Asianet Suvarna News Asianet Suvarna News
breaking news image

ಲೋಕಸಭೆ ಗೆಲ್ಲಲು I.N.D.I.A ತಂತ್ರಕ್ಕೆ ಕೇಸರಿ ಪಡೆ ರಣತಂತ್ರ: ಎಷ್ಟು ಸೀಟು ಗೆಲ್ಲುತ್ತೆ ಮೋದಿ ಪಾರ್ಟಿ..?

I.N.D.I.A. ಒಕ್ಕೂಟ ಉದ್ಭವ ಬೆನ್ನಲ್ಲೇ..ಮೆಗಾ ಲೋಕಸಭೆ ಸಮೀಕ್ಷೆ!
ಎಷ್ಟು ಸೀಟು ಗೆಲ್ಲುತ್ತೆ ಮೋದಿ ಪಾರ್ಟಿ,ಒಕ್ಕೂಟಕ್ಕೆ ಎಷ್ಟು ಸೀಟು..?
ಕರ್ನಾಟಕದಲ್ಲಿ ಬಿಜೆಪಿಗೆ ಎಷ್ಟು ಸೀಟು..?,ಕಾಂಗ್ರೆಸ್ ಕಿಂಗ್ ಆಗುತ್ತಾ..?

ಲೋಕಸಭೆ ಎಲೆಕ್ಷನ್‌ಗೆ ದಿನಗಣನೆ ಶುರುವಾಗಿದೆ. ಕರ್ನಾಟಕ ಎಲೆಕ್ಷನ್ ನಂತರ ಮೋದಿಯನ್ನು(Modi) ಮಣಿಸಲು I.N.D.I.A. ಒಕ್ಕೂಟ ಉದ್ಭವವಾಗಿದೆ. ಈ ಬೆನ್ನಲ್ಲೇ ಇಂಡಿಯಾ ಟಿವಿ ನಡೆಸಿದ ಲೋಕಸಭೆ ಚುನಾವಣೆಯ(Loksabha) ಸಮೀಕ್ಷೆ(Survey) ಮತ್ತೆ ಮೋದಿಯೇ ಪ್ರಧಾನಿ ಅಂತಿದೆ. ಜಗತ್ತೇ ಕಾಯುತ್ತಿರುವ ಭಾರತದ ಲೋಕಸಭೆ ಚುನಾವಣೆಗೆ ದಿನಗಣನೆ ಶುರುವಾಗಿದೆ. ಮುಂದಿನ ವರ್ಷ ಚುನಾವಣೆ ನಡೆಯಲಿದ್ದು, ಯಾರು ದೇಶದ ಪ್ರಧಾನಿಯಾಗ್ತಾರೆ ಅನ್ನೋ ಕುತೂಹಲ ಎಲ್ಲೆಡೆ ಮನೆ ಮಾಡಿದೆ. ಸದ್ಯ ನರೇಂದ್ರ ಮೋದಿಯವರು ಸತತವಾಗಿ 2ನೇ ಬಾರಿ ಪ್ರಧಾನಿಯಾಗಿ ಆಡಳಿತ ನಡೆಸ್ತಿದ್ದಾರೆ. ಮುಂಬರುವ ಲೋಕಸಭೆ ಚುನವಣೆಯಲ್ಲೂ ಬಿಜೆಪಿ(BJP) ಭರ್ಜರಿ ಗೆಲುವು ಸಾಧಿಸಿ 3ನೇ ಬಾರಿ ನರೇಂದ್ರ ಮೋದಿಯವರೇ ಇಂಡಿಯಾದ ಪ್ರಧಾನಿಯಾಗ್ತಾರೆ ಅನ್ನೋ ಕೂಗು ಕೇಳಿ ಬರ್ತಿದೆ. ಆದ್ರೆ ಈ ಬಾರಿ ಅದು ಅಷ್ಟು ಸುಲಭವಲ್ಲಾ ಅನ್ನೋ ಮಾತುಗಳೂ ಸಹ ಕೇಳಿ ಬರ್ತಿದೆ. ಅದಕ್ಕೆ ಕಾರಣ I.N.D.I.A. ಒಕ್ಕೂಟ.

ಇದನ್ನೂ ವೀಕ್ಷಿಸಿ:  ಬಿಜೆಪಿ-ಕಾಂಗ್ರೆಸ್ ಮಧ್ಯೆ ಗದ್ದುಗೆ ಗುದ್ದಾಟ: ಸಿಎಂ ಅಭ್ಯರ್ಥಿ ಹೆಸರು ಘೋಷಣೆಯೇ ಕೇಸರಿ ಪಡೆಗೆ ದೊಡ್ಡ ಸವಾಲ್‌

Video Top Stories