ತವರಿಗೆ ಹುತಾತ್ಮ ಯೋಧ ಪ್ರಾಂಜಲ್ ಪಾರ್ಥಿವ: ಸಿಎಂ, ಗವರ್ನರ್ ಸೇರಿ ಗಣ್ಯರಿಂದ ಅಂತಿಮ ಗೌರವ
ಉಗ್ರರ ಜೊತೆಗಿನ ಕಾಳಗದಲ್ಲಿ ಉಸಿರು ಚೆಲ್ಲಿದ ಕರ್ನಾಟಕದ ವೀರಯೋಧ ಪ್ರಾಂಜಲ್ ಪಾರ್ಥಿವ ಶರೀರ ನಿನ್ನೆ ತವರಿಗೆ ಆಗಮಿಸಿದೆ. ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಏರ್ಪೋರ್ಟ್ನಲ್ಲಿ ಅಂತಿಮ ದರ್ಶನ ಪಡೆದ್ರು. ಇಂದು ಹುತಾತ್ಮ ಯೋಧನ ಅಂತ್ಯಕ್ರಿಯೆ ನೆರವೇರಲಿದೆ.
ಕ್ಯಾಪ್ಟನ್ ಪ್ರಾಂಜಲ್.. ದೇಶಸೇವೆಗೆ ಬದುಕು ಮುಡಿಪಿಟ್ಟಿದ್ದ ಕರ್ನಾಟಕದ(Karnataka) ವೀರಯೋಧ. ದೇಶದ ಭದ್ರೆತೆಗೆ ಅಪಾಯ ತರಲು ಸಂಚು ಹೂಡಿದ್ದ ಉಗ್ರರ ಜೊತೆಗೆ ಕಾಳಗ ನಡೆಸುತ್ತಲೇ ಜೀವ ಬಲಿದಾನ ನೀಡಿದ ಪರಾಕ್ರಮಿ. ಉಸಿರಿನ ಕೊನೆ ಕ್ಷಣದವರೆಗೂ ದೇಶಸೇವೆಗೈದ ಪ್ರಾಂಜಲ್(captain pranjal) ಪಾರ್ಥಿವ ನಿನ್ನೆ ರಾತ್ರಿ ಬೆಂಗಳೂರಿಗೆ(Bengaluru) ಆಗಮಿಸಿತು. ಹೆಚ್ಎಎಲ್ ಏರ್ಪೋರ್ಟ್ಗೆ ಬಂದ ಪ್ರಾಂಜಲ್ ಪಾರ್ಥಿವ ಕಂಡು ಪೋಷಕರು ಹಾಗೂ ಕುಟುಂಬಸ್ಥರು ಕಣ್ಣೀರಿಟ್ಟರು. ಅಗಲಿದ ಮಗನನ್ನ ನೆನೆದು ಹೆತ್ತೊಡಲು ಶೋಕ ಸಾಗರದಲ್ಲಿ ಮುಳುಗಿತು. ದೇಶಕ್ಕಾಗಿ ಬಲಿದಾನ ಮಾಡಿದ ವೀರಯೋಧನಿಗೆ ಸಿಎಂ ಸಿದ್ದರಾಮಯ್ಯ(Siddaramaiah), ರಾಜ್ಯಪಾಲ ಥಾವರ್ಚಂದ್ ಗೆಹಲೋತ್ ಏರ್ಪೋರ್ಟ್ನಲ್ಲೇ ಅಂತಿಮ ನಮನ ಸಲ್ಲಿಸಿದ್ರು. ಸಚಿವ ಜಾರ್ಜ್, ಸಂಸದ ತೇಜಸ್ವಿ ಸೂರ್ಯ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕೂಡ ಏರ್ಪೋರ್ಟ್ನಲ್ಲೇ ಹುತಾತ್ಮ ಯೋಧ ಪ್ರಾಂಜಲ್ ಅಂತಿಮ ದರ್ಶನ ಪಡೆದ್ರು. ವೀರಯೋಧನ ಅಗಲಿಕೆಗೆ ಸಂತಾಪ ಸೂಚಿಸಿದ್ರು. ನಿನ್ನೆ ರಾತ್ರಿಯೇ ಪ್ರಾಂಜಲ್ ಪಾರ್ಥಿವವನ್ನ ನಂದನವನ ಬಡಾವಣೆಯಲ್ಲಿರುವ ನಿವಾಸಕ್ಕೆ ತರಲಾಗಿದೆ. ನಿವಾಸದ ಎದುರೇ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಪೊಲೀಸರು ಬ್ಯಾರಿಕೇಡ್ ಅಳವಡಿಸಿ, ಪೆಂಡಾಲ್ ಹಾಕಿ ಅಂತಿಮ ದರ್ಶನಕ್ಕೆ ವವಸ್ಥೆ ಮಾಡಿದ್ದಾರೆ. ಸಾರ್ವಜನಿಕರ ದರ್ಶನದ ಬಳಿಕ ಹುತಾತ್ಮ ಯೋಧ ಪ್ರಾಂಜಲ್ ಅಂತಿಮ ಯಾತ್ರೆ ನಡೆಯಲಿದೆ. ಒಟ್ಟು 30 ಕಿಲೋ ಮೀಟರ್ ಅಂತಿಮ ಯಾತ್ರೆ ಸಾಗಲಿದ್ದು, ರಸ್ತೆಯುದ್ದಕ್ಕೂ ಸಾರ್ವಜನಿಕರ ವೀಕ್ಷಣೆಗೆ ಅವಕಾಶವಿರಲಿದೆ. ಅಂತಿಮವಾಗಿ ಕೂಡ್ಲು ಗೇಟ್ವಿದ್ಯುತ್ ಚಿತಾಗಾರದಲ್ಲಿ ಸೇನಾಗೌರವದೊಂದಿಗೆ, ಬ್ರಾಹ್ಮಣ ಸಂಪ್ರದಾಯದಂತೆ ಪ್ರಾಂಜಲ್ ಅಂತ್ಯಕ್ರಿಯೆ ನೆರವೇರಲಿದೆ.
ಇದನ್ನೂ ವೀಕ್ಷಿಸಿ: ರಾಜ್ಯಾದ್ಯಂತ ಬ್ಯಾಡ್ ಮ್ಯಾನರ್ಸ್ ಸಿನಿಮಾ ಬಿಡುಗಡೆ..! ಟಫ್ ಪೊಲೀಸ್ ಕಾಪ್ ಆಗಿ ಮಿಂಚಿದ ಅಭಿಷೇಕ್ ಅಂಬರೀಶ್..!