ಬೆಂಗಳೂರಿನ ಟೆಕ್ಕಿ ಶಿವಮೊಗ್ಗದಲ್ಲಿ ಭರ್ಜರಿ ಕೃಷಿ ಕೆಲಸ..!
ಅಪರೂಪ ಎಂಬಂತೆ ಟೆಕ್ಕಿಯೊಬ್ಬ ಲಾಕ್‌ಡೌನ್ ಅವಧಿಯಲ್ಲಿ ಪಕ್ಕಾ ರೈತನಾಗಿ ಬದಲಾಗಿದ್ದಾರೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸೂಟು-ಬೂಟು ಹಾಕುತ್ತಿದ್ದಾತ ಇದೀಗ ಪಕ್ಕಾ ರೈತನ ಗೆಟಪ್ಪಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಮನೆಯಲ್ಲಿರುವ ಪೋಷಕರಿಗೆ ಕೃಷಿ ಕೆಲಸಕ್ಕೆ ನೆರವಾಗುತ್ತಿದ್ದಾರೆ.
ಶಿವಮೊಗ್ಗ(ಮೇ.07): ಕೊರೋನಾ ವೈರಸ್ ಜನಜೀವನದ ಮೇಲೆ ಭೀಕರ ಪರಿಣಾಮವನ್ನೇ ಬೀರಿದೆ. ದೇಶಾದ್ಯಂತ ಲಾಕ್‌ಡೌನ್ ಜಾರಿಯಾಗುತ್ತಿದ್ದಂತೆ ಉದ್ಯೋಗ ನಿಮಿತ್ತ ಬೆಂಗಳೂರಿನಲ್ಲಿ ಇದ್ದವರೆಲ್ಲರೂ ಊರು ಸೇರುಕೊಂಡಿದ್ದಾರೆ. ಊರಿಗೆ ಬಂದ ಹಲವರು ಮೊಬೈಲ್ ಹಿಡಿದುಕೊಂಡು ಟೈಂ ಪಾಸ್ ಮಾಡುತ್ತಿದ್ದಾರೆ.
ಇಂತವರ ನಡುವೆ ಅಪರೂಪ ಎಂಬಂತೆ ಟೆಕ್ಕಿಯೊಬ್ಬ ಲಾಕ್‌ಡೌನ್ ಅವಧಿಯಲ್ಲಿ ಪಕ್ಕಾ ರೈತನಾಗಿ ಬದಲಾಗಿದ್ದಾರೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸೂಟು-ಬೂಟು ಹಾಕುತ್ತಿದ್ದಾತ ಇದೀಗ ಪಕ್ಕಾ ರೈತನ ಗೆಟಪ್ಪಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಮನೆಯಲ್ಲಿರುವ ಪೋಷಕರಿಗೆ ಕೃಷಿ ಕೆಲಸಕ್ಕೆ ನೆರವಾಗುತ್ತಿದ್ದಾರೆ. ಐಟಿ-ಬಿಟಿ ಯಲಿ ಕೆಲಸ ಮಾಡ್ತಿದ್ರು ಕೃಷಿ ಕಾಯಕ ಮರ್ತಿಲ್ಲ. ಸಮಯ ವ್ಯರ್ಥ ಮಾಡೋ ಜನ್ರ ಮಧ್ಯೆ ಈ ಟೆಕ್ಕಿ ತುಂಬ ಭಿನ್ನವಾಗಿ ನಿಲ್ತಾರೆ.
ಕೊಡವ ಕೌಟುಂಬಿಕ ಹಾಕಿ ಟೂರ್ನಿ ಜನಕ ಪಾಂಡಂಡ ಕುಟ್ಟಪ್ಪ ಇನ್ನಿಲ್ಲ
ಮಹಾದೇವಪುರ ಬಾಗ್ಮನೆ ಟೆಕ್ ಪಾರ್ಕ್ ನ ಡೆಲ್ ಇಎಂಸಿ ಯಲ್ಲಿ ಕೆಲಸ ಮಾಡಿಕೊಂಡಿದ್ದ ಟೆಕ್ಕಿ ಇದೀಗ ಯಾವ ರೈತನಿಗೂ ಕಡಿಮೆಯಿಲ್ಲ ಎಂಬಂತೆ ಕೆಲಸ ಮಾಡುತ್ತಿದ್ದಾರೆ. ಟೆಕ್ಕಿ ಮನೆಯವರು 70 ಕ್ವಿಂಟಾಲ್ ಜೋಳ ಬೆಳೆದಿದ್ದು, ಇದೀಗ ಶುಂಠಿ ಬಿತ್ತನೆ ಮಾಡಿದ್ದಾರೆ. ಮನೆಯವರ ಜತೆ ಟೆಕ್ಕಿ ಹೆಗಲಿಗೆ ಹೆಗಲುಕೊಟ್ಟು ದುಡಿಯುತ್ತಿದ್ದಾರೆ. ಈ ಕುರಿತಾದ ಒಂದು ಝಲಕ್ ಇಲ್ಲಿದೆ ನೋಡಿ.