ಹಾವೇರಿಯಲ್ಲಿ ಕಳೆಗಟ್ಟಿದ ರೈತಾಪಿ ವರ್ಗದ ದೀಪಾವಳಿ: ಮಣ್ಣಿನ ಧೂಳಿನೊಳಗೆ ಛಂಗನೇ ಬರೋ ಹೋರಿ ಹಿಡಿಯೋ ಹಬ್ಬ

ದೇಶಾದ್ಯಂತ ದೀಪಾವಳಿ ಸಂಭ್ರಮ ಸಡಗರ ಜೋರಾಗಿದೆ. ವಿವಿಧ ಸಂಪ್ರದಾಯಗಳ ರಾಜ್ಯ, ಜಿಲ್ಲಾವಾರು ಜನರು ಆಚರಣೆ ಮಾಡ್ತಾರೆ.. ಹಾವೇರಿ ಜಿಲ್ಲೆಯಲ್ಲಿ ನಡೆಯೋ ದೀಪಾವಳಿ ಅಪ್ಪಟ ರೈತಾಪಿ ದೀಪಾವಳಿ ಎಲ್ಲೆಡೆ ಮನಸೂರೆಗೊಳಿಸಿದೆ. 
 

First Published Nov 14, 2023, 11:27 AM IST | Last Updated Nov 14, 2023, 11:27 AM IST

ಹಾವೇರಿ ಜಿಲ್ಲೆ ಉತ್ತರ ಕರ್ನಾಟಕದ ಹೆಬ್ಬಾಗಿಲು. ಅಪ್ಪಟ  ಜವಾರಿ ರೈತರ ಜಿಲ್ಲೆ ಹಾವೇರಿ(Haveri). ಇಲ್ಲಿ ಎತ್ತು ಅಥವಾ ಹೋರಿಗಳು ಅಂದರೆ ಬರೀ ಕೃಷಿ ಕೆಲಸಕ್ಕಲ್ಲದೇ ದೀಪಾವಳಿ(Deepavali) ಹಬ್ಬದಲ್ಲೂ ಕೊಬ್ಬರಿ ಹೋರಿ ಓಡಿಸುವ ಸ್ಫರ್ಧೆ(Bull Race) ಮಾಡಿ ಸಂಭ್ರಮಿಸ್ತಾರೆ. ದೀಪಾವಳಿ ಹಾವೇರಿ ಜಿಲ್ಲೆಯಲ್ಲಿ ಪಟಾಕಿ ಹೊಡೆದು ಸಿಹಿ ತಿನ್ನೋ ಹಬ್ಬ ಅಲ್ಲವೇ ಅಲ್ಲ. ಅದು ಮಣ್ಣಿನ ಧೂಳಿನೊಳಗೆ ಛಂಗನೇ ಬರೋ ಹೋರಿ ಹಿಡಿಯೋ ಹಬ್ಬ. ಹಾವೇರಿ ಜಿಲ್ಲೆ ಹೋರಿ ಬೆದರಿಸೋ ಸ್ಪರ್ಧೆಗೆ ಹೆಸರುವಾಸಿ. ಹಾವೇರಿ ಜಿಲ್ಲೆಯ ಕಬ್ಬೂರು, ಕುಳೇನೂರು, ಹೊಸೂರು, ಹಾನಗಲ್, ಹಿರೇನಿಂಗದಹಳ್ಳಿ,  ಹುಲಗಿನಕೊಪ್ಪ, ಮಾರನಬೀಡ, ಚಿಕ್ಕನಿಂಗದಹಳ್ಳಿ ಸೇರಿದಂತೆ ಹಲವು ಕಡೆ ಹೋರಿ ಬೆದರಿಸೋ ಸ್ಪರ್ಧೆ ನಡೆಯುತ್ತೆ. ರೈತರು ಕಷ್ಟಪಟ್ಟು ಸಾಕಿ ಹೋರಿಗಳನ್ನ ಹಬ್ಬಕ್ಕಾಗಿ ತಯಾರು ಮಾಡಿರ್ತಾರೆ. ಭಿನ್ನ-ವಿಭಿನ್ನವಾಗಿ ಹೋರಿಗಳನ್ನ ಅಲಂಕಾರ ಮಾಡಿ ಸ್ಪರ್ಧೆಯಲ್ಲಿ  ಓಡಿಸ್ತಾರೆ.ಕೆಲವೊಂದು ಬಾರಿ ಡೇಂಜರ್ ಅನ್ನಿಸೋ ಕೊಬ್ಬರಿ ಹೋರಿ ಸ್ಪರ್ಧೆಯನ್ನ ಉತ್ತರ ಕರ್ನಾಟಕದ ರೈತರು ಮನರಂಜನೆ ಹಬ್ಬವಾಗಿ ಆಚರಿಸಿಕೊಂಡು ಬರ್ತಿದ್ದಾರೆ. ತಮಿಳುನಾಡಿನಲ್ಲಿ ಜಲ್ಲಿಕಟ್ಟು, ಕರಾವಳಿ ಭಾಗದಲ್ಲಿ ಕೋಣಗಳ ಕಂಬಳದ ರೀತಿಯಲ್ಲಿಯೇ ಹಾವೇರಿ ಜಿಲ್ಲೆಯಲ್ಲಿ ಹೋರಿ ಹಬ್ಬ, ಹಟ್ಟಿ ಹಬ್ಬ ಭಾರೀ ಫೇಮಸ್.

ಇದನ್ನೂ ವೀಕ್ಷಿಸಿ: ಲಂಬಾಣಿ ತಾಂಡಾಗಳಲ್ಲಿ ವಿಭಿನ್ನ ದೀಪಾವಳಿ ಆಚರಣೆ: ಎಮ್ಮೆಗಳನ್ನು ಅಲಂಕರಿಸಿ, ಗಲ್ಲಿಗಲ್ಲಿಯಲ್ಲಿ ಓಡಿಸಿ ಸಂಭ್ರಮ

Video Top Stories