ವಕ್ಫ್ ಆದಾಯದಲ್ಲಿ ಕೋಟಿ ಕೋಟಿ ಗೋಲ್‌ಮಾಲ್ ? ಸುಲ್ತಾನಿ, ಮದೀನಾ ಮಸೀದಿಗೆ ಮಹಾ ಮೋಸ..?

ಮುಸ್ಲಿಂ ಸಮುದಾಯದ ಅಭಿವೃದ್ಧಿಗೆ ಇರುವ ವಕ್ಫ್ ಬೋರ್ಡ್‌ನಲೇ ಮೋಸದಾಟ ಶುರುವಾಗಿದೆ. ಬಡ ಮುಸ್ಲಿಮರ ಏಳಿಗೆಗಾಗಿ ಬಳಸಬೇಕಾದ ಆದಾಯದಲ್ಲೇ ಭ್ರಷ್ಟಾಚಾರ ನಡೆಯುತ್ತಿದೆ. 

Share this Video
  • FB
  • Linkdin
  • Whatsapp

ವಕ್ಫ್ ಬೊರ್ಡ್ ಅಂದ್ರೆನೇ ಚಿನ್ನದ ಮೊಟ್ಟೆ. ದೇಶದಲ್ಲಿ ಅತೀ ಹೆಚ್ಚು ಆದಾಯಗಳಿಕೆಯಲ್ಲಿ ಮೂರನೇ ಸ್ಥಾನದಲ್ಲಿದೆ. ಮುಸ್ಲಿಂ ಸಮುದಾಯದ ಅಭಿವೃದ್ಧಿಯೇ ವಕ್ಫ್ ಮೂಲ ಉದ್ದೇಶವಾಗಿದೆ. ಆದ್ರೆ, ಉತ್ತರಕನ್ನಡ ಜಿಲ್ಲೆಯ ಶಿರಸಿ ವಕ್ಫ್ ಬೋರ್ಡ್‌ ಮಾತ್ರ ಇದಕ್ಕೆ ತದ್ವಿರುದ್ಧವಾಗಿದೆ. ಮಸೀದಿ ಆಸ್ತಿ ಹಾಗೂ ಆದಾಯದಲ್ಲೇ ಭಾರೀ ಗೋಲ್‌ಮಾಲ್ ಮಾಡಿರುವ ಆರೋಪ ಕೇಳಿಬಂದಿದೆ. ವಕ್ಫ್‌ ಬೋರ್ಡ್‌ನಡಿ (waqf borad)ಸುಮಾರು 11 ಎಕರೆಗಿಂತಲೂ ಹೆಚ್ಚು ಜಾಗ ಸೇರಿ ಸುಮಾರು 250ಕೋಟಿ ರೂ. ಮೌಲ್ಯದ ಆಸ್ತಿಯಿದೆ. ಇದರಲ್ಲಿ 64 ಅಂಗಡಿಗಳು, 26 ಮನೆಗಳು ಹಾಗೂ ಮೂರು ಖಾಲಿ ಜಾಗಗಳು ಈ ಬೋರ್ಡ್‌ಗೆ ಸೇರಿಕೊಂಡಿದೆ. ಇದೇ ವಕ್ಫ್‌ನಡಿ ಶಿರಸಿ(shirasi) ಪಟ್ಟಣದ ಸುಲ್ತಾನಿ ಮತ್ತು ಮದೀನಾ ಮಸೀದಿ(Medina Mosque) ಕೂಡಾ ಸೇರಿದೆ. ಆದ್ರೆ, ಈ ಮಸೀದಿಗೆ ದೊರೆಯಬೇಕಾಗಿದ್ದ ಆದಾಯದಲ್ಲೇ ಗೋಲ್‌ಮಾಲ್ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಶಿರಸಿಯಲ್ಲಿ ವಕ್ಫ್ ಆಸ್ತಿ ಮೇಲೆ ಮರ್ಕಝ್ ಎಂಬ ಸ್ವಯಂ ಘೋಷಿತ ಸಮಿತಿ ಅಧಿಕಾರ ಚಲಾಯಿಸ್ತಿದೆ. ವಕ್ಫ್ ಜಾಗದಲ್ಲಿ ಅಂಗಡಿ, ಹೋಟೆಲ್‌ಗಳನ್ನು ಕೇವಲ 40ರಿಂದ 500 ರೂಪಾಯಿವರೆಗೆ ಬಾಡಿಗೆಗೆ ನೀಡಿದ್ದಾರೆ. ಹೀಗೆ ಕಡಿಮೆ ಬಾಡಿಗೆಗೆ ಪಡೆದ ಕೆಲ ಅಂಗಡಿ ಮಾಲೀಕರು 35,000 ದಿಂದ 40,000ರೂಪಾಯಿವರೆಗೆ ಸಬ್ ಲೀಸ್‌ಗೆ ನೀಡಿ ಬಾಡಿಗೆ ಪಡೆದು ಭರ್ಜರಿ ಜೇಬು ತುಂಬಿಸಿಕೊಳ್ಳುತ್ತಿದ್ದಾರಂತೆ. ವಕ್ಫ್ ಬೋರ್ಡ್ ಚೇರ್‌ಮ್ಯಾನ್ ಹಾಗೂ ಸದಸ್ಯರೆ ಈ ಮಹಾ ಮೋಸದ ಜಾಲದ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದಾರೆ. 

ಇದನ್ನೂ ವೀಕ್ಷಿಸಿ: ಮಳೆ ಕೊರತೆ ಮಧ್ಯೆ ತಮಿಳುನಾಡಿಗೆ ನೀರು ರಿಲೀಸ್: ಸಿಟ್ಟಿಗೆದ್ದ ಕಾವೇರಿ ಕೊಳ್ಳದ ರೈತರಿಂದ ನೀರಿಗಿಳಿದು ಪ್ರೊಟೆಸ್ಟ್..!

Related Video