Munirathna: ಮತಾಂತರದ ಬಗ್ಗೆ ಮುನಿರತ್ನ ಶಾಕಿಂಗ್‌ ಹೇಳಿಕೆ: ದಲಿತ ಯುವತಿಯರೇ ಟಾರ್ಗೆಟ್‌ ಅಂತೆ!

ದಲಿತ ಹೆಣ್ಣು ಮಕ್ಕಳನ್ನು ಮುಸ್ಲಿಂ ಆಗಿ ಕನ್ವರ್ಟ್ ಮಾಡುವ ಕೆಲಸ ಹೆಚ್ಚಾಗುತ್ತಿದೆ. ಈ ನಡುವೆ ಹೋಳಿ ದಿನ ಓರ್ವ ಯುವತಿಯನ್ನು ಅತ್ಯಾಚಾರ ಸಹ ಮಾಡಲಾಗಿದೆ ಎಂದು ಮಾಜಿ ಸಚಿವ ಮುನಿರತ್ನ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.  

First Published Apr 21, 2024, 4:32 PM IST | Last Updated Apr 21, 2024, 4:33 PM IST

ಮತಾಂತರದ ಬಗ್ಗೆ ಮಾಜಿ ಸಚಿವ ಮುನಿರತ್ನ (Muniratna) ಶಾಕಿಂಗ್‌ ಹೇಳಿಕೆ ನೀಡಿದ್ದಾರೆ. ರಾಜ್ಯದಲ್ಲಿ ಮುಸ್ಲಿಂ ಮತಾಂತರ (Religious conversion) ಹೆಚ್ಚಾಗುತ್ತಿವೆ. ದಲಿತ ಹೆಣ್ಣು(Dalit girls) ಮಕ್ಕಳನ್ನು ಮತಾಂತರ ಮಾಡಲಾಗುತ್ತಿದೆ, ಅದರಂತೆ ಸಂಗೀತಾ (ಹೆಸರು ಬದಲಾಯಿಸಲಾಗಿದೆ) ಎಂಬ ಹುಡುಗಿಯ ಮತಾಂತರ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಈಕೆಗೆ ಮುಮ್ತಾಜ್ ಎಂದು ಹೆಸರಿಟ್ಟಿದ್ದಾರೆ. ಕಾಂಗ್ರೆಸ್ ಬಂದಮೇಲೆ ಇಂಥ ಘಟನೆ ಹೆಚ್ಚಾಗುತ್ತಿವೆ. ಸುಮಾರು ಹೆಣ್ಣು ಮಕ್ಕಳು ಅದರಲ್ಲೂ ದಲಿತ ಹೆಣ್ಣು ಮಕ್ಕಳನ್ನು ಮುಸ್ಲಿಂ(Muslim) ಆಗಿ ಕನ್ವರ್ಟ್ ಮಾಡುವ ಕೆಲಸ ಹೆಚ್ಚಾಗುತ್ತಿದೆ. ಈ ನಡುವೆ ಹೋಳಿ ದಿನ ಓರ್ವ ಯುವತಿಯನ್ನು ಅತ್ಯಾಚಾರ ಸಹ ಮಾಡಲಾಗಿದೆ ಎಂದು ಹೇಳಿರುವ ಅವರು, ಘಟನೆ ಸಂಬಂಧ ದೂರು ಕೊಡಲು ಹೋದರೆ ಧಮ್ಕಿ ಹಾಕಲಾಗಿದೆ. ಇಷ್ಟಾದರೂ ಸಹ ಯಾವುದೇ ಸ್ಥಳ ಮಹಜರು ಸಹ ಮಾಡಿಲ್ಲ. 9 ತಿಂಗಳಲ್ಲಿ ನನ್ನ ಕ್ಷೇತ್ರದಲ್ಲಿ ಓಡಾಡಲು ಆಗ್ತಿಲ್ಲ.  ಅವರು ಬೈಕ್ ವಿಲ್ಹಿಂಗ್ ಮಾಡ್ತಾರೆ ಎಂದು ಕಿಡಿಕಾರಿದ್ದಾರೆ. ಇಷ್ಟೇ ಅಲ್ಲದೆ ಈ ಘಟನೆ ಸಂಬಂಧ ನಾನು ಸಂಬಂಧಿಸಿದ ವಿಡಿಯೋ ಕಳುಹಿಸಿದ ಮೇಲೆ ಇಬ್ಬರನ್ನು ಬಂಧಿಸಲಾಗಿದೆ. ಆದರೆ ಪೋಕ್ಸೋ ಕೇಸ್ ಹಾಕಿಲ್ಲ. 15 ವರ್ಷದ ದಲಿತ ಹೆಣ್ಣು ಮಗು ಮೇಲೆ ರೇಪ್ ಮಾಡಲಾಗಿದೆ. ಕಾಂಗ್ರೆಸ್ ಪಕ್ಷದ ನಾಯಕರು ಆರೋಪಿಗಳನ್ನು ರಕ್ಷಣೆ ಮಾಡಿದ್ದಾರೆ. ನನ್ನ ಗಮನಕ್ಕೆ ಬಂದಿಲ್ಲ ಅಂದರೆ ಕೇಸ್ ಆಗ್ತಿರಲಿಲ್ಲ ಎಂದು ಕಾಂಗ್ರೆಸ್‌ ವಿರುದ್ಧ ಹರಿಹಾಯ್ದಿದ್ದಾರೆ.

ಇದನ್ನೂ ವೀಕ್ಷಿಸಿ:  HD Kumaraswamy Interview: ಬಿಜೆಪಿ-ಜೆಡಿಎಸ್ ಮೈತ್ರಿ ಕುದುರಿದ್ದು ಹೇಗೆ ಗೊತ್ತಾ..? ಎಚ್‌ಡಿಕೆ ಆರೋಗ್ಯ ಹೇಗಿದೆ ಏನ್ ಆಗಿತ್ತು?