ಅನ್ನದಾತನಿಗೆ ಮತ್ತೊಂದು ಸಂಕಷ್ಟ: ಏಕಾಏಕಿ ಸಾವಿರಾರು ಎಕರೆ ಭತ್ತದ ಗದ್ದೆಯಲ್ಲಿ ಬಿರುಕು !
ರಾಜ್ಯ ಸರ್ಕಾರ ಬೆಳಗಾವಿ ರೈತರಿಗೆ ಕೇವಲ ಎರಡು ಗಂಟೆ ತ್ರಿಫೆಸ್ ವಿದ್ಯುತ್ ನೀಡುತ್ತಿರುವುದರಿಂದ ಬೆಳೆಯನ್ನು ಕಳೆದುಕೊಳ್ಳುವ ಭೀತಿಯಲ್ಲಿ ರೈತನಿದ್ದಾನೆ.
ಬೆಳಗಾವಿ: ಜಿಲ್ಲೆಯ ಅನ್ನದಾತನಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಏಕಾಏಕಿ ಸಾವಿರಾರು ಎಕರೆ ಭತ್ತದ ಗದ್ದೆಯಲ್ಲಿ(Land) ಬಿರುಕು ಕಾಣಿಸಿಕೊಂಡಿದೆ. ಹಾಗಾಗಿ ಬೆಳೆಯನ್ನು ಕಳೆದುಕೊಳ್ಳುವ ಭೀತಿಯಲ್ಲಿ ಬೆಳಗಾವಿಯ(belagavi) ರೈತರು(farmer) ಇದ್ದಾರೆ. ಕಡೋಲಿ ಗ್ರಾಮದ ಸಾವಿರಾರು ಎಕರೆ ಭೂಮಿಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಗದ್ದೆಗಳಿಗೆ ನೀರುಣಿಸಲು ತ್ರಿಫೆಸ್ ವಿದ್ಯುತ್ ಅಭಾವ ಇರುವುದರಿಂದ ಈ ಸಮಸ್ಯೆ ಎದುರಾಗಿದೆ. ಏಳು ಗಂಟೆ ವಿದ್ಯುತ್(Electricity) ಬದಲು ಕೇವಲ ಎರಡು ಗಂಟೆ ತ್ರಿಫೆಸ್ ವಿದ್ಯುತ್ ನೀಡಲಾಗುತ್ತಿದೆ. ರಾಜ್ಯಾದ್ಯಂತ ಜನರಿಗೆ ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಕೊಡಲಾಗುತ್ತಿದೆ. ಹೀಗಾಗಿ ಮತ್ತೊಂದೆಡೆ ತ್ರಿಫೆಸ್ ವಿದ್ಯುತ್ ಕಡಿತಕ್ಕೆ ಸರ್ಕಾರ ಮುಂದಾಗಿದೆ.ಹೀಗಾಗಿ ಬೋರ್‌ವೆಲ್, ಬಾವಿಗಳು ಇದ್ದರೂ ಗದ್ದೆಗಳಿಗೆ ನೀರನ್ನು ಹರಿಸಲು ಆಗುತ್ತಿಲ್ಲ.
ಇದನ್ನೂ ವೀಕ್ಷಿಸಿ: ಏಳು ವರ್ಷಗಳಿಂದ ಕೆಲಸಕ್ಕೆ ಚಕ್ಕರ್.. ಸಂಬಳಕ್ಕೆ ಹಾಜರ್..!