News Hour: ಪ್ರವೀಣ್ ಹಂತಕರ ಬೇಟೆಯಲ್ಲಿ ಇಬ್ಬರು ಅರೆಸ್ಟ್: ಬಿಜೆಪಿ ಯುವ ಮುಖಂಡನ ಹತ್ಯೆಗೆ SDPI ಲಿಂಕ್?

Praveen Nettaru Murder: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆಗೆ ಹಿಂದೂ ಸಂಘಟನೆಗಳು ಸಿಡಿದೆದ್ದಿವೆ. ಕೇಸರಿ ಯುವ ಪಡೆ ಆಕ್ರೋಶದ ಕಿಚ್ಚಿಗೆ ಮಂಗಳೂರು ಕೊತ ಕೊತ ಕುದಿಯುತ್ತಿದೆ

Share this Video
  • FB
  • Linkdin
  • Whatsapp

ಮಂಗಳೂರು (ಜು. 28): ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆಗೆ ಹಿಂದೂ ಸಂಘಟನೆಗಳು ಸಿಡಿದೆದ್ದಿವೆ. ಕೇಸರಿ ಯುವ ಪಡೆ ಆಕ್ರೋಶದ ಕಿಚ್ಚಿಗೆ ಮಂಗಳೂರು ಕೊತ ಕೊತ ಕುದಿಯುತ್ತಿದೆ. ತಮ್ಮದೇ ಕಾರ್ಯಕರ್ತರ ರೋಷಾಗ್ನಿಗೆ ಉತ್ತರ ಕೊಡಲಾಗದ ಕರಾವಳಿ ರಾಜಕಾರಣಿಗಳು ಮತ್ತು ಬೊಮ್ಮಾಯಿ ಸರ್ಕಾರಕ್ಕೆ ಉಳಿದಿದ್ದು ಹಂತಕರ ಬಂಧನವೊಂದೇ ದಾರಿ. ಸ್ವತಃ ಎಡಿಜಿಪಿ ಅಲೋಕ್ ಕುಮಾರ್ ಸಾರಥ್ಯದಲ್ಲಿ ಹಂತಕರ ಶಿಕಾರಿಗಿಳಿದ ಖಾಕಿ ಪಡೆ 48 ಗಂಟೆಯೊಳಗೆ ಇಬ್ಬರ ಹೆಡೆಮುರಿಕಟ್ಟಿದೆ.. 

ಬೊಮ್ಮಾಯಿ ಸರ್ಕಾರ, ಪೊಲೀಸರಿಗೆ ಪ್ರತಿಷ್ಠೆಯ ಸವಾಲಾಗಿದ್ದ ಪ್ರವೀಣ್ ಮರ್ಡರ್ ಕೇಸ್ನಲ್ಲಿ ಇಬ್ಬರು ಅಂದರ್ ಆಗಿದ್ದಾರೆ. ಪ್ರವೀಣ್ ಹತ್ಯೆ ಮಾಡಿದ್ದು ಇವರಲ್ಲ, ಹಂತಕರಿಗೆ ಹತ್ಯೆಗೆ ಸ್ಕೆಚ್ ಹಾಕಿಕೊಟ್ಟಿದ್ದೇ ಇವರು ಅನ್ನೋ ಮಾಹಿತಿ ಸಿಕ್ಕಿದೆ. ಜೊತೆ ಜೊತೆಗೆ ಬಿಜೆಪಿ ಮುಖಂಡನ ಮರ್ಡರ್ ಕೇಸ್‌ನಲ್ಲಿ ಎಸ್‌ಡಿಪಿಐ, ಪಿಎಫ್ಐ ಲಿಂಕ್ ಇದ್ಯಾ ಅನ್ನೋ ಅನುಮಾನ ಬಲವಾಗಿದೆ. ಬಂಧಿತ ಆರೋಪಿಗಳು ಎಸ್‌ಡಿಪಿಐ ಗುರುತಿಸಿಕೊಂಡಿದ್ದಾನೆ ಎನ್ನಲಾಗಿದೆ. 

'ನನ್ನ ಪತಿ, ಪ್ರವೀಣ್‌ಗೂ ಪರಿಚಯವಿತ್ತು, ಆದರೆ ಇಂತಹ ಕೃತ್ಯ ಮಾಡಿಲ್ಲ: ಬಂಧಿತ ಶಫೀಕ್ ಪತ್ನಿ

Related Video