ಕೊರೋನಾ ಸೇವೆ ಮಾಡುತ್ತಲೇ ಜೀವ ಬಿಟ್ಟ ವೈದ್ಯ..!
ಹಾಸನದ ಆಲೂರಿನಲ್ಲಿ ವೈದ್ಯರಾಗಿ ಶಿವಕಿರಣ್ ಕರ್ತವ್ಯ ನಿರ್ವಹಿಸುತ್ತಿದ್ದರು. ಫೀವರ್ ಕ್ಲೀನಿಕ್, ಸ್ವ್ಯಾಬ್ ಸಂಗ್ರಹ, ಸೋಂಕಿತರಿಗೆ ಚಿಕಿತ್ಸೆ ಹೀಗೆ 85 ದಿನಕಾಲ ಕೊರೋನಾ ವಾರಿಯರ್ಸ್ ಆಗಿ ಶಿವಕಿರಣ್ ಹೋರಾಡಿದ್ದರು. ಜೂನ್ 03ರಂದು ಆರೋಗ್ಯ ಕೇಂದ್ರದಲ್ಲೇ ಶಿವಕಿರಣ್ ಕುಸಿದು ಬಿದ್ದಿದ್ದರು.
ಹಾಸನ(ಜೂ.11): ಮೂರು ತಿಂಗಳಿನಿಂದ ರಜೆ ಪಡೆಯದೇ ಕಾರ್ಯ ನಿರ್ವಹಿಸುತ್ತಿದ್ದ ಹಾಸನದ ವೈದ್ಯ ಶಿವಕಿರಣ್ ಕೊರೋನಾ ಸೇವೆ ಮಾಡುತ್ತಲೇ ಕೊನೆಯುಸಿರೆಳೆದಿದ್ದಾರೆ. ಬ್ರೈನ್ ಸ್ಟ್ರೋಕ್‌ನಿಂದಾಗಿ ಮಕ್ಕಳ ತಜ್ಞ ಡಾ.ಶಿವಕಿರಣ್ ಇಹಲೋಕ ತ್ಯಜಿಸಿದ್ದಾರೆ.
ಹಾಸನದ ಆಲೂರಿನಲ್ಲಿ ವೈದ್ಯರಾಗಿ ಶಿವಕಿರಣ್ ಕರ್ತವ್ಯ ನಿರ್ವಹಿಸುತ್ತಿದ್ದರು. ಫೀವರ್ ಕ್ಲೀನಿಕ್, ಸ್ವ್ಯಾಬ್ ಸಂಗ್ರಹ, ಸೋಂಕಿತರಿಗೆ ಚಿಕಿತ್ಸೆ ಹೀಗೆ 85 ದಿನಕಾಲ ಕೊರೋನಾ ವಾರಿಯರ್ಸ್ ಆಗಿ ಶಿವಕಿರಣ್ ಹೋರಾಡಿದ್ದರು. ಜೂನ್ 03ರಂದು ಆರೋಗ್ಯ ಕೇಂದ್ರದಲ್ಲೇ ಶಿವಕಿರಣ್ ಕುಸಿದು ಬಿದ್ದಿದ್ದರು.
ಕಾವೇರಿ ಒಡಲಲ್ಲಿ ಭರ್ಜರಿ ರೇವ್ ಪಾರ್ಟಿ! ಮಂಡ್ಯ ಪೊಲೀಸರು ಎಲ್ಲಿ?
ಅತಿಯಾದ ಕೆಲಸದ ಒತ್ತಡದಿಂದಾಗಿ ಡಾಕ್ಟರ್ ದಣಿದಿದ್ದರು. ಬುಧವಾರ ಶಿವಕಿರಣ್ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಡಾಕ್ಟರ್ ಶಿವಕಿರಣ್ ಅವರಿಗೆ ಸುವರ್ಣ ನ್ಯೂಸ್ ವತಿಯಿಂದ ಬಿಗ್ ಸೆಲ್ಯೂಟ್. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ