ಉದ್ಘಾಟನೆಯಾದರೂ ಕ್ರೀಡಾಪಟುಗಳಿಗಿಲ್ಲ ಅಭ್ಯಾಸ ಭಾಗ್ಯ: 66 ಕೋಟಿ ವೆಚ್ಚದ ಹೈಟೆಕ್ ಕ್ರೀಡಾಂಗಣ ಮೂಲೆ ಗುಂಪು..!

ಅದು ಬರೋಬ್ಬರಿ 66 ಕೋಟಿ ವೆಚ್ಚದ ಹೈಟೆಕ್ ಕ್ರೀಡಾಂಗಣ.. ಕ್ರೀಡಾಂಗಣ ಉದ್ಘಾಟನೆ ನಡೆದು ಐದಾರು ತಿಂಗಳು ಕಳೆದರು ಕ್ರೀಡಾಪಟುಗಳ ಬಳಕೆಗೆ ಸಿಗದೇ ಮೂಲೆ ಗುಂಪಾಗಿದೆ.
 

First Published Sep 12, 2023, 10:42 AM IST | Last Updated Sep 12, 2023, 10:42 AM IST

ಬರೋಬ್ಬರಿ 66 ಕೋಟಿ ವೆಚ್ಚದಲ್ಲಿ ನವೀಕರಣಗೊಂಡ ಮಹಾತ್ಮ ಗಾಂಧಿ ಕ್ರೀಡಾಂಗಣ(Mahatma Gandhi Stadium) ರೆಡಿಯಿದೆ. 6 ತಿಂಗಳ ಹಿಂದೆಯೇ ಉದ್ಘಾಟನೆ ಕೂಡ ಆಗಿದೆ. ಅದ್ರೂ ಅಧಿಕಾರಿಗಳ ಹಗ್ಗಜಗ್ಗಾಟದಿಂದ ಕ್ರೀಡಾಪಟುಗಳಿಗೆ(sportsmen) ಮಾತ್ರ ಇದುವರೆಗೂ ಬಳಕೆಗೆ ಸಿಕ್ಕಿಲ್ಲ. 2018 ರಲ್ಲಿ ತುಮಕೂರು(Tumkur) ಜಿಲ್ಲೆಯ ಕ್ರೀಡಾಪಟುಗಳ ಅನುಕೂಲಕ್ಕೆಂದು ಸ್ಮಾರ್ಟ್ ಸಿಟಿ(Smart city) ಅನುದಾನದಡಿ 66 ಕೋಟಿ ವೆಚ್ಚದಲ್ಲಿ ಈ ಕ್ರೀಡಾಂಗಣಕ್ಕೆ ಹೈಟೆಕ್ ಸ್ಪರ್ಶ ನೀಡಲಾಗಿದೆ. ಕಳೆದ ಡಿಸೆಂಬರ್‌ನಲ್ಲಿ ಅಂದಿನ ಸಿಎಂ ಬಸವರಾಜ್ ಬೊಮ್ಮಾಯಿ ಈ ಕ್ರೀಡಾಂಗಣವನ್ನು ಉದ್ಘಾಟನೆ ಮಾಡಿದ್ದಾರೆ. ಇದಾದ ಬಳಿಕ ಬಾಕಿ ಉಳಿದಿದ್ದ ಸಣ್ಣ ಪುಟ್ಟ ಕೆಲಸಗಳನ್ನು ಪೂರ್ನ ಗೊಳಿಸಿ ಕಳೆದ ಮಾರ್ಚ್ನಲ್ಲೇ ಸ್ಮಾರ್ಟ್ ಸಿಟಿ ಅಧಿಕಾರಿಗಳು ಯುವ ಸಬಲಿಕರಣ ಇಲಾಖೆಗೆ ಗ್ರೌಂಡ್ ಸುಪರ್ದಿಗೆ ಪಡೆಯುವಂತೆ ಸೂಚಿಸಿದ್ದಾರೆ. ಯುವ ಸಬಲಿಕರಣ ಇಲಾಖೆ ಆಯುಕ್ತರು ಸಹ ತುಮಕೂರು ಜಿಲ್ಲಾ ಸಬಲಿಕರಣ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ಇಷ್ಟಾದ್ರೂ ಕ್ರೀಡಾಪಟುಗಳಿಗೆ ಗ್ರೌಂಡ್ ಗೇಟ್ ತೆರೆದಿಲ್ಲ. ತುಮಕೂರು ಜಿಲ್ಲಾಡಳಿತ ಹಾಗೂ ಯುವ ಸಬಲಿಕರಣ ಇಲಾಖೆ ಗ್ರೌಂಡನ್ನ ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಮೀನಾ ಮೇಷಾ ಮಾಡ್ತಿದ್ದಾರೆ. ಕ್ರೀಡಾಪಟುಗಳು ಪ್ರಶ್ನೆ ಮಾಡಿದ್ರೆ ಟೆಕ್ನಿಕಲ್ ಪ್ರಾಬ್ಲಂ ಇದೆ ಅಂತ ಸಬೂಬಹ ಹೇಳ್ತಿದ್ದಾರೆ. ಜಿಲ್ಲೆಯಲ್ಲಿ ಹೈಟೆಕ್ ಮಾದರಿಯ ಕ್ರೀಡಾಂಗಣ ಇದ್ರೂ ನಮಗೆ ಸಿಗ್ತಿಲ್ಲ.. ಪ್ರಾಕ್ಟಿಸ್ ಇಲ್ಲದೆ ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಭಾಗಿಯಾಗಲು ಕ್ರೀಡಾಪಟುಗಳಿಗೆ ಸಾಧ್ಯವಾಗ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಇದನ್ನೂ ವೀಕ್ಷಿಸಿ:  ಮಕ್ಕಳು ಶಾಲೆಗೆ ಹೋಗಿದ್ದಾರಾ.. ಪೋಷಕರೇ ಎಚ್ಚರ ! ಅಪಹರಣಕಾರರ ಪತ್ತೆ ಹಚ್ಚದ ಖಾಕಿ !