗ ಜಡಿದ ಭೂಗಳ್ಳರು..?

Video Top Stories