ಮಹೇಶ್ ಬಾಬು ಜೊತೆ ಶ್ರೀಲೀಲಾ ಲುಂಗಿ ಡ್ಯಾನ್ಸ್‌: ಗುಂಟೂರು ಖಾರಂ ಸಿಕ್ಕಾಪಟ್ಟೆ ಘಾಟು ನಾಟು!

ಮಹೇಶ್ ಬಾಬು ಜೊತೆ ಶ್ರೀಲೀಲಾ ಲುಂಗಿ ಡ್ಯಾನ್ಸ್!
‘ಗುಂಟೂರು ಖಾರಂ’ ಸಿಕ್ಕಾಪಟ್ಟೆ ಘಾಟು ನಾಟು!
ಟಾಲಿವುಡ್ ಟಾಪ್ ಹೀರೋಯಿನ್ ಮಾಸ್ ಡ್ಯಾನ್ಸ್

First Published Nov 12, 2023, 10:46 AM IST | Last Updated Nov 12, 2023, 10:46 AM IST

ಲುಂಗಿ ಡ್ಯಾನ್ಸ್ ಅಂದ್ರೆ ನಮಗೆ ನೆನಪಾಗೋದೆ ಚೆನ್ನೈ ಎಕ್ಸ್‌ಪ್ರೆಸ್‌ನ ಶಾರೂಖಾನ್ ದೀಪಿಕಾ ಈ ಲುಂಗಿ ಡ್ಯಾನ್ಸ್‌ ಹಾಡು. ಇದೀಗ  ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು(Mahesh Babu) ಶ್ರೀಲೀಲಾ ಜೊತೆ ಲುಂಗಿ ಡ್ಯಾನ್ಸ್‌(Lungi dance) ಮಾಡ್ತಾರಂತ ಸುದ್ದಿಯಾಗ್ತಿದೆ. ಹಾಗೆ ನೋಡಿದ್ರೆ ಶ್ರೀಲೀಲಾಗೂ(Srileela) ಮೊದಲು ರಶ್ಮಿಕಾ ಜೊತೆ ಮಹೇಶ್ ಬಾಬು ಲುಂಗಿ ಕಟ್ಟಿ  ಮೈಂಡ್ ಬ್ಲಾಕ್ ಆಗೋ ಹಾಗೆ ಸೆಪ್ಟ್‌ ಹಾಕಿದ್ರು. ಇನ್ನು ಶ್ರೀಲೀಲಾ ಕೂಡ ಡಾನ್ಸ್‌ನಿಂದ ಈಗಾಗಲೇ ಫುಲ್ ಸ್ವಿಂಗ್‌ನಲ್ಲಿದ್ದಾರೆ. ಟಾಲಿವುಡ್‌ನ(Tollywood)ಟಾಪ್ ಹೀರೋಯಿನ್ ಆಗಿದ್ದಾರೆ ಕಿಸ್ ಚೆಲುವೆ. ಗುಂಟಾರು ಕಾರಂ ಸಿನಿಮಾದಲ್ಲಿ ಮಹೇಶ್ ಬಾಬು ಜೊತೆ ನಟಿಸುತ್ತಿರೋ ಶ್ರೀಲೀಲಾ. ಫುಲ್ ಮಾಸಾಗಿ ಒಂದು ಟಪ್ಪಾಂಗುಚ್ಚಿ ಸಾಂಗ್ ಮಾಡಲಿದ್ದು, ಅದು ಈ ಹಿಂದಿನ ಎಲ್ಲಾ ಮಾಸ್ ಸಾಂಗ್‌ಗಳನ್ನು ಮೀರಿಸುತ್ತದೆ ಎಂದು ಟಾಕ್ ಈಗಾಗಲೇ ಶುರುವಾಗಿದೆ. ಮಹೇಶ್ ಬಾಬು ಜೊತೆ ಶ್ರೀಲೀಲಾ ಲುಂಗಿ ಡಾನ್ಸ್ ಹೇಗಿರುತ್ತೋ ಅನ್ನೋ ಕುತೂಹಲದಲ್ಲಿದ್ದಾರೆ ಶ್ರೀಲೀಲಾ ಫ್ಯಾನ್ಸ್. ತ್ರಿವಿಕ್ರಮ್- ಮಹೇಶ್ ಬಾಬು ಜೊತೆ ಶ್ರೀಲೀಲಾ ಮೊದಲ ಬಾರಿಗೆ ಜೊತೆಯಾಗಿ ಸಿನಿಮಾ ಮಾಡಿದ್ದಾರೆ. 

ಇದನ್ನೂ ವೀಕ್ಷಿಸಿ:  ಸಮಂತಾ ಈ ಪಾಟಿ ಹಾಟ್ ಆಗಿದ್ದು ಇದೇ ಮೊದಲು! ಬ್ಯಾಕ್ಲೆಸ್ ಡ್ರೆಸ್‌ನಲ್ಲಿ ಮಿಂಚಿದ ನಟಿ