ಯಾದಗಿರಿ ಕೋವಿಡ್ ಆಸ್ಪತ್ರೆ ಅವ್ಯವಸ್ಥೆಗೆ ಕೊನೆ ಯಾವಾಗ..?
ಒಂದು ಕಡೆ ಚಿಕಿತ್ಸೆಯ ಸಮಸ್ಯೆಯಾದರೆ ಮತ್ತೊಂದೆಡೆ ಕೋವಿಡ್ ಆಸ್ಪತ್ರೆಗಳಲ್ಲಿ ಆಹಾರ ವಿತರಣೆ ದೊಡ್ಡ ಸಮಸ್ಯೆಯಾಗಿ ಕಾಡಲಾರಂಭಿಸಿದೆ. ಹೌದು, ಯಾದಗಿರಿಯ ಕೋವಿಡ್ ಸೆಂಟರ್‌ನಲ್ಲಿನ ಅವ್ಯವಸ್ಥೆ ಇದೀಗ ಬಟಾಬಯಲಾಗಿದೆ.
ಯಾದಗಿರಿ(ಜು.23): ರಾಜ್ಯದಲ್ಲಿ ಕೊರೋನಾ ಅಟ್ಟಹಾಸ ಜೋರಾಗಿದೆ. ಇದರ ಜತೆಗೆ ಪ್ರತಿನಿತ್ಯ ಕೋವಿಡ್ ಆಸ್ಪತ್ರೆಗಳ ಅವ್ಯಸ್ಥೆಗಳು ಬೆಳಕಿಗೆ ಬರುತ್ತಿದೆ. ಆ ಪಟ್ಟಿಗೆ ಇದೀಗ ಯಾದಗಿರಿಯ ಕೋವಿಡ್ ಆಸ್ಪತ್ರೆ ಸೇರ್ಪಡೆಯಾಗಿದೆ.
ಒಂದು ಕಡೆ ಚಿಕಿತ್ಸೆಯ ಸಮಸ್ಯೆಯಾದರೆ ಮತ್ತೊಂದೆಡೆ ಕೋವಿಡ್ ಆಸ್ಪತ್ರೆಗಳಲ್ಲಿ ಆಹಾರ ವಿತರಣೆ ದೊಡ್ಡ ಸಮಸ್ಯೆಯಾಗಿ ಕಾಡಲಾರಂಭಿಸಿದೆ. ಹೌದು, ಯಾದಗಿರಿಯ ಕೋವಿಡ್ ಸೆಂಟರ್‌ನಲ್ಲಿನ ಅವ್ಯವಸ್ಥೆ ಇದೀಗ ಬಟಾಬಯಲಾಗಿದೆ.
ಸೇವಾ ಭದ್ರತೆಗಾಗಿ ಕಾಲೇಜು ಅತಿಥಿ ಉಪನ್ಯಾಸಕರಿಂದ ಪ್ರತಿಭಟನೆ
ಸರಿಯಾದ ಸಮಯಕ್ಕೆ ಕೊರೋನಾ ಸೋಂಕಿತರಿಗೆ ಊಟ ನೀಡಲಾಗುತ್ತಿಲ್ಲ. ಹಾರ್ಟ್ ಪೇಷೆಂಟ್‌ಗೆ ಚುರುಮುರಿ ನೀಡಲಾಗುತ್ತಿದೆ. ಈ ಊಟ ತಿಂದ್ರೆ ದೇಹಕ್ಕೆ ತ್ರಾಸ ಆಗ್ತಿದೆ ಅಂದ್ರೂ ಕೇಳೂರು ಇಲ್ಲದಂತಾಗಿದೆ ಇವರ ಪರಿಸ್ಥಿತಿ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.