ಜೈನಮುನಿಗಳಿಗೆ ರಕ್ಷಣೆ ಕೊಡಬೇಕು, ಕೊಲೆಗಡುಕರಿಗೆ ಶಿಕ್ಷೆ ಆಗಬೇಕು: ಗುಣಧರನಂದಿ ಮಹಾರಾಜ್‌ ಸ್ವಾಮೀಜಿ

ಕಾಂಗ್ರೆಸ್‌ ಸರ್ಕಾರಕ್ಕೆ ನಮ್ಮಂತ ಅಲ್ಪಸಂಖ್ಯಾತರು ಬೇಡವಾಗಿದ್ದಾರೆ. ಬೆಳಗಾವಿ ಜೈನಮುನಿಗಳ ಹತ್ಯೆಗೆ ಪ್ರಕರಣಕ್ಕೆ ನ್ಯಾಯಸಿಗಬೇಕು ಎಂದು ವರೂರಿನ ಗುಣಧರನಂದಿ ಮಹಾರಾಜ್‌ ಸ್ವಾಮೀಜಿ ಆಗ್ರಹಿಸಿದ್ದಾರೆ. 

First Published Jul 9, 2023, 11:40 AM IST | Last Updated Jul 9, 2023, 11:40 AM IST

ಹುಬ್ಬಳ್ಳಿ: ಬೆಳಗಾವಿಯ ಜೈನಮುನಿ ಹತ್ಯೆಗೆ(Jain Muni murder) ನ್ಯಾಯ ಸಿಗಬೇಕು ಎಂದು ಹುಬ್ಬಳ್ಳಿಯ ವರೂರಿನ ಗುಣಧರನಂದಿ ಮಹಾರಾಜ್‌ ಸ್ವಾಮೀಜಿ(
Gunadharanandi Maharaj Swamiji) ಆಗ್ರಹಿಸಿದ್ದಾರೆ. ಈ ಪ್ರಕರಣದ ಹಂತಕರಿಗೆ ಶಿಕ್ಷೆ ಆಗುವವರೆಗೆ ಆಹಾರ ಸೇವಿಸುವುದಿಲ್ಲ ಎಂದು ಸ್ವಾಮೀಜಿ ಹೇಳಿದ್ದಾರೆ. ಶಾಂತಿಪ್ರಿಯ ಸಮಾಜದ ಶ್ರೀಗಳ ಬರ್ಬರ ಹತ್ಯೆ ನೋವುಂಟು ಮಾಡಿದೆ. ಈವರೆಗೂ ಸಿಎಂ ಸಿದ್ದರಾಮಯ್ಯ( CM Siddaramaiah) ಸಂತಾಪ ಸೂಚಿಸದಿರುವುದು ಆಘಾತಕಾರಿ ಸಂಗತಿ. ಕಾಂಗ್ರೆಸ್‌ ಸರ್ಕಾರಕ್ಕೆ ನಮ್ಮಂತ ಅಲ್ಪಸಂಖ್ಯಾತರು ಬೇಡವಾಗಿದ್ದಾರೆ ಎಂದು ವರೂರಿನ ಗುಣಧರನಂದಿ ಮಹಾರಾಜ್‌ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದ್ದಾರೆ. ನಮ್ಮ ಜೈನ ಸಮಾಜಕ್ಕೆ, ಮುನಿಗಳಿಗೆ ಸುರಕ್ಷತೆ ನೀಡುತ್ತೇವೆ ಎಂದು ಲಿಖಿತ ಭರವಸೆ ನೀಡುವವರೆಗೂ ಸತ್ಯಾಗ್ರಹ ಮಾಡುತ್ತೇವೆ ಎಂದಿದ್ದಾರೆ. 

ಇದನ್ನೂ ವೀಕ್ಷಿಸಿ:  ಏಷ್ಯಾನೆಟ್ ಸುವರ್ಣ ನ್ಯೂಸ್‌ ವರದಿಯಿಂದ ಎಚ್ಚೆತ್ತ ಸರ್ಕಾರ: ಕಾರವಾರ ಟನಲ್‌ ಬಂದ್‌