ಮಂಗಳೂರಿನಲ್ಲಿ ಭುಗಿಲೆದ್ದ ಮತ್ತೊಂದು ವಿವಾದ: ದಸರಾ ದಾಂಡಿಯಾ ನೈಟ್ಸ್‌ಗೆ ಹಿಂದೂ ಸಂಘಟನೆಗಳ ಕಿಡಿ
ವ್ಯಾಪಾರ ದಂಗಲ್ ಬಳಿಕ ಮಂಗಳೂರಿನಲ್ಲಿ ಮತ್ತೊಂದು ವಿವಾದ ಭುಗಿಲೆದ್ದಿದೆ. ನವರಾತ್ರಿ ಸಂದರ್ಭ ಧಾಮ್ ಧೂಮ್ ಆಗಿ ನಡೆಯುವ ದಾಂಡಿಯಾ ನೈಟ್ಸ್ ಇವೆಂಟ್ ಗಳಿಗೆ ಕಡಿವಾಣ ಹಾಕಬೇಕು ಎಂದು ಹಿಂದೂ ಸಂಘಟನೆಗಳು ಆಗ್ರಹಿಸಿದೆ.
ಕೋಮು ಸೂಕ್ಷ್ಮ ಪ್ರದೇಶವೆಂಬ ಹಣೆ ಪಟ್ಟಿ ಹೊತ್ತಿರುವ ಕಡಲನಗರಿ ಮಂಗಳೂರು(Mangaluru) ನವರಾತ್ರಿ ಸಂದರ್ಭದಲ್ಲಿ ಒಂದಲ್ಲ ಒಂದು ವಿವಾದಗಳಿಂದ ಸದ್ದು ಮಾಡುತ್ತಿದೆ. ನಗರದ ಮಂಗಳಾದೇವಿ ದೇವಸ್ಥಾನದಲ್ಲಿ ವ್ಯಾಪಾರ ದಂಗಲ್ ಹಾಗೂ ಧ್ವಜ ವಿವಾದದ ಬಳಿಕ ಇದೀಗ ಮತ್ತೊಂದು ವಿವಾದ ಭುಗಿಲೆದ್ದಿದೆ. ನವರಾತ್ರಿ ಪ್ರಯುಕ್ತ ನಗರ ಹಲವು ಪ್ರತಿಷ್ಠಿತ ಹೋಟೆಲ್, ಮಾಲ್ ಗಳಲ್ಲಿ ಧಾಮ್ ಧೂಮ್ ಆಗಿ ನಡೆಯುವ ಉತ್ತರ ಭಾರತ ದಾಂಡಿಯಾ ಶೈಲಿಯ ದಾಂಡಿಯಾ ನೈಟ್ಸ್ ಇವೆಂಟ್ ಗಳು ವಿಶ್ವ ಹಿಂದೂ ಪರಿಷತ್ ಬಜರಂಗದಳ ಸಂಘಟನೆಯ ಕಣ್ಣು ಕೆಂಪಾಗಾಗಿಸಿದ್ದು, ದಾಂಡಿಯಾ ನೈಟ್ಸ್ ಇವೆಂಟ್ಸ್ಗೆ(Dasara Dandiya dance event) ಅನುಮತಿ ನೀಡದಂತೆ ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ವಿಶ್ವ ಹಿಂದೂ ಪರಿಷತ್ ಬಜರಂಗದಳ ಮನವಿ ಮಾಡಿದೆ. ನವರಾತ್ರಿ ಸಂದರ್ಭ ಉತ್ತರ ಭಾರತದಲ್ಲಿ(North India) ಗರ್ಭ ಹೆಸರಿನಲ್ಲಿ ನಡೆಯುವ ದಾಂಡಿಯಾ ನೃತ್ಯ ಪವಿತ್ರ ಧಾರ್ಮಿಕ ಕಾರ್ಯಕ್ರಮವಾಗಿದೆ. ಆದ್ರೆ ಪ್ರಸ್ತುತ ವರ್ಷಗಳಲ್ಲಿ ನಗರದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ, ಡ್ರಗ್ಸ್, ಮಾದಕ ದ್ರವ್ಯ ಸೇವನೆ ಮತ್ತು ಅಸಭ್ಯ ನೃತ್ಯಗಳ ಬಗ್ಗೆ ದೂರುಗಳು ಬಂದಿದ್ದು, ಈ ನಿಟ್ಟಿನಲ್ಲಿ ದಾಂಡಿಯಾ ನೈಟ್ಸ್ ಗೆ ಅವಕಾಶ ನೀಡಬಾರದು ಎಂದು ಬಜರಂಗದಳ ಮನವಿ ಮಾಡಿತ್ತು. ದಾಂಡಿಯಾ ಹೆಸರಿನಲ್ಲಿ ನಡೆಯುವ ಮೋಜು ಮಸ್ತಿಯ ಇವೆಂಟ್ಗಳಿಗೆ ಅವಕಾಶ ನೀಡಿದ್ರೆಲ್ಲಿ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನೂ ನೀಡಿದೆ.ಈ ನಡುವೆ ಇನ್ನೆರಡು ದಿನ ಮಂಗಳೂರಿನ ಸುಮಾರು 20ಕ್ಕೂ ಅಧಿಕ ಪ್ರದೇಶದಲ್ಲಿ ದಾಂಡಿಯಾ ನೈಟ್ಸ್ ಆಯೋಜನೆಗೊಂಡಿದೆ.
ಇದನ್ನೂ ವೀಕ್ಷಿಸಿ: 15ನೇ ದಿನವೂ ರಣರಂಗದಲ್ಲಿ ಇಸ್ರೇಲ್ ಗುಂಡಿನ ಮಳೆ: ಗಾಜಾದ ಮತ್ತೊಂದು ಮಸೀದಿ ಉಡೀಸ್