ರಾಜ್ಯಕ್ಕೆ ಕೊರೋನಾಘಾತ;  ಒಂದೇ ದಿನ 35 ಪ್ರಕರಣಗಳು! ಎಲ್ಲೆಲ್ಲಿ?

ಕೊರೋನಾ ವಿರುದ್ಧದ ಹೋರಾಟ/ ಗುರುವಾರ ಆತಂಕ ತಂದ ಪ್ರಕರಣಗಳು/ ಬೆಳಗಾವಿ ಮತ್ತು ವಿಜಯಪುರದಲ್ಲಿ ಸೋಂಕಿತ ಪ್ರಕರಣಗಳ ಸಂಖ್ಯೆ ಒಂದೇ ಸಾರಿ ಹೆಚ್ಚಳ

First Published Apr 16, 2020, 8:09 PM IST | Last Updated Apr 16, 2020, 8:11 PM IST

ಬೆಂಗಳೂರು(ಏ. 16)  ಕರ್ನಾಟಕದಲ್ಲಿ ಕೊರೋನಾ ಆತಂಕ  ಗುರುವಾರದ ಮಟ್ಟಿಗೆ ಡಬಲ್ ಆಘಾತ ನೀಡಿದೆ. ಕರ್ನಾಟಕದಲ್ಲಿ ಒಟ್ಟಾರೆ 315 ವ್ಯಕ್ತಿಗಳಿಗೆ ಕೊರೋಣಾ ಸೋಂಕು ಖಚಿತವಾಗಿದ್ದು, ಈವರೆಗೆ 82 ಸೋಂಕಿತರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಅಧಿಕೃತವಾಗಿ ತಿಳಿಸಿದ್ದಾರೆ.

ಕೊರೋನಾ ತಡೆಗೆ ಆಯುರ್ವೇದದಲ್ಲಿ ಮದ್ದಿದೆ

ಬೆಳಗಾವಿ ಮತ್ತು ವಿಜಯಪುರಲ್ಲಿ ನಿರೀಕ್ಷೆಗೂ ಮೀರಿ ಕೊರೋನಾ ಸೋಂಕಿತ ಪ್ರಕರಣ ಪತ್ತೆಯಾಗಿದ್ದು ಮುಂದೇನು ಎಂಬ ಚಿಂತೆ ಕಾಡುವಂತೆ ಮಾಡಿದೆ.

"
 

Video Top Stories