ಇದು ಕಾಂತಾರ ಸಿನಿಮಾ ನೆನಪಿಸುವ ದೃಶ್ಯ ! ತಂದೆ ಸಾವಿನ ನಂತರ ಮಕ್ಕಳಿಗೆ ದೈವನರ್ತಕನ ಹೊಣೆ!

ದೈವ ನರ್ತಕನ ಸಾವಿನ ಬಳಿಕ ಆತನ ಮಕ್ಕಳನ್ನೇ ನರ್ತಕರನ್ನಾಗಿ ದೈವ ನೇಮಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಎಡಮಂಗಲದ ಶಿರಾಡಿಯಲ್ಲಿ ನಡೆದಿದೆ.
 

Share this Video
  • FB
  • Linkdin
  • Whatsapp

ಮಂಗಳೂರು: ದೈವ ನರ್ತನದ ಹೊತ್ತಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದ ದೈವ ನರ್ತಕನ(Daivanarthaka) ಮಕ್ಕಳನ್ನೇ ನರ್ತಕರನ್ನಾಗಿ ದೈವ ನೇಮಿಸಿರುವ ಘಟನೆ ದಕ್ಷಿಣ ಕನ್ನಡ(Dakshina Kannada) ಜಿಲ್ಲೆಯ ಕಡಬ ತಾಲೂಕಿನ ಎಡಮಂಗಲದ ಶಿರಾಡಿಯಲ್ಲಿ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 'ಕಾಂತಾರ'(Kantara) ಸಿನಿಮಾವನ್ನು ಹೋಲುವ ದೃಶ್ಯವೊಂದು ನಡೆದಿದೆ. ಕಳೆದ 2023ರ ಮಾರ್ಚ್‌ನಲ್ಲಿ ದೈವ ನರ್ತನದ ವೇಳೆ ಕಾಂತು ಅಜಿಲ ಎನ್ನುವರು ಕುಸಿದು ಬಿದ್ದು ಸಾವಿಗೀಡಾಗಿದ್ದರು. ಕಾಂತು ಅಜಿಲ ಸಾವಿನ ಬಳಿಕ ಗ್ರಾಮಸ್ಥರು ಹೊಸ ದೈವದ ನರ್ತಕನ ಹುಡುಕಾಟದಲ್ಲಿದ್ದರು. ದೈವಜ್ಞರ ಪ್ರಶ್ನೆಯಲ್ಲಿ ಕಂಡುಬಂದಂತೆ ಕಾಂತು ಅಜಿಲರ ಮಕ್ಕಳಾದ ಮೋನಪ್ಪ ಮತ್ತು ದಿನೇಶ್‌ರನ್ನು ಮುಂದಿನ ದೈವ ನರ್ತಕರನ್ನಾಗಿ ನೇಮಿಸಲಾಯಿತು. ದೈವ ತನ್ನ ಅವಾಹನೆಯನ್ನು ಹೊಸದಾಗಿ ನೇಮಕವಾದ ದೈವ ನರ್ತಕರ ಮೂಲಕ ತೋರ್ಪಡಿಸಲಿದೆ.

ಇದನ್ನೂ ವೀಕ್ಷಿಸಿ: ಕೆಜಿಎಫ್ ಕಿಂಗ್ ಯಶ್ ಜಾಗಕ್ಕೆ ಡಿವೈನ್ ಸ್ಟಾರ್ ಎಂಟ್ರಿ..! ರಾಕಿ ಭಾಯ್ ಅಚ್ಚು ಮೆಚ್ಚಿನ ಜಾಹೀರಾತು ಕಿತ್ತುಕೊಂಡ ರಿಷಬ್..!

Related Video