Asianet Suvarna News Asianet Suvarna News

ನಂದಿಬೆಟ್ಟಕ್ಕೆ ಹೋದೋರು ಈ ಜಾಗ ಮಿಸ್ ಮಾಡದಿರಿ! ಅಚ್ಚರಿ ಪಡೋದು ಖಚಿತ

ನಂದಿ ಬೆಟ್ಟಕ್ಕೆ ಪ್ರವಾಸಕ್ಕೆ ತೆರಳಬೇಕೆಂದು ಕೊಂಡವರು ಅಥವಾ ಒಂದು ದಿನದ ಪ್ರವಾಸಕ್ಕೆ ಹತ್ತಿರದ ಪ್ರವಾಸಕ್ಕೆ ಹೋಗಬೇಕೆಂದುಕೊಂಡವರಿಗೆ ಇದು ಬೆಸ್ಟ್... ಇದನ್ನು ನೋಡಿದ್ರೆ ನಿಮ್ಮ ಮನಸ್ಸಿಗೆ ಉಲ್ಲಾಸವಾಗೋದಂತು ಖಚಿತ

ದೊಡ್ಡಬಳ್ಳಾಪುರ(ಸೆ.27) : ರಾಜ್ಯಾದ್ಯಂತ ಉತ್ತಮವಾಗಿ ಮಳೆಯಾಗುತ್ತಿದೆ.. ಅಂತಲೇ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲೂ ಮಳೆರಾಯನ ಆರ್ಭಟ ಜೋರಾಗಿದೆ.. ಹೀಗಾಗಿ ನಂದಿಬೆಟ್ಟದ ಪಕ್ಕದಲ್ಲೆ ಇರೋ ಚನ್ನಗಿರಿ ಫಾಲ್ಸ್ ತುಂಬಿ ಹರಿಯುತ್ತಿದೆ.  ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಚಿಕ್ಕರಾಯಪ್ಪನಹಳ್ಳಿ ಬಳಿ ಇರೋ ಈ ಫಾಲ್ಸ್ ಗೆ  ಸಿಲಿಕಾನ್ ಸಿಟಿ ಸೇರಿದಂತೆ ವಿವಿಧ ಭಾಗಗಳಿಂದ ಇಲ್ಲಿಗೆ ಪ್ರವಾಸಿಗರ ದಂಡೆ ಹರಿದು ಬರುತ್ತಿದೆ.

ಹಂಪಿಗೆ ಡಬಲ್‌ ಡೆಕ್ಕರ್‌ ಬಸ್‌!300 ರು. ಫಿಕ್ಸ್ ...

ಸುತ್ತಮುತ್ತ ಬೆಟ್ಟಗುಡ್ಡ , ದಟ್ಟ ಅರಣ್ಯ ಭಾಗದಲ್ಲಿ ಧುಮ್ಮಿಕ್ಕುವ  ನೀರಿನ ವೈಭವದ ದೃಶ್ಯಗಳು ಎಲ್ಲರನ್ನು ಸೆಳೆಯುತ್ತಿದೆ.

Video Top Stories