ಸೆಟ್ ಬ್ಯಾಕ್ ಬಿಡದಿದ್ದಕ್ಕೆ ಬಿಲ್ಡಿಂಗ್ ಡೆಮಾಲಿಷನ್: 1 ಕೋಟಿ ಲಂಚ ಪಡೆದ್ರಾ ಉಗ್ರಪ್ಪ ?
ರೂಲ್ಸ್ ಬ್ರೇಕ್ ಮಾಡಿ ಬಿಲ್ಡಿಂಗ್ ಕಟ್ಟಿಕೊಂಡಿದ್ರೆ ಈ ಸ್ಟೋರಿ ನೋಡಲೇಬೇಕು. ಇದು ಲಂಚ ಕೊಟ್ಟು ಕೈ ಸುಟ್ಟುಕೊಂಡವರ ಸತ್ಯ ಕಥೆ. ಹಾಗಾದ್ರೆ ಅಲ್ಲಿ ಆಗಿದ್ದೇನು?
ನೀವು ಬೆಂಗಳೂರಿನಲ್ಲಿ ಮನೆ ಕಟ್ಟೋ ಪ್ಲಾನ್ ಇದ್ರೆ ಈ ಸ್ಟೋರಿ ಮಿಸ್ ಮಾಡದೆ ನೋಡಿ. ಮಿಸ್ ಮಾಡಿದ್ರೆ ನಿಮ್ ಮನೆನೂ ಹಿಂಗೇ ಒಡೆದು ಹಾಕ್ತಾರೇ ಹುಷಾರ್. ಅಷ್ಟಕ್ಕೂ ಈ ಮನೆಯ ಮೇಲ್ಚಾವಣಿಯನ್ನ ಡೆಮಾಲಿಷನ್ ಮಾಡ್ತಿರೋದ್ಯಾಕೆ ಅಂದ್ರೆ ಇವ್ರು ಕಾನೂನು ಪ್ರಕಾರ ಮೂರು ಅಡಿ ಸೆಟ್ ಬ್ಯಾಕ್ ಬಿಟ್ಟಿಲ್ವಂತೆ. ಅದ್ಕೆ ಹೈಕೋರ್ಟ್(highcourt) ಡೆಮಾಲಿಷನ್ ಗೆ ಆದೇಶ ಮಾಡಿದೆ. ಇದು ಮೊನ್ನೆಯಷ್ಟೇ ಕಾಮಗಾರಿ ಮುಗಿದು ಗೃಹಪ್ರವೇಶ ಆಗಿರೋ ನಾಲ್ಕು ಅಂತಸ್ತಿನ ಬಿಲ್ಡಿಂಗ್. ಹೆಚ್ ಎಸ್ ಆರ್ ಲೇಔಟ್ ನ ಹೈಫೈ ಏರಿಯಾದಲ್ಲಿ 11 ಕೋಟಿ ಬೆಲೆ ಬಾಳುವ ಸೈಟ್ ನಲ್ಲಿ ಕಟ್ಟಿರೋ ಮನೆ(House) ಇದು. ಆದ್ರೆ ನಿನ್ನೆ ಬೆಳಂಬೆಳಗ್ಗೆ ಪೊಲೀಸ್ರು ಹಾಗೂ ಬಿಬಿಎಂಪಿ ಅಧಿಕಾರಿಗಳು(BBMP officials) ಈ ಮನೆ ಡೆಮಾಲಿಷನ್ ಮಾಡೋಕ್ಕೆ ಬಂದಿದ್ರು. ಕಾರಣ ಈ ಮನೆ ಮಾಲೀಕ ದಶರಥ್ ರೆಡ್ಡಿ ಮನೆ ಕಟ್ಟುವಾಗ ಬಿಬಿಎಂಪಿ ರೂಲ್ಸ್ ಫಾಲೋ ಮಾಡಿಲ್ಲ. ಯಾವುದೇ ವಸತಿ ಕಟ್ಟದ ನಿರ್ಮಾಣ ಮಾಡಬೇಕು ಅಂದ್ರೆ ಸುತ್ತಲೂ ಮೂರು ಅಡಿ ಜಾಗ ಬಿಡ್ಬೇಕು. ಆದ್ರೆ ದಶರಥ್ ರೆಡ್ಡಿ ಸೆಟ್ ಬ್ಯಾಕ್ ಬಿಡದೆ ಮನೆ ನಿರ್ಮಾಣ ಮಾಡಿದ್ದಾರೆ. ಬಿಬಿಎಂಪಿಯಿಂದ ನಾಲ್ಕು ಅಂತಸ್ತಿನ ಮನೆ ಕಟ್ಟೋಕ್ಕೆ ಕಾನೂನಾತ್ಮಕವಾಗಿ ಅನುಮತಿ ಪಡೆದುಕೊಂಡಿದ್ರು. ಸೆಟ್ ಬ್ಯಾಕ್ ಬಿಟ್ಟಿರಲಿಲ್ಲ. ಇದೇ ಕಾರಣಕ್ಕೆ ಅಕ್ಕಪಕ್ಕದ ನಿವಾಸಿಗಳು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಪರಿಶೀಲನೆ ಮಾಡಿದ ನ್ಯಾಯಾಲಯ ಕಾನೂನಾತ್ಮಕವಾಗಿ ಕಟ್ಟಡ ನಿರ್ಮಾಣ ಮಾಡದೆ ಹೋದ್ರೆ ಡೆಮಾಲಿಷನ್ ಮಾಡಿ ಅಂತಾ ಆದೇಶ ಮಾಡಿದೆ. ಅದರಂತೆ ನಿನ್ನೆ ಬಿಬಿಎಂಪಿ ಅಧಿಕಾರಿಗಳು ಪೊಲೀಸ್ ಭದ್ರತೆಯಲ್ಲಿ ಹೊಸ ಬಿಲ್ಡಿಂಗ್ ಡೆಮಾಲಿಷನ್ ಮಾಡಿದ್ದಾರೆ. ಆದ್ರೆ, ಇಲ್ಲಿ ಮನೆ ಮಾಲೀಕ ಮಾಡ್ತಿರೋ ಆರೋಪ ಬೇರೆನೇ ಇದೆ. ಡೆಮಾಲಿಷನ್ ಆಗ್ತಿರೋ ಬಿಲ್ಡಿಂಗ್ ಪಕ್ಕದಲ್ಲೇ ಕಾಂಗ್ರೆಸ್ ನ ಫೈರ್ ಬ್ರಾಂಡ್, ಉಗ್ರಪ್ಪ(Ugrappa) ಅವರ ಮನೆ ಇದೆ. ದಶರಥ್ ಅವರು ಮನೆ ಕಟ್ಟುವಾಗ ಉಗ್ರಪ್ಪ ಒಂದು ಕೋಟಿ ಲಂಚ ಪಡೆದಿದ್ರಂತೆ. ಮನೆ ನಿರ್ಮಾಣ ಮಾಡುವಾಗ ಉಗ್ರಪ್ಪ ಅಡ್ಡಿಪಡಿಸಿದ್ರಂತೆ ಒಂದು ಕೋಟಿ ಕೊಟ್ರೆ ಸುಮ್ಮನೆ ಇರ್ತಿನಿ ಅಂದಿದ್ರಂತೆ. ಅದಕ್ಕೆ ಒಂದು ಕೋಟಿ ನೀಡಿದ್ದ ಮನೆ ಮಾಲೀಕನಿಗೆ ಇದೀಗ ಮತ್ತೆ ದುಡ್ಡು ಕೇಳಿದ್ದಾರಂತೆ. ದುಡ್ಡು ಕೊಡಲ್ಲ ಎಂದಿದ್ದ ಉಗ್ರಪ್ಪ ಈ ರೀತಿ ಕೇಸ್ ಹಾಕಿಸಿ ಡೆಮಾಲಿಷನ್ ಮಾಡಿಸಿರೋದು ಅಂತಾ ಮನೆ ಮಾಲೀಕ ಆರೋಪ ಮಾಡ್ತಿದ್ದಾರೆ.ಇತ್ತ ಉಗ್ರಪ್ಪ ಈ ಆರೋಪವನ್ನ ತಳ್ಳಿಹಾಕಿದ್ದು, ಸೆಟ್ ಬ್ಯಾಕ್ ಬಿಡದೆ ಕಟ್ಟಡ ನಿರ್ಮಾಣ ಮಾಡಿದ್ದ ಕಾರಣ ಡೆಮಾಲಿಷನ್ ಮಾಡಲಾಗ್ತಿದೆ. ಮನೆ ಮಾಲೀಕ ಮಾಡ್ತಿರೋ ಆರೋಪಕ್ಕೂ ನನ್ನಗೂ ಸಂಬಂಧವಿಲ್ಲ ಎಂದಿದ್ದಾರೆ.
ಇದನ್ನೂ ವೀಕ್ಷಿಸಿ: 6 ತಿಂಗಳ ಮೊದಲೇ ಶಾಲಾ ದಾಖಲಾತಿ ಪ್ರಕ್ರಿಯೆ ಶುರು: 1ನೇ ತರಗತಿಗೆ ಸೇರಿಸೋಕೆ 6 ವರ್ಷ ಆಗಿರಲೇಬೇಕಾ..?