ಇತರೆ ಮೀಸಲಾತಿ ಬಗ್ಗೆ ವರದಿ ಆಧರಿಸಿ ಕ್ರಮ: ಸಿಎಂ ಬೊಮ್ಮಾಯಿ
ಎಸ್.ಸಿ, ಎಸ್.ಟಿ ಮೀಸಲಾತಿ ಹೆಚ್ಚಳಕ್ಕೆ ರಾಜ್ಯಪಾಲರ ಅಂಕಿತ ಬಿದ್ದಿದ್ದು, ಇತರೆ ಮೀಸಲಾತಿ ಬಗ್ಗೆ ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಈಗಾಗಲೇ ಎಸ್.ಸಿ, ಎಸ್.ಟಿ ಮೀಸಲಾತಿ ಜಾರಿ ಕುರಿತು ಗೆಜೆಟ್ ನೋಟಿಫಿಕೇಶನ್ ಜಾರಿಯಾಗಿದ್ದು, ಸುಗ್ರೀವಾಜ್ಞೆಯನ್ನು ಉಭಯ ಸದನಗಳಲ್ಲಿ ಮಂಡನೆ ಮಾಡಲಾಗುವುದು ಎಂದು ತಿಳಿಸಿದರು. ಈ ಬಿಲ್ ಮೇಲೆ ಸುದೀರ್ಘ ಚರ್ಚೆ ನಡೆಸಲಾಗುವುದು, ಎರಡೂ ಸದನಗಳಲ್ಲಿ ಬಿಲ್ ಪಾಸ್ ಮಾಡಲಾಗುತ್ತದೆ. ಹಾಗೂ ಇತರ ಮೀಸಲಾತಿ ಬಗ್ಗೆ ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಹಾಲಿನ ಖರೀದಿ ದರ ಏರಿಸಲು ಆಗ್ರಹಿಸಿ, ಉಡುಪಿಯಲ್ಲಿ ಅಂಚೆ ಕಾರ್ಡ್ ಚಳುವಳಿ