Asianet Suvarna News Asianet Suvarna News

ಏನಿದು ಸೂರಜ್ ರೇವಣ್ಣನ ಕಾಮ ಪುರಾಣ..? ತಮ್ಮ ಹಂಗೆ..ಅಣ್ಣ ಹಿಂಗೆ..! ರೇವಣ್ಣ ಕುಟುಂಬ ವಿಲವಿಲ!

ಭವಾನಿ ಮಕ್ಕಳ ಕಾಟಕ್ಕೆ ಬೆಚ್ಚಿಬಿದ್ದಿದೆ ಹಾಸನ..!
ಅತ್ಯಾಚಾರ ಕೇಸ್‌ನಲ್ಲಿ ಜೈಲಿಗೆ ಹೋದ ಪ್ರಜ್ವಲ್!
ಆಪ್ತನಿಂದಲೇ ಟ್ರ್ಯಾಪ್ ಆದ್ನಾ ಸೂರಜ್ ರೇವಣ್ಣ?


ಪ್ರಜ್ವಲ್ ರೇವಣ್ಣ(Prajwal Revanna) ಅನ್ನೋ ನೀಚ ಮಾಡಬಾರದನ್ನ ಮಾಡಿ ಇವತ್ತು ಜೈಲಿಗೆ ಸೇರಿದ್ದಾನೆ. ಈಗ ಆತನ ಅಣ್ಣನ ಸರದಿ. ಆತ ಹೆಂಗಸರನ್ನ ಬಿಡಲ್ಲ. ಅಣ್ಣ ಗಂಡಸರನ್ನೂ ಬಿಡಲ್ಲ. ಇದು ದಶಕಗಳ ಕಾಲ ಹಾಸನವನ್ನಾಳಿದ(Hassan) ರೇವಣ್ಣ ಕುಟುಂಬದ ಕುಡಿಗಳ ಕಾಮಕಾಂಡದ ಕಹಾನಿ. ಭವಾನಿಯ ಮಕ್ಕಳ ಕಾಟಕ್ಕೆ ಈಗ ಇಡೀ ಹಾಸನ ಬೆಚ್ಚಿ ಬಿದ್ದಿದೆ. ತಮ್ಮ ಪ್ರಜ್ವಲ್ ಕಥೆ ಈಗಾಗಲೇ ಎಲ್ಲರಿಗೂ ಗೊತ್ತೇ ಇದೆ. ಈಗ ಅಣ್ಣ ಸೂರಜ್ ರೇವಣ್ಣನ(Suraj Revanna) ಸರದಿ. ಹಾಸನ ರಾಜಕೀಯವಾಗಿ ತನ್ನದೇ ಪ್ರಾಬಲ್ಯ ಹೊಂದಿರೋ ಜಿಲ್ಲೆ. ದೇಶಕ್ಕೆ ಓರ್ವ ಪ್ರಧಾನಿ, ಇಬ್ಬರು ಸಿಎಂಗಳ ಕೊಟ್ಟ ಜಿಲ್ಲೆ. ಮಾಜಿ ಪ್ರಧಾನಿ ದೇವೇಗೌಡರ ತವರು ಜಿಲ್ಲೆ. ಹಾಸನ ಜೆಡಿಎಸ್(JDS) ಭದ್ರಕೋಟೆ. ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳನ್ನು ಗೆದ್ದು ಬೀಗಿತ್ತು ಜೆಡಿಎಸ್. ಒಂದು ಮಾತಲ್ಲಿ ಹೇಳಬೇಕಾದ್ರೆ ರೇವಣ್ಣ ಫ್ಯಾಮಿಲಿ ಈ ಹಾಸನವನ್ನ ರಿಪಬ್ಲಿಕ್ ಆಫ್ ಹಾಸನದಂತೆ ಮಾಡಿಕೊಂಡು ತಮ್ಮದೇ ರಾಜ್ಯಭಾರ ಮಾಡ್ತಿದ್ರು. ಆದ್ರೆ ಇದೇ ಹಾಸನ ಅಂದ್ರೆ ಇವತ್ತು ಕನ್ನಡಿಗರು ಕನಸಿನಲ್ಲೂ ಬೆಚ್ಚಿ ಬೀಳ್ತಾರೆ. ಇನ್ನೂ ಹಾಸನದವರೇ ತಮ್ಮ ಊರಿನ ಬಗ್ಗೆ ಮಾತನ್ನಾಡೋದಕ್ಕೆ ನಾಚಿಕೆ ಪಡುತ್ತಿದ್ದಾರೆ. ಅದಕ್ಕೆ ಕಾರಣ ಒನ್ಸಗೈನ್ ರೇವಣ್ಣ ಆ್ಯಂಡ್ ಫ್ಯಾಮಿಲಿ.

ಇದನ್ನೂ ವೀಕ್ಷಿಸಿ:  Milk price hike: ರಾಜ್ಯದಲ್ಲಿ ಇನ್ಮುಂದೆ ಅಭಿವೃದ್ಧಿ ಇಲ್ಲ, ಕೇವಲ ಬೆಲೆ ಏರಿಕೆ ಮಾತ್ರ- ಸರ್ಕಾರದ ವಿರುದ್ಧ ಆರ್‌.ಅಶೋಕ್‌ ಕಿಡಿ