
ಕೊರೋನಾ ಸೋಂಕು ದೃಢ: ರಾತ್ರೋರಾತ್ರಿ ವಿಜಯಪುರದಲ್ಲಿ ಸೀಲ್‌ಡೌನ್!
ವಿಜಯಪುರದ ಚಪ್ಪರಬಂದ್ ಏರಿಯಾ ಸೀಲ್‌ಡೌನ್| ಚಪ್ಪರಬಂದ್ ಪ್ರದೇಶದಲ್ಲಿ ಬ್ಯಾರಿಕೇಡ್ ಹಾಕಲಾಗಿದ್ದು ಸುಮಾರು 2000 ಮನೆಗಳು ಲಾಕ್| ಕೋವಿಡ್ ಆಸ್ಪತ್ರೆಯಾಗಿ ಬದಲಾದ ಜಿಲ್ಲಾಸ್ಪತ್ರೆ|
ವಿಜಯಪುರ(ಏ.12): ರಾತ್ರೋರಾತ್ರಿ ನಗರದ ಚಪ್ಪರಬಂದ್ ಏರಿಯಾ ಸೀಲ್‌ಡೌನ್ ಆಗಿದೆ. ಈ ಪ್ರದೇಶದಲ್ಲಿ ಬ್ಯಾರಿಕೇಡ್ ಹಾಕಲಾಗಿದ್ದು ಸುಮಾರು 2000 ಮನೆಗಳು ಲಾಕ್ ಆಗಿವೆ. ಇದರಿಂದ ಜನರು ಮನೆ ಬಿಟ್ಟು ಹೊರಗಡೆ ಬರದಂತೆ ಪರಿಸ್ಥಿತಿ ನಿರ್ಮಾಣವಾಗಿದೆ.
Add Asianetnews Kannada as a Preferred Source

ಕೊರೊನಾ ಕುತ್ತಿಗೆಗೆ ಬಂದ್ರೂ ಭಾನುವಾರದ ಬಾಡೂಟ ಬೇಕಂತೆ ಇವರಿಗೆ!
ಜಿಲ್ಲಾಸ್ಪತ್ರೆ ಕೂಡ ದಿಢೀರ್ ಅಂತ ಕೋವಿಡ್ ಆಸ್ಪತ್ರೆಯಾಗಿ ಬದಲಾಗಿದೆ. ಚಪ್ಪರ್‌ಬಂದ್ ಪ್ರದೇಶದಲ್ಲಿ ಜರನು ಓಡಾಡೋದು ಬೇಡ ಎಂಬ ಮುಂಜಾಗ್ರತಾ ಕ್ರಮವಾಗಿ ಈ ಏರಿಯಾವನ್ನ ಸಂಪೂರ್ಣವಾಗಿ ಸೀಲ್‌ಡೌನ್ ಆಗಿದೆ. ನಿನ್ನೆ ರಾತ್ರಿ ಕೊರೋನಾ ಕೇಸ್ ಪತ್ತೆಯಾದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಈ ನಿರ್ಧಾರಕ್ಕೆ ಬಂದಿದೆ.