ಬಾಗಲಕೋಟೆಯಲ್ಲಿ ಹೆಚ್ಚಾದ ವಾಮಾಚಾರ: ಮಾಟ, ಮಂತ್ರದಿಂದ ಸಾರ್ವಜನಿಕರಿಗೆ ಭಯ !
ಮುಳುಗಡೆ ನಗರಿ ಎಂಬ ಹೆಸರಿಗೆ ಸಾಕ್ಷಿಯಾಗಿರೋ ಆ ಊರಲ್ಲಿ ಹಿನ್ನೀರು, ಎಲ್ಲಿ ನೋಡಿದ್ರೂ ಹಸಿರುಗಳ ತಾಣವೇ ಕಾಣ ಸಿಗುತ್ತಿತ್ತು. ಆದ್ರೆ ಈಗ ಕಳೆದೊಂದು ವರ್ಷದಿಂದ ರಸ್ತೆಯಲ್ಲಿ ಓಡಾಡೋಕೆ ಹಿಂದೆ ಮುಂದೆ ನೋಡುವಂತಾಗಿದೆ. ಯಾಕಂದ್ರೆ ಮಕ್ಕಳು, ಮಹಿಳೆಯರು ಓಡಾಡುವ ಜಾಗದಲ್ಲಿಯೇ ನಿತ್ಯ ಮಾಟ,ಮಂತ್ರ, ವಾಮಾಚಾರ ಕಂಡು ಬರ್ತಿದೆ.
ರಸ್ತೆಯಲ್ಲಿ ಎಲ್ಲೆಂದರಲ್ಲಿ ಕಾಣ ಸಿಗುವ ಬೊಂಬೆ, ಕುಂಕುಮ..ನಿತ್ಯ ಆತಂಕದಲ್ಲೇ ಓಡಾತ್ತಿರೋ ಮಕ್ಕಳು, ಮಹಿಳೆಯರು.. ವಾಮಾಚಾರಕ್ಕಿಳಿದವರ ವಿರುದ್ಧ ಕ್ರಮಕ್ಕೆ ಒತ್ತಾಐಇಸುತ್ತಿರೋ ಜನ.. ಈ ದೃಶ್ಯ ಕಂಡು ಬಂದಿದ್ದು ಮುಳುಗಡೆ ನಗರಿ ಬಾಗಲಕೋಟೆಯಲ್ಲಿ. ಕಳೆದೊಂದು ವರ್ಷದಿಂದ ಇಲ್ಲಿ ವಾಮಾಚಾರಗಳು (Black magic) ನಡೆಯುತ್ತಿವೆ. ಅದ್ರಲ್ಲೂ ಇತ್ತೀಚೆಗೆ ಅತಿಯಾಗಿದೆ. ಮುಖ್ಯವಾಗಿ ವಿದ್ಯಾಗಿರಿ ಮತ್ತು ನವನಗರಗಳಲ್ಲಿ ಮೂರು ರಸ್ತೆಗಳು ಸಂಧಿಸುವ ಸ್ಥಳದಲ್ಲಿ ಕರಿ ಬಟ್ಟೆಯ ಬೊಂಬೆಗಳು(Dolls), ಕುಂಕುಮ ಹಚ್ಚಿದ ಗಂಟು, ಬಾಳೆಹಣ್ಣು ಹೀಗೆ ವಿವಿಧ ವಸ್ತುಗಳನ್ನ ನಡುರಸ್ತೆಯಲ್ಲಿಯೇ ಇರಿಸಿ ವಾಮಾಚಾರ ನಡೆಸುತ್ತಿದ್ದಾರೆ. ಇವರ ಮೌಢ್ಯ ಆಚರಣೆಯಿಂದ ಜನ ರಸ್ತೆಗಳಲ್ಲಿ ಓಡಾಡೋಕು ಭಯ ಪಡುತ್ತಿದ್ದಾರೆ. ನಿತ್ಯ ಮಕ್ಕಳು ಇದೆ ರಸ್ತೆ ಮಾರ್ಗವಾಗೆ ಶಾಲೆ, ಹಾಸ್ಟೆಲ್‌ಗಳಿಗೆ ಓಡಾಡಬೇಕು. ಚಿಕ್ಕ ಮಕ್ಕಳಲ್ಲಿ ಇಂಥ ಮಾಟ, ಮಂತ್ರ, ವಾಮಾಚಾರದ ದೃಶ್ಯಗಳು ಭಯ ಹುಟ್ಟಿಸುತ್ತಿವೆ. ಇನ್ನು ಸಂಜೆ ಹೊತ್ತಲ್ಲಿ ಮಹಿಳೆಯರು(womens) ಅಷ್ಟೇ ಅಲ್ಲ ಪುರುಷರು ಕೂಡ ಈ ರಸ್ತೆಗಳಲ್ಲಿ ತಿರುಗಾಡಲು ಹಿಂಜರಿಕೆಯಿಂದಲೇ ಹೆಜ್ಜೆ ಇಡುತ್ತಿದ್ದಾರೆ. ಹೀಗಾಗಿ ಈ ವಾಮಾಚಾರಗಳಿಗೆ ಕಡಿವಾಣ ಹಾಕುವಂತೆ ಸ್ಥಳೀಯರು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ಒತ್ತಾಯಿಸುತ್ತಿದ್ದಾರೆ.
ಇದನ್ನೂ ವೀಕ್ಷಿಸಿ: ಪಾಲಿಕೆ ಯಡವಟ್ಟಿಗೆ ಜನ ಜೀವನ ಅಸ್ತವ್ಯಸ್ತ: ರಸ್ತೆಯನ್ನೇ ಪಾರ್ಕ್ ಮಾಡಲು ಮುಂದಾದ ಪಾಲಿಕೆ