'ನನ್ನ ಪತಿ, ಪ್ರವೀಣ್‌ಗೂ ಪರಿಚಯವಿತ್ತು, ಆದರೆ ಇಂತಹ ಕೃತ್ಯ ಮಾಡಿಲ್ಲ: ಬಂಧಿತ ಶಫೀಕ್ ಪತ್ನಿ

'ನನ್ನ ಪತಿ ಶಫೀಕ್‌ಗೂ, ಪ್ರವೀಣ್‌ಗೂ ಪರಿಚಯವಿತ್ತು. ನಮ್ಮ ಮಾವ ಪ್ರವೀಣ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಮಾವನನ್ನು ಕರೆದೊಯ್ಯಲು ಪ್ರವೀಣ್ ಬರುತ್ತಿದ್ರು. ಪ್ರವೀಣ್ ಹತ್ಯೆ ವಿಚಾರ ಕೇಳಿ ನನ್ನ ಗಂಡನಿಗೂ ಶಾಕ್ ಆಗಿದೆ'

First Published Jul 28, 2022, 5:13 PM IST | Last Updated Jul 28, 2022, 5:13 PM IST

ನನ್ನ ಪತಿ ಶಫೀಕ್‌ಗೂ, ಪ್ರವೀಣ್‌ಗೂ ಪರಿಚಯವಿತ್ತು. ನಮ್ಮ ಮಾವ ಪ್ರವೀಣ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಮಾವನನ್ನು ಕರೆದೊಯ್ಯಲು ಪ್ರವೀಣ್ ಬರುತ್ತಿದ್ರು. ಪ್ರವೀಣ್ ಹತ್ಯೆ ವಿಚಾರ ಕೇಳಿ ನನ್ನ ಗಂಡನಿಗೂ ಶಾಕ್ ಆಗಿದೆ. ಮಧ್ಯರಾತ್ರಿ ಬಂದು ನನ್ನ ಗಂಡನನ್ನು ಅರೆಸ್ಟ್ ಮಾಡಿದ್ದಾರೆ. ನನ್ನ ಗಂಡ ಯಾವುದೇ ತಪ್ಪು ಮಾಡಿಲ್ಲ. ಯಾಕಾಗಿ ಟಿವಿಯಲ್ಲೆಲ್ಲಾ ಆರೋಪಿ ಅಂತ ಬರ್ತಿದೆ ಗೊತ್ತಾಗ್ತಾ ಇಲ್ಲ' ಎಂದು ಆರೋಪಿ ಶಫೀಕ್ ಪತ್ನಿ ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಹೇಳಿದ್ದಾರೆ. 

 ಪ್ರವೀಣ್‌ ನೆಟ್ಟಾರು ಹತ್ಯೆ ಘಟನೆ ಹಿಂದೆ ಕೇರಳ ನಂಟು ಹೊಂದಿರುವ ಸಾಧ್ಯತೆ ಬಗ್ಗೆ ಪೊಲೀಸ್‌ ಇಲಾಖೆ ಪರಿಶೀಲನೆ ನಡೆಸುತ್ತಿದೆ. ವಾರದ ಹಿಂದೆ ಬೆಳ್ಳಾರೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ನಡೆದ ಕೇರಳ ಯುವಕ ಮಸೂದ್‌ ಹತ್ಯೆಗೆ ಪ್ರತೀಕಾರವಾಗಿ ಈ ಹತ್ಯೆ ನಡೆಸಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. 15 ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. 

Video Top Stories