Asianet Suvarna News Asianet Suvarna News

ಲಂಬಾಣಿ ತಾಂಡಾಗಳಲ್ಲಿ ವಿಭಿನ್ನ ದೀಪಾವಳಿ ಆಚರಣೆ: ಎಮ್ಮೆಗಳನ್ನು ಅಲಂಕರಿಸಿ, ಗಲ್ಲಿಗಲ್ಲಿಯಲ್ಲಿ ಓಡಿಸಿ ಸಂಭ್ರಮ

ಬೆಳಕಿನ ಹಬ್ಬದ ಸಂಭ್ರ ಜೋರಾಗಿದೆ. ಸ್ಥಳೀಯವಾಗಿಯೂ ಕೆಲ ಜನಾಂಗದವರು ದೀಪಾವಳಿಯನ್ನ ವಿಶೇಷವಾಗಿ ಆಚರಿಸುವ ಸಂಪ್ರದಾಯವಿದೆ. ತಮ್ಮದೇ ನೆಲದ ಸೊಗಡಿನ ಮೂಲಕ ದೀಪಗಳ ಹಬ್ಬವನ್ನ ಆಚರಿಸ್ತಾರೆ.ಅದ್ರಲ್ಲೂ ಉತ್ತರ ಕರ್ನಾಟಕದ ಬಂಜಾರ, ಗೌಳಿ ಸಮುದಾಯಗಳು ದೀಪದ ಹಬ್ಬವನನ್ನ ವಿಶಿಷ್ಟವಾಗಿ ಆಚರಿಸ್ತಾರೆ.
 

ಬಣ್ಣಗಳಿಂದ ಸಿಂಗಾರಗೊಂಡಿರೋ ಎಮ್ಮೆ. ಮಾಲೀಕರ ಸನ್ನೆ ಮಾತ್ರಕ್ಕೆ ಬೈಕ್ ಬೆನ್ನಟ್ಟಿ ಓಡೋ ಎಮ್ಮೆ(Buffaloes), ಕೋಣಗಳು.. ಮತ್ತೊಂದ್ಕಡೆ ಬಂಜಾರ ಸಮುದಾಯದ(Banzara community) ಯುವತಿಯರಿಂದ ಕಲರ್ ಫುಲ್ ಡ್ಯಾನ್ಸ್. ಗದಗ(Gadag) ಸೇರಿ ಉತ್ತರ ಕರ್ನಾಟಕದ ಕೆಲ ಭಾಗದಲ್ಲಿ ಬಂಜಾರು ಹಾಗೂ ಗೌಳಿ ಜನಾಂಗದ ಜನರು ದೀಪಾವಳಿಗೆ ನಡೆಸೋ ವಿಶಿಷ್ಟ ಆಚರಣೆಗಳಿವು.ಗದಗ ಜಿಲ್ಲೆಯ ಲಂಬಾಣಿ(Lambani) ತಾಂಡಾಗಳಲ್ಲಿ ದೀಪಾವಳಿ ಅತ್ಯಂತ ವಿಶೇಷವಾಗಿ ಆಚರಿಸಲಾಗುತ್ತೆ. ಲಂಬಾಣಿ ಜನರ ಪಾಲಿಗೆ ಹೆಣ್ಣನ್ನ ದೇವಸ್ಥಾನದಲ್ಲಿರಿಸಿ ಆಚರಿಸುವ ಹಬ್ಬ.  ತಾಂಡಾ ಯುವತಿಯರು, ಸಮೀಪದ ಬೆಟ್ಟಕ್ಕೆ ಹೋಗಿ ಲಂಬಾಣಿ ಸಾಹಿತ್ಯದ ಹಾಡಿನೊಂದಿಗೆ ಹೂವು ತಂದು ಸೇವಲಾಲ್ಗೆ ಪೂಜೆ ಸಲ್ಲಿಸ್ತಾರೆ. ಯುವತಿಯರು ನೃತ್ಯ ಮಾಡುವ ಮೂಲಕ ತವರು ಮನೆ ಹಾಗೂ ಗಂಡನ ಮನೆ ಸುಭೀಕ್ಷವಾಗಿರಲಿ ಅಂತಾ ಹಾರೈಸ್ತಾರೆ. ಮರು ದಿನ ಹಿರಿಯರ ಹಬ್ಬ ಮಾಡಿ, ಪಿತೃಗಳಿಗೂ ಗೌರವ ಸಲ್ಲಿಸಲಾಗುತ್ತೆ.

ಇದನ್ನೂ ವೀಕ್ಷಿಸಿ:  ನಾಡಿನೆಲ್ಲೆಡೆ ಬೆಳಕಿನ ಹಬ್ಬದ ಸಂಭ್ರಮ: ಮಾರುಕಟ್ಟೆಗೆ ಲಗ್ಗೆ ಇಟ್ಟ ಸಗಣಿ ದೀಪಗಳು

Video Top Stories