Asianet Suvarna News Asianet Suvarna News

Chamarajnagar ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಸಲಗಗಳ ಅಪರೂಪದ ವಿಡಿಯೋ

Oct 9, 2021, 3:04 PM IST

ಚಾಮರಾಜನಗರ (ಅ.09):   ಒಂದೆಡೆ ನಡು ರಸ್ತೆಯಲ್ಲಿ ಒಂಟಿ ಸಲಗ ಆಟಾಟೋಪ, ಮತ್ತೊಂದೆಡೆ ಫ್ಯಾಮಿಲಿ ಪರೇಡ್ ದೃಶ್ಯ ಕಂಡು ಬಂತು
ರಾಷ್ಟ್ರೀಯ ಹೆದ್ದಾರಿ 209ಕ್ಕೆ ಬಂದ ಕಾಡಾನೆ ಗೂಡ್ಸ್ ವಾಹನವನ್ನು ಜಗ್ಗಾಡಿತು. ಚಾಮರಾಜನಗರ ಗಡಿಭಾಗದ ತಮಿಳುನಾಡಿನ ಬಣ್ಣಾರಿ ಸಮೀಪ ಹಾಸನೂರಿನಲ್ಲಿ ಘಟನೆ ನಡೆದಿದ್ದು,  ಕೆಲಕಾಲ ವಾಹನ ಸಂಚಾರಕ್ಕೆ ಅಡ್ಡಿಯಾಗಿದ್ದು, ಕಾಡಾನೆ ಓಡಿಸಲು ಸವಾರರು ಹರಸಾಹಸ ಪಡುವಂತಾಯ್ತು. ಅಲ್ಲದೆ ಆಟಾಟೋಪದ ವಿಡಿಯೋ ಮಾಡಲು ಹೋದವರನ್ನು  ಒಂಟಿ ಸಲಗ ಅಟ್ಟಾಡಿಸಿತು. 

ಹೆದರಿ ಓಡಿದ ಪುಟ್ಟ ಆನೆ ಬಿದ್ದಿದ್ದು ಆಳದ ಗುಂಡಿಗೆ: ರಕ್ಷಣೆ ವಿಡಿಯೋ ವೈರಲ್

ಮತ್ತೊಂದು ಕಡೆ  ಊಟಿ ರಸ್ತೆಯ ಗೂಡಲೂರು ಬಳಿ ಮರಿಯಾನೆಯೊಂದಿಗೆ ಕಾಡಾನೆಗಳ ಪೆರೇಡ್ ದೃಶ್ಯ ಸೆರೆಯಾಯ್ತು. ಮರಿಯಾನೆಯೊಂದಿಗೆ ಕಾಡಾನೆಗಳು ಹೆದ್ದಾರಿಯಲ್ಲಿ ಗಜ ಗಾಂಭೀರ್ಯದಿಂದ ಹೆಜ್ಜೆ ಹಾಕಿದ್ದು  ವಾಹನ ಚಾಲಕರ ಮೊಬೈಲ್‌ನಲ್ಲಿ ಕಣ್ಣಿಗೆ ಸಿಕ್ಕಿತು.