Asianet Suvarna News Asianet Suvarna News

ಆಟ ಆಡೋ ವಯಸ್ಸಲ್ಲಿ ದಾಖಲೆ ಬರೆದ ಬಾಲಕ: ಸ್ಕೇಟಿಂಗ್ ಆಡುತ್ತಾ ನಿಮಿಷದಲ್ಲೇ ಸಾಲ್ವ್ ಆಗುತ್ತೆ ರೂಬಿಕ್ಸ್ ಕ್ಯೂಬ್ !

ಮಕ್ಕಳಿಗೆ ಆಟದ ವಸ್ತು ಸಿಕ್ಕರೆ ಸಾಕು ಮನಸ್ಸೋಇಚ್ಛೆ ಆಟವಾಡುತ್ತಾ ಕಾಲ ಕಳೀತಾರೆ. ಈಗಿನ ಮಕ್ಕಳಂತು ಮೊಬೈಲ್ ಇದ್ರೆ ಸಾಕು ಆನ್ಲೈನ್ ಗೇಮ್ಸ್ನಲ್ಲೇ ಮುಳುಗಿ ಹೋಗಿರ್ತಾರೆ. ಆದ್ರೆ ಇಲ್ಲೊಬ್ಬ ಪೋರ ಆಟದಲ್ಲೇ ದಾಖಲೆ ಬರೆದಿದ್ದಾನೆ. 
 

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಅಂತಾ ಹೇಳೋದು ಇದಕ್ಕೆ ನೋಡಿ, ಯಾರ ಸಹಾಯವಿಲ್ಲದೆ, ಕಡಿಮೆ ಬಂಡವಾಳದಲ್ಲಿ ತನ್ನ ಸ್ವಂತ ಶ್ರಮದಿಂದ ತುಂಬಾ ಸಲೀಸಾಗಿ ವಿಶ್ವ ಮಟ್ಟದ ರೆಕಾರ್ಡ್ ಮಾಡಿದ್ದಾನೆ.. 8 ವರ್ಷದ ಈ ದಾಖಲೆ ವೀರನ ಹೆಸರು ಹೋಶಾಂತ್. ಗಂಟೆಗಟ್ಟಲೆ ಕೂತರೂ ಪರಿಹಾರವಾಗದ ರೂಬಿಕ್ಸ್ ಕ್ಯೂಬ್(Rubik Cubes), ರಸ್ತೆ ಮೇಲೆ ಗಮನವಿಟ್ಟರೂ ಬೀಳುವಂತಾಗುವ ಸ್ಕೇಟಿಂಗ್, ಈ ಎರಡೂ ಆಟವನ್ನ ಈ ಪುಟಾಣಿ ಹೋಶಾಂತ್ ಸಾಧಿಸಿ ತೋರಿಸಿದ್ದಾನೆ. ಈ ಪುಟ್ಟ ಬಾಲಕ ಒಂದು ಗಂಟೆ ಹದಿಮೂರು ನಿಮಿಷಕ್ಕೆ ಹತ್ತೊಂಬತ್ತು ವಿಭಿನ್ನ ರೂಬಿಕ್ಸ್ ಕ್ಯೂಬ್ ಆಟ ಆಡಿ ವಿಶ್ವ ದಾಖಲೆ(world record) ಮಾಡಿದ್ದಾನೆ. ಈ ಪುಟ್ಟ ಬಾಲಕ ಯಶವಂತಪುರದ ಡಿವೈನ್ ಇಂಗ್ಲಿಷ್ ಶಾಲೆಯಲ್ಲಿ ಮೂರನೇ ತರಗತಿ ಓದುತ್ತಿದ್ದು, ಶಾಲೆಯಿಂದ ಮನೆಗೆ ಹಾಗೂ ಮನೆಯಿಂದ ಶಾಲೆಗೆ ಹೋಗುವಾಗ ಸಮಯ ಹಾಳು ಮಾಡ್ಬಾರ್ದು ಅಂತಾ ಅಪ್ಪನ ಬೈಕ್ ಹಿಂದೆ ಕುಳಿತು ರೂಬಿಕ್ಸ್ ಕ್ಯೂಬ್ ಪ್ರಾಕ್ಟಿಸ್ ಮಾಡಿದ್ದಾನೆ. ಯೂಟ್ಯೂಬ್ ನೋಡಿಕೊಂಡೇ ಈ ಆಟ ಕಲಿತಿರೊ ಹೋಶಾಂತ್, ಮುಂದಿನ ದಿನಗಳಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಸ್ಕೇಟಿಂಗ್ ಆಡುವ ಮೂಲಕ ಗಿನ್ನಿಸ್ ರೆಕಾರ್ಡ್ ಮಾಡುವ ಕನಸು ಕಾಣ್ತಿದ್ದಾನೆ. ಈ ಪೋರನಿಗೆ ಶಿಕ್ಷಕರು ಬೆಂಬಲ ನೀಡಿದ್ದಾರೆ.

ಇದನ್ನೂ ವೀಕ್ಷಿಸಿ:  ಗೋಳಗುಮ್ಮಟಕ್ಕಿಲ್ಲ UNESCO ಸ್ಥಾನಮಾನ: ಅಧಿಕಾರಿಗಳ ನಿರ್ಲಕ್ಷ್ಯ..ಪಾರಂಪರಿಕ ಕಟ್ಟಡಕ್ಕಿಲ್ಲ ವಿಶ್ವ ಮನ್ನಣೆ

Video Top Stories