Asianet Suvarna News Asianet Suvarna News

ಶಂಕಿತ ಬಸ್‌ನಲ್ಲಿ ಬಂದ ಸುಳಿವು ಸಿಕ್ಕಿದ್ದು, ಸ್ಫೋಟದ ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು: ಸಿಎಂ

ಮೂವರು ಗಾಯಾಳುಗಳ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಂಕಿತ ಬಸ್‌ನಲ್ಲಿ ಬಂದು ಹೋಟೆಲ್‌ಗೆ ತೆರಳಿದ್ದಾನೆ ಎಂದು ಸಿಎಂ ಸಿದ್ದರಾಮಯ್ಯ ಬ್ರೂಕ್‌ ಫೀಲ್ಡ್‌ ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಹೇಳಿದ್ದಾರೆ.

ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಬ್ರೂಕ್ ಫೀಲ್ಡ್ ಆಸ್ಪತ್ರೆ (Brookfield Hospital) ಭೇಟಿ ನೀಡಿದ ಬಳಿಕ ಸಿಎಂ ಸಿದ್ದರಾಮಯ್ಯ(Siddaramaiah)ಹೇಳಿದ್ದಾರೆ. ಉತ್ತಮ ಚಿಕಿತ್ಸೆ ನೀಡಲು ವೈದ್ಯರಿಗೆ ಸೂಚಿಸಲಾಗಿದೆ. ಎಲ್ಲ ರೀತಿಯ ಚಿಕಿತ್ಸಾ(Treatment) ಖರ್ಚು ಸರ್ಕಾರವೇ ಭರಿಸಲಿದೆ. ಮೂವರು ಗಾಯಾಳುಗಳ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಂಕಿತ ಬಸ್‌ನಲ್ಲಿ ಬಂದು ಹೋಟೆಲ್‌ಗೆ ತೆರಳಿದ್ದಾನೆ. ಹೋಟೆಲ್‌ನಲ್ಲಿ ಇಡ್ಲಿ ತಿಂದಿದ್ದಾನೆ, ಸಿಸಿಟಿವಿಯಲ್ಲಿ ಎಲ್ಲ ಪತ್ತೆಯಾಗಿದೆ. ಮಾಸ್ಕ್ ಹಾಕಿದ್ದಾನೆ, ಕಣ್ಣಿಗೆ ಗ್ಲಾಸ್ ಹಾಕಿದ್ದಾನೆ. ಶಂಕಿತ ಬಸ್‌ನಲ್ಲಿ ಬಂದ ಸುಳಿವು ಸಿಕ್ಕಿದೆ. ಸ್ಫೋಟದ ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು. ಯಾರು ಮಾಡಿದ್ದು, ಯಾಕೆ ಮಾಡಿದ್ದು ಎಂಬ ತನಿಖೆ ನಡೆಯುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಇದನ್ನೂ ವೀಕ್ಷಿಸಿ:  70ಕ್ಕೂ ಹೆಚ್ಚಿನ ಹಾಲಿ ಎಂಪಿಗಳಿಗೆ ಈ ಬಾರಿ ಟಿಕೆಟ್ ಡೌಟ್..? ತಮಿಳುನಾಡಿನಲ್ಲಿ ಕಮಲ ಅರಳಿಸಲು ಮೋದಿ ಮಾಸ್ಟರ್ ಪ್ಲಾನ್