70ಕ್ಕೂ ಹೆಚ್ಚಿನ ಹಾಲಿ ಎಂಪಿಗಳಿಗೆ ಈ ಬಾರಿ ಟಿಕೆಟ್ ಡೌಟ್..? ತಮಿಳುನಾಡಿನಲ್ಲಿ ಕಮಲ ಅರಳಿಸಲು ಮೋದಿ ಮಾಸ್ಟರ್ ಪ್ಲಾನ್

18 ರಾಜ್ಯಗಳು ಮತ್ತು 150 ಕ್ಷೇತ್ರಗಳ ಕುರಿತು ನಡೆದ ಚರ್ಚೆ
ಈ ಬಾರಿಯೂ ಹೊಸಬರಿಗೆ ಮತ್ತು ಮಹಿಳೆಯರಿಗೆ ಆಧ್ಯತೆ
ಕೆಲಸ ಮಾಡದೇ ಇದ್ದವರಿಗೆ ಮೋದಿ ಕೊಡ್ತಾರಾ ಶಾಕ್..? 

First Published Mar 2, 2024, 5:34 PM IST | Last Updated Mar 2, 2024, 5:34 PM IST

ಲೋಕ ಸಮರಕ್ಕೆ ಬಿಜೆಪಿ ಮೊದಲ ಮುದ್ರೆ ಒತ್ತಿದೆ. ಎಲೆಕ್ಷನ್ ಕಮಿಟಿಯೊಂದಿಗೆ ಮೋದಿ(Narendra Modi) ಮೊದಲ ಮೀಟಿಂಗ್ ನಡೆಸಿದ್ದಾರೆ. ರಾತ್ರಿ ಆರಂಭವಾದ ಮೀಟಿಂಗ್ ಬೆಳಗಿನ ಜಾವದವರೆಗೂ ನಡೆದ ಮೀಟಿಂಗ್‌ನಲ್ಲಿ ಹಲವಾರು ಪ್ರಮುಖ ಚರ್ಚೆಗಳು ನಡೆದಿವೆ. ಕೆಲವು ಕ್ಷೇತ್ರಗಳ ಕ್ಯಾಂಡಿಡೇಟ್‌ಗಳ ಪಟ್ಟಿ ಕೂಡ ರೆಡಿಯಾಗಿದೆಯಂತೆ. ಬಿಜೆಪಿ(BJP) ಪಾಳೆಯದಲ್ಲಿ ಲೋಕಸಭೆ ಎಲೆಕ್ಷನ್ ತಯಾರಿಗೆ ಅಧಿಕೃತ ಮುದ್ರೆ ಬಿದ್ದಿದೆ. ನರೇಂದ್ರ ಮೋದಿ ಮೊದಲ ಮೀಟಿಂಗ್ ನಡೆಸಿದ್ದಾರೆ. ರಾತ್ರಿ 10:30ಕ್ಕೆ ಆರಂಭವಾದ ಮೀಟಿಂಗ್(Meeting) ಬೆಳಗಿನ ಜಾವ 3:15ರ ವರೆಗೂ ಮೀಟಿಂಗ್ ನಡೆದಿದೆ. ನಾಲ್ಕು ಗಂಟೆಗೂ ಹೆಚ್ಚು ಸಮಯಗಳ ಕಾಲ ನಡೆದ ಈ ಮೀಟಿಂಗ್‌ನಲ್ಲಿ ಹಲವು ಪ್ರಮುಖ ಕ್ಷೇತ್ರಗಳ ಕುರಿತು ಚರ್ಚೆಗಳು ನಡೆದಿವೆ. ಪ್ರಧಾನಿಗಳ ಮನೆಯಲ್ಲಿ ನಡೆದ ಈ ಮೀಟಿಂಗ್ನಲ್ಲಿ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ, ಗೃಹ ಸಚಿವ ಅಮಿತ್ ಶಾ ಸೇರಿದಂತೆ, ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಪ್ರಕಾಶ್ ಜಾವ್ಡೇಕರ್, ಮನ್ಸುಖ್ ಮಾಂಡವಿಯಾ, ಪುಷ್ಕರ್ ಧಾಮಿ, ಪ್ರಮೋದ್ ಸಾವಂತ, ಭೂಪೇಂದ್ರ ಯಾದವ್, ಜೋತಿರಾದಿತ್ಯ ಸಿಂಧಿಯಾ, ಕೇಶವ್ ಮೌರ್ಯ ಮತ್ತು ಉತ್ತರ ಪ್ರದೇಶ್ ಸಿಎಂ ಯೋಗಿ ಆದಿತ್ಯನಾಥ್ ಭಾಗಿಯಾಗಿದ್ದರು. ಲೋಕಸಭೆ ಎಲೆಕ್ಷನ್‌ಗೆ(Loksabha Election) ನಡೆದ ಮೊದಲ ಮೀಟಿಂಗ್ನಲ್ಲಿ, ಮೋದಿ ಈ ಪ್ರಮುಖ ನಿರ್ಧಾರವನ್ನು ಕೈಗೊಂಡಿದ್ದಾರೆಂದು ಹೇಳಲಾಗುತ್ತಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಒಟ್ಟು 303 ಸೀಟ್ಗಳನ್ನು ಗೆದ್ದಿದೆ. ಈಗಿರುವ 303 ಎಂಪಿಗಳಲ್ಲಿ 70ಕ್ಕೂ ಹೆಚ್ಚಿನ ಎಂಪಿಗಳಿಗೆ ಈ ಬಾರಿ ಟಿಕೆಟ್ ನೀಡುವುದು ಡೌಟ್ ಎಂದು ಹೇಳಲಾಗುತ್ತಿದೆ. 

ಇದನ್ನೂ ವೀಕ್ಷಿಸಿ:  ಅಲ್ಲೇ ಇಡ್ಲಿ ತಿಂದವನು ಅಲ್ಲೇ ಬಾಂಬೂ ಇಟ್ಟನಾ..? ರಾಮೇಶ್ವರಂ ಕೆಫೆಯೇ ಟಾರ್ಗೆಟ್ ಆಗಿದ್ದು ಯಾಕೆ..?

Video Top Stories