ಮತ್ತೊಂದು ರೂಲ್ಸ್‌ ಬ್ರೇಕ್‌ ಮಾಡಿದ ದರ್ಶನ್‌ ಗ್ಯಾಂಗ್‌: ನಟನ ಬಳಿ ಇವೆಯಂತೆ 2 ಯುಎಸ್ ಮೇಡ್ ಪಿಸ್ತೂಲ್‌ಗಳು ?

ಗಣ್ಯರಿಗೆ ನೀಡುವ ಶಸ್ತ್ರಾಸ್ತ್ರ ಠೇವಣಿ ವಿನಾಯಿತಿ ಪಡೆದಿದ್ದ ದರ್ಶನ್ ಗ್ಯಾಂಗ್ 
ಶಸ್ತ್ರಾಸ್ತ್ರಠೇವಣಿ ವಿನಾಯಿತಿ ಪಡೆದಿದ್ದ  ನಟ ದರ್ಶನ್ ಮತ್ತು ಪ್ರದೋಷ್  
ಮಾರ್ಚ್ 27 ರಂದು ವಿನಾಯಿತಿ ನೀಡಿ ಅದೇಶ ನೀಡಿದ್ದ ಕಮೀಷನರ್

First Published Jun 26, 2024, 11:55 AM IST | Last Updated Jun 26, 2024, 11:55 AM IST

ನಟ ದರ್ಶನ್ ಗ್ಯಾಂಗ್‌ನ ಮತ್ತೊಂದು ಇಂಟ್ರಸ್ಟಿಂಗ್ ಸ್ಟೋರಿ ಇದಾಗಿದ್ದು, ದರ್ಶನ್ (Darshan) ಬಳಿ 2 ಯುಎಸ್ ಮೇಡ್ ಪಿಸ್ತೂಲ್‌ಗಳು( US made pistols) ಇವೆಯಂತೆ. ಆರೋಪಿ ಪ್ರದೋಷ್ ಬಳಿ ಸದ ಒಂದು ಲೈಸೆನ್ಸ್ ಪಿಸ್ತೂಲ್ (License pistol) ಇದೆ. ಚುನಾವಣಾ ವೇಳೆ ಪಿಸ್ತೂಲ್‌ಗಳನ್ನು ಪೊಲೀಸರಿಗೆ ದರ್ಶನ್ ಗ್ಯಾಂಗ್ ಒಪ್ಪಿಸಿದೆ. ಬೆಂಗಳೂರು(Bengaluru) ನಗರದ್ಯಾಂತ 7830 ಗನ್ ಲೈಸೆನ್ಸ್ ಪರವಾನಗಿದಾರರು ಇದ್ದು, ದರ್ಶನ್ , ಪ್ರದೋಷ್ ಸೇರಿ 277 ಶಸ್ತ್ರಾಸ್ತ್ರ ಠೇವಣಿ ವಿನಾಯಿತಿ ನೀಡಲಾಗಿತ್ತು. 7553 ಪರವಾನಗಿ ಹೊಂದಿದ್ದ ಶಸ್ತ್ರಾಸ್ತ್ರ ವಶಕ್ಕೆ ಪೊಲೀಸರು ಪಡೆದಿದ್ದಾರೆ. ದರ್ಶನ್ , ಪ್ರದೋಷ್ ಪಿಸ್ತೂಲ್ ವಾಪಸ್ ಮಾಡದೇ ವಿನಾಯಿತಿ ಪಡೆದಿದ್ದರು. 277 ಶಸ್ತ್ರಾಸ್ತ್ರ ಠೇವಣಿ ವಿನಾಯಿತಿಯಲ್ಲಿ ದರ್ಶನ್ , ಪ್ರದೋಷ್ ಗೂ ವಿನಾಯಿತಿ ನೀಡಲಾಗಿದೆ. ಬೆಂಗಳೂರು ಪೊಲೀಸ್ ಕಮೀಷನರ್‌ರಿಂದಲೇ ವಿನಾಯಿತಿ ನೀಡಲಾಗಿದೆ. ಶಸ್ತ್ರಾಸ್ತ್ರ ಠೇವಣಿ ಸ್ಕ್ರೀನಿಂಗ್ ಕಮಿಟಿಯ ಅಧ್ಯಕ್ಷರಾಗಿರುವ ಕಮೀಷನರ್. ನಿವೃತ್ತ ನ್ಯಾಯಾಧೀಶರು, ಐಎಎಸ್ , ಐಪಿಎಸ್ ಅಧಿಕಾರಿಗಳು, ಬ್ಯಾಂಕ್ ಮ್ಯಾನೇಜರ್ ಗಳು, ಬ್ಯುಸಿನೆಸ್ ಮೆನ್ ಗಳು, ಶಾಸರಕು, ಪರಿಷತ್ ಸದಸ್ಯರು ಸೇರಿ ರಾಜಕಾರಣಿಗಳಿಗೆ ಮಾತ್ರ ವಿನಾಯಿತಿ ನೀಡಲಾಗಿದೆ. ಉಳಿದಂತೆ ಎಲ್ಲರ ಬಳಿಯಿರುವ ಶಸ್ತ್ರಾಸ್ತ್ರಗಳನ್ನು ವಶಕ್ಕೆ ನೀಡಲಾಗಿದೆ.

ಇದನ್ನೂ ವೀಕ್ಷಿಸಿ:  ಮಳೆಗೆ ಮನೆ ಗೋಡೆ ಕುಸಿತ..ರಾತ್ರಿ ಊಟ ಮಾಡಿ ಮಲಗಿದ್ದ ನಾಲ್ವರ ದುರ್ಮರಣ