Big3 : ಕಲುಷಿತ ನೀರು ಸೇವನೆಯಿಂದ ಮೂರು ಸಾವು: ಅನಪುರದಲ್ಲಿ ಸ್ಮಶಾನ ಮೌನ

ಯಾದಗಿರಿ ಜಿಲ್ಲೆಯ ಗುರಮಠಕಲ್ ತಾಲೂಕಿನ ಅನಪುರ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಮೂರು ಜನರ ಸಾವನಪ್ಪಿದ್ದು, 80ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿದ್ದಾರೆ.

First Published Feb 24, 2023, 2:56 PM IST | Last Updated Feb 24, 2023, 3:19 PM IST

ಅನಪುರ ಗ್ರಾಮದಲ್ಲಿ ಕಲುಷಿತ ನೀರಿನ ಸೇವನೆಯಿಂದ ಭಯದ ವಾತಾವರಣ ಸೃಷ್ಟಿಯಾಗಿದೆ. ಇದೇ ಫೆ. 12 ರಂದು ಅನಪುರ ಗ್ರಾಮದಲ್ಲಿ ವಾಂತಿ-ಭೇದಿ ಪ್ರಕರಣಗಳು ಒಂದೊಂದಾಗಿ ಬೆಳಕಿಗೆ ಬಂದಿವೆ. ನಂತರ ಒಬ್ಬರ ನಂತರ ಇನ್ನೊಬ್ಬರಂತೆ ಬರೋಬ್ಬರಿ ಮೂರು ಜ‌ನ ಸಾವಿಗೀಡಾಗಿದ್ದಾರೆ. ಈ ವಾಂತಿ-ಭೇದಿಗೆ ಕಾರಣ ಅನಪುರ ಗ್ರಾಮದಲ್ಲಿ ಒಂದು ಓವರ್ ಹೆಡ್ ಟ್ಯಾಂಕರ್ ಇದೆ. ಇದು ಈಡೀ ಗ್ರಾಮಕ್ಕೆ ನೀರು ಸರಬರಾಜು ಮಾಡುತ್ತದೆ. ಓವರ್ ಹೆಡ್ ಟ್ಯಾಂಕ್ ನಿಂದ ಗ್ರಾಮದ ಜನರಿಗೆಲ್ಲಾ ಪೈಪ್ ಲೈನ್ ಮೂಲಕ ನೀರನ್ನು ಸಪ್ಲೈ ಮಾಡಲಾಗುತ್ತದೆ. ಈಗ ಅದೇ ಪೈಪ್ಲೈನ್ ಸೋರಿಕೆಯಿಂದ ಈ ದುರ್ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಜೊತೆಗೆ ಗ್ರಾಮದಲ್ಲಿ ಸ್ವಚ್ಛತೆಯಿಲ್ಲದೇ ಪೈಪ್ಲೈನ್'ನಲ್ಲಿ ಕೊಳಚೆ ನೀರು ಮಿಕ್ಸ್ ಆಗಿ ಘಟನೆ ಸಂಭವಿಸಿದೆ.ದಿನದಿಂದ ದಿನಕ್ಕೆ ಇಡೀ ಗ್ರಾಮದಲ್ಲಿ ಅಸ್ವಸ್ಥರ ಸಂಖ್ಯೆ ಏರಿಕೆಯಾಗುತ್ತಿದೆ. ಹೀಗಾಗಿ ಆರೋಗ್ಯ ಅಧಿಕಾರಿಗಳು ಆರೋಗ್ಯ ತಪಾಸಣೆ ಕೆಲಸ ಮಾಡ್ತಿದ್ದಾರೆ. ಇದರಿಂದ ಜನರಲ್ಲಿ ಆತಂಕ ಮನೆ ಮಾಡಿದೆ. ಅಮಾಯಕ ಮೂರು ಬಡ ಜೀವಗಳು ಬಲಿಯಾಗಿವೆ. ಇಲ್ಲಿ ತನಕ ಯಾರ ಮೇಲೂ ಕ್ರಮ ಆಗಿಲ್ಲ. ಮೃತ ಪಟ್ಟವರಿಗೆ ಪರಿಹಾರವು ಕೊಟ್ಟಿಲ್ಲ.

ಹಾಸನ ಕ್ಷೇತ್ರದ ಮುಖಂಡರ ಸಭೆ ಕರೆದ ಹೆಚ್‌ಡಿಕೆ: ಟಿಕೆಟ್‌ ಗೊಂದಲಕ್ಕೆ ...